ಚೀನಾದ ಯುವಕರಿಗೆ ಭಾರತದ ಸಿನಿಮಾ ನೋಡಲು, ಯೋಗ ಮಾಡಲು ಇಷ್ಟ; ಜತೆಗೆ ಆ ವಸ್ತು ಇನ್ನೂ ಇಷ್ಟ

ನವದೆಹಲಿ: ಚೀನಾದ ಯುವಜನರು ಭಾರತದ ಮೂರು ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಭಾರತದ ಚೀನಾ ರಾಯಬಾರಿ ಲುವೊ ಝಾಹೋಯಿಯಿ ಹೇಳಿದ್ದಾರೆ.

ನಮ್ಮ ಯುವರಿಕರಿಗೆ ಬಾಲಿವುಡ್​ ಸಿನಿಮಾ ನೋಡುವುದು ಎಂದರೆ ತುಂಬಾ ಇಷ್ಟ. ಅದರ ಜತೆಗೆ ಯೋಗ ಮಾಡುವುದೆಂದರೆ ಬಲು ಪ್ರೀತಿ. ಇನ್ನೊಂದು, ಡಾರ್ಜಿಲಿಂಗ್​​ ಟೀ ಕುಡಿಯುವುದೂ ಎಂದರೆ ಎಲ್ಲಿಲ್ಲದ ಪ್ರೀತಿ ಎಂದು ಲುವೊ ಝಾಹೋಯಿಯಿ ಹೇಳಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ ಚೀನಾ-ಭಾರತ ಯುವ ಸಂಭಾಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಈ ವಿಚಾರ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನಡುವೆ ನಡೆದ ಅನೌಪಚಾರಿಕ ಶೃಂಗ ಸಭೆ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದ ವೃದ್ಧಿಯಲ್ಲಿ ಮೈಲುಗಲ್ಲು ಎನಿಸಿಕೊಂಡಿದೆ ಎಂದೂ ಅವರು ತಿಳಿಸಿದರು.

ಅಲ್ಲದೆ, ಭಾರತ ವಿದ್ಯಾರ್ಥಿಗಳು ಚೀನಾದಲ್ಲೂ, ಚೀನಾದ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ಪ್ರಕ್ರಿಯೆಯನ್ನು ತಾವು ಪ್ರೋತ್ಸಾಹಿಸುವುದಾಗಿಯೂ ಅವರು ತಿಳಿಸಿದರು.