ಚಿತ್ರದುರ್ಗ: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ಕಾಂಗ್ರೆಸ್ ವಿರೋಧಿಸಿದೆ. ಬಹು ರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರು ಉದ್ದೇಶಿತ ತಿದ್ದುಪಡಿ ಹಿಂದಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣ ಯಾದವ್ ಆರೋಪಿಸಿದ್ದಾರೆ.
ಉದ್ದೇಶಿತ ತಿದ್ದುಪಡಿ ಕೈ ಬಿಡಬೇಕು, ಗ್ರಾಪಂಗಳಿಗೆ ನಾಮ ನಿರ್ದೇಶನಕ್ಕೆ ಮುಂದಾಗದೇ ಈಗಿರುವ ಸದಸ್ಯರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.