More

    ಆಂಜನೇಯ ದೇಗುಲ ಜೀರ್ಣೋದ್ಧಾರಕ್ಕೆ ನಿರ್ಧಾರ

    ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಪುರಾತನ ಕೋಡಿ ಆಂಜನೇಯ ದೇವಾಲಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಚಂದ್ರವಳ್ಳಿ ವಾಯು ವಿಹಾರ ಬಳಗದ ಸದಸ್ಯರು ಹಾಗೂ ಕೋಡಿ ಆಂಜನೇಯ ಸ್ವಾಮಿ ಭಕ್ತರು ಭಾನುವಾರ ಸಭೆ ನಡೆಸಿದರು.

    ಈ ಗುಡಿ ಶಿಥಿಲಾವಸ್ಥೆಗೆ ತಲುಪಿ ಬೀಳುವ ಹಂತದಲ್ಲಿದ್ದು, ಸದ್ಯಕ್ಕೆ ಇಲ್ಲಿ ಸ್ಥಳೀಯರಿಂದ ಪೂಜೆ ನಡೆಯುತ್ತಿದೆ. ಇಲ್ಲಿ ಸುಂದರ ದೇವಾಲಯ ನಿರ್ಮಿಸಲು ಹಾಗೂ ಪ್ರವಾಸಿ ತಾಣವಾದ ಚಂದ್ರವಳ್ಳಿ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಮುಖಂಡರಾದ ತಿಮ್ಮಣ್ಣ, ಶಂಕರ್, ಮುರುಗೇಶ್, ಆನಂದ್ ಸಹಿತ ವಾಯು ವಿಹಾರ ಬಳಗದ ಸದಸ್ಯರು ಹಾಗೂ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts