ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ

ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಲ್ಲಿ ಭಾನುವಾರ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ ಇಟ್ಟು ಕುಡಿವ ನೀರಿನ ವ್ಯವಸ್ಥೆ ಮಾಡಲಾಯಿತು.

ಸಂಘದ ಕಾರ್ಯದರ್ಶಿ ಸುರೇಶ್‌ಬಾಬು ಮಾತನಾಡಿ, ಮಳೆಯಿಲ್ಲದೆ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಡುವುದನ್ನು ಕಂಡಿದ್ದೇವೆ. ಆದ್ದರಿಂದ ವಾರ್ಡ್‌ನಲ್ಲಿ ಚಿಕ್ಕ ಚಿಕ್ಕ ತೊಟ್ಟಿಗಳನ್ನಿಟ್ಟು ನೀರು ತುಂಬಿಸಲಾಗಿದೆ ಎಂದರು.

ಸಂಘದ ಅಧ್ಯಕ್ಷ ಮುರುಗೇಶ್ ಗೌಡ್ರು, ರಮಾದೇವಿ, ಎಚ್.ವಿ.ಕೃಷ್ಣಪ್ಪ, ಶೈಲಾ, ಗೀತಾ, ಕಲಾ ಇತರರಿದ್ದರು.

Leave a Reply

Your email address will not be published. Required fields are marked *