ಚಿಂಚೋಳಿ: ಸರ್ಕಾರದ ಮಾರ್ಗಸೂಚಿ ಅನ್ವಯ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ನಿರ್ಲಕ್ಷÈ ವಹಿಸಿದರೆ ಉನ್ನತ ಅಧಿಕಾರಿಗಳ ಆದೇಶದಂತೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಭೆಯಲ್ಲಿ ಮಾತನಾಡಿ, ಇಲ್ಲಿವರೆಗೆ ಮನಸ್ಸಿಗೆ ಬಂದAತೆ ವರ್ತಿಸಿದ್ದೀರಿ, ಇನ್ನು ಮುಂದೆ ಸಹಿಸಲು ಆಗುವುದಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಜ್ಯದಲ್ಲಿಯೇ ಅತೀ ಹೆಚ್ಚು ಮನೆಗಳು ತಾಲೂಕಿಗೆ ಮಂಜೂರಾಗಿದ್ದವು. ಆದರೆ 1825 ಫಲಾನುಭವಿಗಳಿಗೆ ಕಟ್ಟಡ ಪರವಾನಿಗೆಯೇ ಸಿಕ್ಕಿಲ್ಲ. ಇದೀಗ 90 ದಿನಗಳಲ್ಲಿ ಮನೆ ನಿರ್ಮಿಸಿಕೊಳ್ಳದಿದ್ದರೆ ಆಯ್ಕೆ ಪಟ್ಟಿ ರದ್ದು ಮಾಡುವುದಾಗಿ ನಿಗಮಗಳಿಂದ ನೋಟಿಸ್ ಬಂದಿದೆ. ಇದಕ್ಕೆಲ್ಲ ಯಾರು ಕಾರಣ ? ಎಂದು ಪಿಡಿಒಗಳ ವಿರುದ್ಧ ಕಿಡಿಕಾರಿದರು.
ಜಲಜೀವನ ಮಿಷನ್ ಕಾಮಗಾರಿಯನ್ನು ತಾಪಂ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಗುಣಮಟ್ಟದಿಂದ ಕೂಡಿದ್ದಲ್ಲಿ ಮಾತ್ರ ಗ್ರಾಪಂ ಸುಪರ್ದಿಗೆ ಪಡೆಯುವಂತೆ ಈಗಾಗಲೇ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಆದರೂ ಪಿಡಿಒಗಳು ನನ್ನ ಗಮನಕ್ಕೆ ತರದೆ ಸುಪರ್ದಿಗೆ ಪಡೆಯುತ್ತಿರುವುದು ಕೂಡಲೇ ನಿಲ್ಲಿಸಬೇಕು. ಯಾವುದೇ ಮಾಹಿತಿ ನೀಡದೆ ಜೆಜೆಎಂ ಕಾಮಗಾರಿ ಹಸ್ತಾಂತರಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನರೇಗಾ ಯೋಜನೆಯಲ್ಲಿ ಮೃತಪಟ್ಟವರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಬಿಸಿಯೂಟ ಕಾರ್ಯಕರ್ತೆ, ಗ್ರಾಪಂ ಚುನಾಯಿತ ಸದಸ್ಯರ ಹೆಸರಿನಲ್ಲಿ ಎನ್‌ಎಂಆರ್ ತೆಗೆಯುತ್ತಿರುವ ಬಗ್ಗೆ ದೂರು ಬಂದಿವೆ. ಪರಿಶೀಲನೆ ನಡೆಸಲಾಗುತ್ತಿದ್ದು, ಅಂತಹ ಪ್ರಕರಣ ಕಂಡುಬAದರೆ ಮುಲಾಜಿಲ್ಲದೆ ಸಂಬAಧಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಸರ್ಕಾರದ ಮಾರ್ಗಸೂಚಿ ಅನ್ವಯ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಇಲ್ಲಿವರೆಗೆ ಮನಸ್ಸಿಗೆ ಬಂದAತೆ ವರ್ತಿಸಿದ್ದೀರಿ, ಇನ್ನು ಮುಂದೆ ಸಹಿಸಲು ಆಗುವುದಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಿರ್ಲಕ್ಷÈ ವಹಿಸಿದರೆ ಉನ್ನತ ಅಧಿಕಾರಿಗಳ ಆದೇಶದಂತೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಯೋಜನಾಧಿಕಾರಿ ಶಿವಶಂಕ್ರಯ್ಯ ಸ್ವಾಮಿ, ನರೇಗಾ ಯೋಜನಾಧಿಕಾರಿ ನಾಗೇಂದ್ರಪ್ಪ ಸುಲೇಪೇಟ, ಪ್ರಮುಖರಾದ ಮಲ್ಲಿಕಾರ್ಜುನ ಕಟ್ಟಿ, ಗೋವಿಂದ ರೆಡ್ಡಿ, ಪವನಕುಮಾರ ಮೇತ್ರಿ, ಯಲಗೊಂಡ ಬೀರಗೊಂಡ, ಮಾರುತಿ, ವಾಹಿದ್, ವಿನೋದ, ಶಾಂತಪ್ಪ ಇತರರಿದ್ದರು.