More

    ಗೃಹರಕ್ಷಕ ದಳ ಪೊಲೀಸ್ ಇಲಾಖೆ ಅವಿಭಾಜ್ಯ ಅಂಗ

    ಚಿತ್ರದುರ್ಗ: ಗೃಹರಕ್ಷಕ ದಳ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವೆಂದು ಎಸ್ಪಿ ಡಾ.ಕೆ.ಅರುಣ್ ಹೇಳಿದರು.

    ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರ, ಜಿಲ್ಲಾ ಗೃಹರಕ್ಷದ ದಳ ಗೃಹ ರಕ್ಷಕರ 10 ದಿನಗಳ ವಾರ್ಷಿಕ ಮೂಲ ತರಬೇತಿ ಶಿಬಿರ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

    ನೀವು ನಮ್ಮ ಇಲಾಖೆ ಅವಿಭಾಜ್ಯ ಅಂಗವೇ ಆಗಿದ್ದು, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ವಿಶ್ವಾಸ, ಇಲಾಖೆ ಹಿರಿಯರಿಗೆ ವಿಧೇಯರಾಗಿ ಕೆಲಸ ಮಾಡಿ. ನೊಂದವರಿಗೆ ನ್ಯಾಯ ಕೊಡುವ ಹಾಗೂ ಅವರನ್ನು ರಕ್ಷಿಸುವ ಅವಕಾಶ ಪೊಲೀಸರು, ಗೃಹರಕ್ಷಕದಳದವರಿಗೆ ಲಭಿಸಿದೆ. ಇದು ನಮ್ಮ ಭಾಗ್ಯ ಎಂದು ಭಾವಿಸಿ ಉತ್ತಮವಾಗಿ ಕೆಲಸ ಮಾಡುವಂತೆ ಸೂಚಿಸಿದರು.

    ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಮಾತನಾಡಿ, ತರಬೇತಿಯನ್ನು ಕರ್ತವ್ಯಕ್ಕೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಉಜ್ವಲ ಭವಿಷ್ಯ ಸಾಧ್ಯ. ಸಿಬ್ಬಂದಿಗೆ ಇನ್ನು ಹೆಚ್ಚಿನ ತರಬೇತಿಗಳನ್ನು ನೀಡಲಾಗುವುದು. ಗೃಹ ರಕ್ಷಕ ದಳದವರಿಗೆ ಗೌರವ ಸಿಗದೆಂಬ ಕೀಳರಿಮೆ ಬೇಡ ಎಂದರು.

    ನಾವು ಕೂಡ ಒಬ್ಬ ಪೊಲೀಸ್ ಎಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ವೈಯಕ್ತಿಕ ಕಾರಣಗಳನ್ನು ಹೇಳಿ ಕರ್ತವ್ಯದಿಂದ ಹಿಂದೆ ಸರಿಯುವ ಗುಣ ಬೆಳೆಸಿಕೊಳ್ಳಬೇಡಿ. ಬಂದೋಬಸ್ತ್ ಗೆ ಖುಷಿಯಿಂದ ಹಾಜರಾಗಿ ಎಂದು ತಿಳೀಸಿದರು.

    ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ ಮಾತನಾಡಿದರು. ಕ್ಯಾಂಪ್ ಕಮಾಂಡೆಂಟ್‌ಗಳಾದ ಸಿದ್ದೇಶ್, ಎಚ್.ಆರ್.ದೇವರಾಜ್, ಪಿಐಗಳಾದ ಪ್ರಕಾಶ್ ಹಾಗೂ ನಯೀಂ ಅಹಮ್ಮದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts