ಚಿತ್ರದುರ್ಗ: ತಾಲೂಕಿನ ಸೀಬಾರದಲ್ಲಿ ಶ್ರೀ ಗುರುಪಾದ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ 65ನೇ ವರ್ಷದ ರಥೋತ್ಸವ ಭಾನುವಾರ ಜರುಗಿತು.
ಶ್ರೀ ಮುರುಘಾ ರಾಜೇಂದ್ರಮಠ ಪ್ರತಿವರ್ಷ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದೆ.
ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಜಿಪಂ ಸದಸ್ಯ ಆರ್.ನರಸಿಂಹರಾಜು, ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಸದಸ್ಯರಾದ ನಿಂಗಣ್ಣ, ಜಿ.ಎಂ.ಜಂಭುನಾಥ್, ವೆಂಕಟೇಶಪ್ಪ, ಗೌಸ್, ಹಿರಿಯ ಮುಖಂಡ ಎಸ್.ಕೆ.ಮಲ್ಲಪ್ಪ, ಯುವ ಮುಖಂಡ ಸಂದೀಪ ಗುಂಡಾರ್ಪಿ ಹಾಗೂ ಗುತ್ತಿನಾಡು, ಸೀಬಾರದ ಭಕ್ತರು ರಭಾಗವಹಿಸಿದ್ದರು.
ದನಗಳ ಜಾತ್ರೆ: ಸೀಬಾರದಲ್ಲಿ ಫೆ.23ಕ್ಕೆ ಆರಂಭವಾಗಿರುವ ದನಗಳ ಜಾತ್ರೆ ಮಾ.10ರ ವರೆಗೆ ನಡೆಯಲಿದೆ. ರಾಜ್ಯ, ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದಿಂದ ಹಳ್ಳಿಕಾರ್, ಅಮೃತಮಹಲ್, ಸಣ್ಣಮಲ್ಲಿಗೆ, ಗುಜುಮಾವು, ನಾಟಿ ಸೇರಿ ವಿವಿಧ ತಳಿಯ ರಾಸುಗಳು ಇಲ್ಲಿ ಸೇರಲಿವೆ ಎಂದು ಶ್ರೀಮಠ ತಿಳಿಸಿದೆ.