ವಾಲ್ಮೀಕಿ ಶ್ರೀ ಹೋರಾಟಕ್ಕೆ ಬೆಂಬಲ

ಚಿತ್ರದುರ್ಗ: ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವಂತೆ ವಾಲ್ಮೀಕಿ ಶ್ರೀಗಳು ಪಾದಯಾತ್ರೆ ಬೆಂಬಲಿಸಿ ಚಿತ್ರದುರ್ಗದಿಂದ ರಾಜಧಾನಿಯತ್ತ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ವಾಹನಗಳಲ್ಲಿ ಸೋಮವಾರ ತೆರಳಿದರು.

ಇದಕ್ಕೂ ಮುನ್ನ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು, ರಾಜನಹಳ್ಳಿ ಶ್ರೀ ಪ್ರಸನ್ನಾನಂದ ವಾಲ್ಮೀಕಿ ನೇತೃತ್ವದಲ್ಲಿ ಜೂನ್ 9ರಂದು ಆರಂಭವಾಗಿದ್ದ ಪಾದಯಾತ್ರೆ ಸೋಮವಾರ ಬೆಂಗಳೂರನ್ನು ತಲುಪಿದ್ದು, ಮಂಗಳವಾರ ಅಹೋರಾತ್ರಿ ಧರಣಿ ಸ್ವಾತೋಂತ್ರೊೃೀದ್ಯಾನದಲ್ಲಿ ನಡೆಸಲಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಶ್ರೀಗಳ ಹೋರಾಟ ಬೆಂಬಲಿಸಿ ಚಿತ್ರದುರ್ಗ ಸೇರಿ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಸಮುದಾಯದ ಜನ ತೆರಳುತ್ತಿದ್ದು, ಸರ್ಕಾರ ಕೂಡಲೇ ಎಸ್ಟಿ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲೇ 4ನೇ ಅತಿದೊಡ್ಡ ಸಮುದಾಯವಾಗಿರುವ ನಾಯಕ ಸಮಾಜಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾದ ಮೀಸಲು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ವಾಲ್ಮೀಕಿ ನಾಯಕರ ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಲಕ್ಷ್ಮೀಸಾಗರದ ರಾಜಣ್ಣ, ತಿಪ್ಪೇಸ್ವಾಮಿ, ಸಿದ್ದಪ್ಪ ಮತ್ತಿತರ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *