Sunitha : ಇಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮೆಗಾಸ್ಟಾರ್ ಚಿರಂಜೀವಿ ಮತ್ತು ಬಾಲಿವುಡ್ ನಟ ಮಾಧವನ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇನ್ನೂ ಈ ಬಗ್ಗೆ ನಟ ಚಿರಂಜೀವಿ ಇಬ್ಬರು ಗಗನಯಾತ್ರಿಗಳಿಗೆ ನಿಜವಾದ ಬ್ಲೂ ಬ್ಲಾಕ್ ಬಸ್ಟರ್ ಎಂದು ಕರೆದಿದ್ದಾರೆ.
ಬಾಹ್ಯಾಕಾಶದಿಂದ ಮರಳಿ ಬಂದ ಇಬ್ಬರು ಗಗನಯಾತ್ರಿಗಳನ್ನು ಸ್ವಾಗತಿಸಲು ಚಿರಂಜೀವಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೀಗೆ ಬರೆದಿದ್ದಾರೆ. “ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತಮ್ಮಿಬ್ಬರಿಗೂ ಭೂಮಿಗೆ ಸ್ವಾಗತ. ಐತಿಹಾಸಿಕ ಮತ್ತು ವೀರತ್ವದ ಮನೆಗೆ ನೀವು ಬಂದಿದ್ದೀರ. ಎಂಟು ದಿನಗಳ ಕಾಲ ಬಾಹ್ಯಾಕಾಶಕ್ಕೆ ಹೋಗಿ 286 ದಿನಗಳ ನಂತರ ಭೂಮಿಯ ಸುತ್ತ 4577 ಸುತ್ತುಗಳ ನಂತರ ಹಿಂತಿರುಗಿದ ನಿಮ್ಮ ಕಥೆಯು ಅಪ್ರತಿಮವಾಗಿದೆ. ಎಲ್ಲರನ್ನೂ ದಿಗ್ಭ್ರಮೆಗೊಳಿಸುವ ಹಾಗೂ ನಂಬಲಾಗದಷ್ಟು ಶ್ರಮ ವಹಿಸಿ ಮಾಡಿದ ಸಾಹಸ ನಿಮ್ಮದು. ನೀವು ನಿಜವಾದ ಬ್ಲೂ ಬ್ಲಾಕ್ ಬಸ್ಟರ್. ನಾನು ನಿಮಗೆ ಹೆಚ್ಚಿನ ಶಕ್ತಿಯನ್ನು ಬಯಸುತ್ತೇನೆ. ಸುನಿತಾ ವಿಲಿಯಮ್ಸ್ರನ್ನು ಮರಳಿ ತಂದಿದ್ದಕ್ಕಾಗಿ #SpaceXDragon, #Crew9 ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಇನ್ನೂ ಇದೇ ವಿಚಾರವಾಗಿ ನಟ ಮಾಧವನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಗಗನಯಾತ್ರಿಗಳಿಗೆ ಸ್ವಾಗತ ಸಂದೇಶವನ್ನು ಬರೆದಿದ್ದಾರೆ. “ನಮ್ಮ ಪ್ರೀತಿಯ ಸುನೀತಾ ವಿಲಿಯಮ್ಸ್ ಗೆ ಮತ್ತೆ ಭೂಮಿಗೆ ಸ್ವಾಗತ. ನಮ್ಮ ಪ್ರಾರ್ಥನೆಗಳಿಗೆ ಈಗ ಉತ್ತರ ಸಿಕ್ಕಿದೆ. ನೀವು ಸುರಕ್ಷಿತವಾಗಿ ಮತ್ತು ನಗುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗ್ತಾ ಇದೆ. ಬಾಹ್ಯಾಕಾಶದಲ್ಲಿ 260 ಕ್ಕೂ ಹೆಚ್ಚು ಅನಿಶ್ಚಿತ ದಿನಗಳ ನಂತರ ಇದೆಲ್ಲವೂ ದೇವರ ಕೃಪೆ ಮತ್ತು ಲಕ್ಷಾಂತರ ಪ್ರಾರ್ಥಿಸುವ ಆತ್ಮಗಳ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ ಎಂದು ಮಾಧವನ್ ಹರ್ಷ ವ್ಯಕ್ತ ಪಡಿಸಿದ್ದಾರೆ.