More

    PHOTOS | ನೇಗಿಲಯೋಗಿ ರೈತರಿಗೆ ಸಮರ್ಪಿತ ಚಿತ್ರ ಸಂತೆಗೆ ಭಾರಿ ಜನಸ್ಪಂದನೆ

    ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರ ಕೃಪಾ ರಸ್ತೆಯಲ್ಲಿ ಆಯೋಜಿಸಿರುವ 17ನೇ ಚಿತ್ರಸಂತೆಗೆ ಭಾನುವಾರ ಭಾರಿ ಜನಸ್ಪಂದನೆ ಸಿಕ್ಕಿದ್ದು, ಗಮನಸೆಳೆದಿದೆ. ಈ ಬಾರಿಯ ಚಿತ್ರಸಂತೆ ‘ನೇಗಿಲಯೋಗಿ ರೈತರಿಗೆ’ ಸಮರ್ಪಣೆಗೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಕೊಟ್ಟಿದ್ದಾರೆ. ಪ್ರದರ್ಶನ ರಾತ್ರಿ 8 ಗಂಟೆ ತನಕ ಮುಂದುವರಿಯಲಿದೆ. ಗಾಂಧಿಭವನ, ಕ್ರೆಸೆಂಟ್ ರಸ್ತೆ, ಚಿತ್ರಕಲಾ ಪರಿಷತ್ ರಸ್ತೆಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.

    ರೈತಗೀತೆಯಲ್ಲಿನ ‘ನೇಗಿಲ ಕುಳದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎಂಬ ವಾಕ್ಯ ಚಿತ್ರಸಂತೆಯ ಧ್ಯೇಯವಾಕ್ಯವಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು ಎತ್ತಿನಗಾಡಿ ಮಾದರಿಯಲ್ಲಿ ನಿರ್ವಿುಸಲಾಗಿದೆ. ನೇಗಿಲ ಬೃಹತ್ ಪ್ರತಿಕೃತಿ ಪ್ರದರ್ಶಿಸಲಾಗಿದೆ. ಜಲವರ್ಣ, ತೈಲವರ್ಣ ಚಿತ್ರಗಳು, ಶಿಲ್ಪಕಲೆ ಸೇರಿ ಹಲವು ಪ್ರಕಾರದ ಚಿತ್ರಕಲೆಗಳು ಪ್ರದರ್ಶನಗೊಳ್ಳುತ್ತಿವೆ.

    ಚಿತ್ರಸಂತೆಯ ಸಂಭ್ರಮ, ಸಡಗರವನ್ನು ವಿಜಯವಾಣಿ ಛಾಯಾಗ್ರಾಹಕ ಸುಧೀಂದ್ರ ಶ್ರೀರಂಗರಾಜು ಸೆರೆಹಿಡಿದ್ದಿದು ಆಯ್ದ ಚಿತ್ರಗಳು ಇಲ್ಲಿವೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts