18.5 C
Bangalore
Tuesday, December 10, 2019

ಬರ ನಿರ್ಲಕ್ಷಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಗರಂ

Latest News

ಹಸಿವಿನ ಸೂಚ್ಯಂಕದಲ್ಲಿ 102ನೇ ಸ್ಥಾನದಲ್ಲಿ ಭಾರತ

 ಮೈಸೂರು: ವಿಶ್ವದ ಹಸಿವಿನ ಪ್ರಮಾಣದ ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿರುವುದು ಆಘಾತಕಾರಿ ಬೆಳವಣಿಗೆ ಎಂದು ಇಂಫಾಲದ ಕೇಂದ್ರೀಯ ಕೃಷಿ ವಿವಿ ಕುಲಪತಿ ಡಾ.ಎಸ್.ಅಯ್ಯಪ್ಪನ್...

ಕಡಕೊಳ ಟೋಲ್ ಬಳಿ ಗ್ರಾಮಸ್ಥರ ಪ್ರತಿಭಟನೆ

ಮೈಸೂರು: ನಂಜನಗೂಡು ರಸ್ತೆಯ ಕಡಕೊಳ ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಗ್ರಾಮಸ್ಥರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಟೋಲ್‌ಗೇಟ್ ಬಳಿ ಪ್ರತಿಭಟನೆ...

ಕೈ ಓಟದಲ್ಲಿ ನಡೆಯದ ಕಮಲದ ಆಟ

ಮೈಸೂರು: ಕಮಲ ಒಮ್ಮೆಯೂ ಮುನ್ನಡೆಗೆ ಬರಲಿಲ್ಲ. ಕೈನ ನಾಗಾಲೋಟ ಕೊನೆಯವರೆಗೂ ನಿಲ್ಲಲಿಲ್ಲ....! ಹುಣಸೂರು ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಹುಣಸೂರು...

ಬೆಲಗೂರಲ್ಲಿ ವಿಜೃಂಭಣೆಯ ರಥೋತ್ಸವ

ಹೊಸದುರ್ಗ: ಹನುಮ ಜಯಂತಿಯ ಅಂಗವಾಗಿ ತಾಲೂಕಿನ ಬೆಲಗೂರು ಗ್ರಾಮದ ಶ್ರೀ ಮಾರುತಿ ಪೀಠದಲ್ಲಿ ಸೋಮವಾರ ಶ್ರೀ ವೀರಪ್ರತಾಪ ಅಂಜನೇಯ ಸ್ವಾಮಿ ಹಾಗೂ ಲಕ್ಷ್ಮೀ...

ನಗರದಲ್ಲಿ ಅದ್ದೂರಿ ಹನುಮೋತ್ಸವ

ಮೈಸೂರು: ಹನುಮ ಜಂಯಂತಿ ಅಂಗವಾಗಿ ವೇದಮಂತ್ರ ಪಠಣದ ನಡುವೆ ಜೈ ಶ್ರೀರಾಮ್, ಜೈ ಬಜರಂಗ ಬಲಿ ಘೋಷಣೆಯೊಂದಿಗೆ ನಗರದಲ್ಲಿ ಸೋಮವಾರ ಆಂಜನೇಯಸ್ವಾಮಿ ಮೂರ್ತಿ...

ಚಿತ್ರದುರ್ಗ: ಚಿತ್ರದುರ್ಗದ ಬರಪರಿಸ್ಥಿತಿ ಕಂಡು ಮರುಗಿದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಜಿಲ್ಲೆಯಲ್ಲಿ ಬರ ನಿರ್ವಹಣೆ ನಿರ್ಲಕ್ಷಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಿರಿಯೂರು, ಚಳ್ಳಕೆರೆ ತಾಲೂಕುಗಳಲ್ಲಿ ಭಾನುವಾರ ಬರ ಪರಿಹಾರ ಕಾಮಗಾರಿ ಪರಿಶೀಲಿಸಿ, ಜಿಲ್ಲೆಯಲ್ಲಿ ಶೇ.ನೂರರಷ್ಟು ಬೆಳೆ ಹಾನಿಯಾಗಿದ್ದು ರೈತರ ಬದುಕು ಮೂರಾಬಟ್ಟೆಯಾಗಿದೆ ಎಂದರು.

ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ವೇಳೆಯೂ, ಈ ವಿಷಯ ಪ್ರಸ್ತಾಪಿಸಿ ತಾವು ಪ್ರವಾಸ ಕೈಗೊಂಡ ಎಂಟು ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ ಎಂದರು.

ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? 22 ದಿನ ಕಳೆದರೂ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಏಕೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ರೈತರ ಬಗ್ಗೆ ಏಕಿಷ್ಟು ನಿಷ್ಕಾಳಜಿ ಎಂದು ಸಚಿವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ತೆಂಗು, ಅಡಕೆ, ದಾಳಿಂಬೆ ಸೇರಿ ಕೃಷಿ, ತೋಟಗಾರಿಕೆ ಬೆಳೆಗಳು ಶೇ.100 ನಾಶವಾಗಿವೆ. ಭಿಕ್ಷೆ ಎಂಬಂತೆ ತೆಂಗಿನ ಗಿಡಕ್ಕೆ 400 ರೂ. ಪರಿಹಾರ ನಿಗದಿ ಮಾಡಲಾಗಿದೆ. ಇದನ್ನು ಕನಿಷ್ಠ 2 ಸಾವಿರ ರೂ.ಗೆ ಏರಿಸುವಂತೆ ಆಗ್ರಹಿಸಿದರು. ನರೇಗಾದಲ್ಲಿ ಅವ್ಯವಹಾರವಾದರೆ ತಲೆ ಕೊಡುವವರು ಅಧಿಕಾರಿಗಳೇ ಎಂದು ಎಚ್ಚರಿಸಿದರು.

ಬೇಸಿಗೆ ಬರುತ್ತಿದ್ದು ಜಾನುವಾರುಗಳಿಗೆ ಮೇವು, ನೀರಿಗೆ ವ್ಯವಸ್ಥೆ ಮಾಡಿ. ಕೆರೆಗಳ ಹೂಳೆತ್ತಿ ಎಂದರು. ಜಿಲ್ಲೆಗೆ ಮಂಜೂರಾದ ಮೆಡಿಕಲ್ ಕಾಲೇಜು ಆರಂಭಕ್ಕೆ ಹಾಗೂ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ನಿರಾಸಕ್ತಿ ಹೊಂದಿದೆ ಎಂದು ದೂರಿದರು.

ಸಾಲ ಮನ್ನಾ ವಿಳಂಬಕ್ಕೆ ಯಡಿಯೂರಪ್ಪ ಅತೃಪ್ತಿ: ವಾಣಿಜ್ಯ ಬ್ಯಾಂಕ್‌ಗಳ 1123.89 ಕೋಟಿ ರೂ. ಹಾಗೂ ಸಹಕಾರಿ ಬ್ಯಾಂಕ್‌ಗಳ 170.36 ಕೋಟಿ ರೂ. ಸಾಲ ಮನ್ನಾ ಪ್ರಕ್ರಿಯೆ ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಇನ್‌ಫುಟ್ ಸಬ್ಸಿಡಿ, ಬೆಳೆ ನಷ್ಟ ಪರಿಹಾರಕ್ಕೆ 302 ಕೋಟಿ ರೂ. ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು. ಕಳೆದ ಸಾಲಿನಲ್ಲಿ 198 ಕೋಟಿ ರೂ. ಬೆಳೆ ವಿಮೆ ಕಂತು ಕಟ್ಟಿದ್ದ ರೈತರಿಗೆ 22 ಕೋಟಿ ರೂ. ಪರಿಹಾರ ಬಂದಿದೆ. ಈಬಾರಿ 38 ಸಾವಿರ ರೈತರು ಮಾತ್ರ ವಿಮೆ ಪಾವತಿಸಿದ್ದಾರೆ ಎಂದು ಶಾಸಕ ಚಂದ್ರಪ್ಪ ಹೇಳಿದರು. ಕಳೆದ ಬಾರಿ ನೀರು ಪೂರೈಸಿದ ಟ್ಯಾಂಕರ್ ಮಾಲೀಕರಿಗೆ ಬಾಕಿ ಹಣ ಪಾವತಿಸಿಲ್ಲವೆಂದು ಶಾಸಕಿ ಪೂರ್ಣಿಮಾ ಅಸಮಾಧಾನ ವ್ಯಕ್ತಪಡಿಸಿದರು.

Stay connected

278,741FansLike
587FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...