ಚಿಂಚೋಳಿ: ಗಡಿ ತಾಲೂಕು ಚಿಂಚೋಳಿಯಲ್ಲಿ ಕಳೆದ ಎರಡು ದಿನಗಳಿಂದವ ಧಾರಾಕಾರ ಮಳೆ ಸುರಿಯುತ್ತಿದ್ದೂ, ನದಿ – ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಸೇತುವೆಗಳು ಮುಳುಗಿ ಸಂಚಾರ ಸ್ಥಗಿತಗೊಂಡಿದೆ.
ಬೋಗಾವತಿ ನದಿ ತುಂಬಿ ಹರಿದ ಪರಿಣಾಮ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ ಭಕ್ತಂಪಳ್ಳಿ, ಇರಗಪಳ್ಳಿ ಬುರಗಪಳ್ಳಿ ಗ್ರಾಮದ ಸೇತುವೆ ಮುಳುಗಿವೆ. ಅಕ್ಷರಶಃ ದ್ವಿಪದಂತಾಗಿವೆ. ಅಲ್ಲದೆ ಸಂಚಾರ ಕಡಿತಗೊಂಡಿದ್ದು, ಗ್ರಾಮದ ಜನರು ಹಳ್ಳಿಗಲ್ಲಲ್ಲೇ ಬಂಧಿಯಾಗಿದ್ದಾರೆ.
ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಬೋಗಾವತಿ ನದಿ, ಇದರಿಂದ ಗಂಗನಪಳ್ಳಿ ಗ್ರಾಮದ ಐತಿಹಾಸಿಕ ಗಂಗಾ ಮಾತೆ ದೇಗುಲ ಜಲಾವೃತವಾಗಿದೆ. ದೇಗುಲಕ್ಕೆ ಅಳವಡಿಸಿರುವ ಕಳಶ ರಕ್ಷಣೆಗೆ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.
ಬೆನಕನಹಳ್ಳಿ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗಿದ್ದು, ಬಹುತೇಕ ಮನೆಗಳು ಜಲಾವೃತವಾಗಿವೆ. ಮನೆಗಳಲ್ಲಿನ ದವಸ, ಧಾನ್ಯ ನೀರು ಪಲಾಗಿದೆ. ಸಾಕಷ್ಟು ಯಂತ್ರಗಳು ಕೆಟ್ಟು ಹೋಗಿವೆ.