ಚಿತ್ರದುರ್ಗ: ನಗರದ ಎಬಿವಿಪಿ ಕಾರ್ಯಕರ್ತರು ಕಾರ್ಗಿಲ್ ವಿಜಯೋತ್ಸವ ವಿಜಯ ದಿವಸ್ ಅಂಗವಾಗಿ ನೂರು ಮೀಟರ್ ಉದ್ದ, ಆರು ಅಡಿ ಅಗಲದ ರಾಷ್ಟ್ರ ಧ್ವಜದೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು.
ನಗರದ ಕಲಾ ಕಾಲೇಜಿಂದ ನೂರಾರು ವಿದ್ಯಾರ್ಥಿಗಳಿದ್ದ ಈ ಮೆರವಣಿಗೆ ವಿವಿಧ ರಸ್ತೆಗಳನ್ನು ಹಾದು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾಪನ ಗೊಂಡಿತು.
ಈ ವೇಳೆ ವಿದ್ಯಾರ್ಥಿಗಳು ಹುತಾತ್ಮ ಯೋಧರು, ದೇಶದ ಪರ ಜಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಎಬಿವಿಪಿ ನಗರ ಸಮಿತಿ ಕಾರ್ಯದರ್ಶಿ ಸತೀಶ್ ಭಗತ್, ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಕೊಪ್ಪ, ಚಂದ್ರಶೇಖರ್, ಭರತ್, ಆದರ್ಶ ಮೊದಲಾದ ಪ್ರಮುಖರು ಪಾಲ್ಗೊಂಡಿದ್ದರು.
ಆನೆಬಾಗಿಲು ಬಳಿ ಆಚರಣೆ: ನಗರದ ಆನೆಬಾಗಿಲು ಬಳಿ ಶುಕ್ರವಾರ ಬೆಳಗ್ಗೆ ಹಿಂದು ಯುವಸೇನೆ ಕಾರ್ಯಕರ್ತರು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಸಮಾಜ ಸೇವಕ ಎ.ಸೀತಾರಾಮ್, ಹಿಂದು ಯುವಸೇನೆ ಜಿಲ್ಲಾಧ್ಯಕ್ಷ ಎನ್.ಇ.ನಾಗರಾಜ್, ಸುರೇಶ್ರಾವ್ ಜಾದವ್ ಮತ್ತಿತರರು ಇದ್ದರು.