ನೀರಾವರಿ ವಿಷಯ ಚರ್ಚೆಗೆ ಸಿದ್ಧತೆ

ಚಿತ್ರದುರ್ಗ: ಶ್ರಾವಣ ಮಾಸದಲ್ಲಿ ಹೊಳಲ್ಕೆರೆ ತಾಲೂಕಿನ ಗ್ರಾಮಗಳಲ್ಲಿ 30 ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ನಗರದ ಮುರುಘಾ ಮಠಕ್ಕೆ ಭಾನುವಾರ ಆಗಮಿಸಿದ್ದ ಹೊಳಲ್ಕೆರೆ ಭಕ್ತರ ವಿಶೇಷ ಚಿಂತನಗೋಷ್ಠಿಯ ಅಪೇಕ್ಷೆ ಆಲಿಸಿ ಮಾತನಾಡಿ, ಶ್ರೀಮಠದಿಂದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದು ಇನ್ನಿತರೆ ಮಠಗಳಿಗೆ ಪ್ರೇರಣೆ ಸ್ಫೂರ್ತಿ ನೀಡುತ್ತಿದೆ. ಇದು ನಮ್ಮ ಸಮಕಾಲಿನ ಜವಾಬ್ದಾರಿಯೂ ಆಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ನಡೆಸುವುದರಿಂದ ಜನರನ್ನು ಸಾಮಾಜಿಕ, ಧಾರ್ಮಿಕ ಹಾಗೂ ಸೈದ್ಧಾಂತಿಕವಾಗಿ ಜಾಗೃತಿ ಗೊಳಿಸಿದಂತಾಗುತ್ತದೆ. ಶರಣ ಸಂಸ್ಕೃತಿ ಉತ್ಸವದಲ್ಲಿ ನೀರಾವರಿ ಬಗ್ಗೆ ವಿಶೇಷ ಚರ್ಚೆ ಆಯೋಜಿಸಲಾಗುತ್ತದೆ. ಇದಕ್ಕೆ ಕೇಂದ್ರ, ರಾಜ್ಯ ಸಚಿವರು, ಇಲಾಖೆ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ರೈತರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಹಳ್ಳಿಗಳಲ್ಲಿ ಶ್ರಾವಣ ಗೋಷ್ಟಿ ನಡೆಸಲು ನನ್ನ ಸಂಪೂರ್ಣ ಸಹಕಾರವಿದೆ. ಸರದಿಯಂತೆ ಗ್ರಾಮೀಣರು ಸಿದ್ಧತೆ ಮಾಡಿಕೊಳ್ಳಬೇಕು. ಕೊನೆ ಕಾರ್ಯಕ್ರಮವನ್ನು ಹೊಳಲ್ಕೆರೆ ಪಟ್ಟಣದಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಡಾ.ನಾಗರಾಜ ಸಜ್ಜನ್, ಭಕ್ತರಾದ ಗಂಗಮ್ಮ, ಚಿತ್ತಪ್ಪ, ನೆಲ್ಲಿಕಟ್ಟಿ ಲವಕುಮಾರ್, ಮಂಜುನಾಥ್, ಚಂದ್ರಶೇಖರ್, ರಂಗಪ್ಪ, ಮಂಜುನಾಥ, ರುದ್ರಪ್ಪ, ರಾಜಪ್ಪ, ರಾಜಣ್ಣ ಇತರರಿದ್ದರು.

Leave a Reply

Your email address will not be published. Required fields are marked *