ಬಹುಭಾಷಾ ನಟಿ ನಯನತಾರಾ ಏಳು ಸಿನಿಮಾಗಳಲ್ಲಿ ಸದ್ಯ ಬಿಜಿಯಾಗಿದ್ದಾರೆ. ಕನ್ನಡದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೌನಪ್ಸ್’ ಸೇರಿ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಿಜಿಯ ಮಧ್ಯೆಯೇ ಅವರು ತೆಲುಗಿನ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು, ನಯನತಾರಾ ಟಾಲಿವುಡ್ ಸ್ಟಾರ್ ಚಿರಂಜೀವಿ ಅಭಿನಯದ 157ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷ ವಿಡಿಯೋ ಮೂಲಕ ನಟಿಯನ್ನು ಚಿತ್ರತಂಡ ಸ್ವಾಗತಿಸಿದೆ. ವಿಡಿಯೋದಲ್ಲಿ ನಯನತಾರಾ, ಕ್ಯಾರಾವಾನ್‌ನಲ್ಲಿ ತೆಲುಗು ಮಾತನಾಡಿದ್ದಕ್ಕೆ ಇನ್ನೊಬ್ಬರು, ನೀವು ಏನಾದರೂ ತೆಲುಗಿನಲ್ಲಿ ಅಭಿನಯಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ನಟಿ, ‘ಎಸ್’ ಎಂದಿದ್ದಾರೆ. ಮುಂದೆ ಕಾರಿನಲ್ಲಿ ಹೋಗುವಾಗ ಚಿರಂಜೀವಿ ಅಭಿಯನದ ಸಿನಿಮಾ ಹಾಡಿನ ಸೌಂಡ್ ಜಾಸ್ತಿ ಮಾಡುವಂತೆ ಕೇಳಿದಾಗ ಚಿರಂಜೀವಿ ಸಿನಿಮಾನಾ ಎಂಬುದಕ್ಕೂ ‘ರೈಟ್’ ಎನ್ನುತ್ತಾರೆ. ಈ ವಿಶೇಷ ವಿಡಿಯೋ ನಿರೂಪಣೆಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯಿಸಿದ್ದಾರೆ. ಚಿರಂಜೀವಿ ಹಾಗೂ ನಯನತಾರಾ ಈ ಚಿತ್ರದ ಮೂಲಕ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ. ಈ ಹಿಂದೆ ‘ಸೈ ರಾ ನರಸಿಂಹ ರೆಡ್ಡಿ (2019) ಹಾಗೂ ‘ಗಾಡ್‌ಫಾದರ್’ (2022) ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಸಣ್ಣ ಗ್ಯಾಪ್‌ನ ಬಳಿಕ ನಯನತಾರಾ ಮತ್ತೆ ಟಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ. ಚಿರಂಜೀವಿ 157ನೇ ಚಿತ್ರವನ್ನು ‘ಸಂಕ್ರಾಂತಿಕಿ ವಸ್ತುನ್ನಾಂ’ ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯದಲ್ಲಿ ಶೂಟಿಂಗ್ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. 2026ರ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಲಿದೆ. –ಏಜೆನ್ಸೀಸ್
