ಚಿಂಚೋಳಿ ಬಂದ್ ಸಂಪೂರ್ಣ ಶಾಂತಿಯುತ

blank

ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹೋರಾಟ | ಕೇಂದ್ರ ಸಚಿವ ಷಾ ಪ್ರತಿಕೃತಿ ದಹಿಸಿ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿAದ ಕೈಬಿಡುವಂತೆ ಒತ್ತಾಯಿಸಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಸೋಮವಾರ ಕರೆ ನೀಡಿದ್ದ ಚಿಂಚೋಳಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗೆ ೭ರಿಂದ ಸಂಜೆ ೪ರವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜು, ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪ್ರತಿಭಟನಾಕಾರರು ಚಂದಾಪುರ ಗಂಗುನಾಯಕ ತಾಂಡಾ, ಗಾಂಧಿ ವೃತ್ತ, ಮೌನೇಶ್ವರ ಮಂದಿರ, ದಿ.ವೈಜನಾಥ ಪಾಟೀಲ್ ವೃತ್ತದ ರಸ್ತೆಗಳಲ್ಲಿ ಹೋರಾಟ ನಡೆಸಿದರು. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಷಾ ಪ್ರತಿಕೃತಿಯ ಬೃಹತ್ ಮೆರವಣಿಗೆ ನಡೆಸಿದ ಬಳಿಕ ದಹಿಸಿ ಕಿಡಿಕಾರಿದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮಾತನಾಡಿ, ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ ಸ್ವಯಂಪ್ರೇರಿತವಾಗಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಕರೆ ನೀಡಿದ ಬಂದ್ ಯಶಸ್ವಿಯಾಗಿದೆ. ಹೀಗಾಗಿ ಷಾ ಅವರನ್ನು ತಕ್ಷಣವೇ ಸಂಪುಟದಿAದ ಕೈಬಿಡಬೇಕು. ದೇಶದ ಸಂವಿಧಾನ ಸಂರಕ್ಷಣೆಗೆ ಸಂಘಟಿತರಾಗಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಶರಣು ಪಾಟೀಲ್, ಲಕ್ಷö್ಮಣ ಆವಂಟಿ, ಗೌತಮ ಬೊಮ್ಮನಳ್ಳಿ, ಆರ್.ಗಣಪತರಾವ, ಮಾರುತಿ ಗಂಜಗೇರಾ, ಓಮನರಾವ ಕೊರವಿ, ಮಾಣಿಕರಾವ ಗುಲಗುಂಜಿ, ಹಣಮಂತ ಪೂಜಾರಿ, ರೇವಣಸಿದ್ದಪ್ಪ ಅಣಕಲ್, ಡಾ.ತುಕಾರಾಮ ಪವಾರ್, ಕಾಶೀನಾಥ ಸಿಂಧೆ, ಗೋಪಾಲ ರಾಂಪೂರೆ, ಪ್ರವೀಣ ತೇಗಲತಿಪ್ಪಿ, ಅನೀಲಕುಮಾರ ಜಮಾದಾರ, ಆನಂದ ಟೈಗರ್, ಕಾಶೀರಾಮ ದೇಗಲಮಡಿ, ಪ್ರವೀಣ ಪೋಳಾ, ಅನ್ವರ್ ಖತೀಬ್, ಸಂತೋಷ ಗುತ್ತೇದಾರ್, ಅಬ್ದುಲ್ ಬಾಸಿದ್, ಬಸವರಾಜ ಮಾಲಿ, ರಾಮಶೆಟ್ಟಿ ಪವಾರ್, ಪಾಂಡುರAಗ ಲೊಡ್ಡನೂರ, ರವಿ ಪಾಟೀಲ್, ಚೇತನ್ ನಿರಾಳಕರ್ ಮಾತನಾಡಿ. ರಾಮನ ಕಾಲ ಮುಗಿದಿದೆ. ಇದೀಗ ಭೀಮ ಪರ್ವ ಶುರುವಾಗಿದೆ. ನಾವೆಲ್ಲರೂ ಅಂಬೇಡ್ಕರ್ ಅವರನ್ನು ಪೂಜಿಸುವ ಮೂಲಕ ದಿನ ಆರಂಭಿಸುತ್ತೇವೆ. ಷಾ ರಾಜೀನಾಮೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ವಿಶ್ವನಾಥ ಹೊಡೆಬೀರನಳ್ಳಿ, ವಿಜಯಕುಮಾರ ಘಾಟಗೆ, ಸಚಿನ್ ಚವ್ಹಾಣ್, ರಾಘವೇಂದ್ರ ಹೂವಿನಬಾವಿ, ಜಗದೇವ ಗೌತಮ, ರಾಜಶೇಖರ ಹೊಸಮನಿ, ತುಳಸಿರಾಮ ಪೋಳ, ಶ್ರೀಕಾಂತ ಜಾನಕಿ, ಸೋಮಶೇಖರ ಬೆಡಕಪಳ್ಳಿ, ಶ್ರೀನಿವಾಸ ಬೋರಪಿ, ರೇವಣಸಿದ್ದ ಹೊಡೆಬೀರನಳ್ಳಿ, ಮತೀನ್ ಸೌದಾಗಾರ್, ಹರ್ಷದ್ ಅಲಿ, ಬಂಡೆಪ್ಪ ಯಂಗನೂರ, ಯಲ್ಲಾಲಿಂಗ ದಂಡಿನ್, ಸುರೇಶ ಭಂಟಾ, ಸಂತೋಷಕುಮಾರ ಚಿಟ್ಟಾ, ಗೌತಮ ಇತ್ಲಾಪುರ ಇತರರಿದ್ದರು. ರಾಷ್ಟçಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.
ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ, ಪಿಎಸ್‌ಐ ಗಂಗಮ್ಮ ನೇತೃತ್ವದಲ್ಲಿ ಮೂವರು ಸಿಪಿಐ, ೧೦ ಪಿಎಸ್‌ಐ, ಒಂದು ಡಿಎಆರ್ ತುಕಡಿ, ೮೦ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.

ಸಂವಿಧಾನ ಸಂರಕ್ಷಣೆಗಾಗಿ ಹೋರಾಟ ಅನಿವಾರ್ಯ
ಬಂದ್‌ನಿAದಾಗಿ ಸಾರ್ವಜನಿಕರು, ವಾಹನ ಸವಾರರು, ವ್ಯಾಪಾರಸ್ಥರು, ಆಟೋ ಚಾಲಕರಿಗೆ ತೊಂದರೆಯಾಗಿದ್ದರೂ ಬೆಂಬಲಿಸಿದ್ದು, ಹರ್ಷ ತಂದಿದೆ. ನಿಮಗಾದ ಸಮಸ್ಯೆಗೆ ಹೋರಾಟ ಸಮಿತಿ ಮೂಲಕ ಕ್ಷಮೆಯಾಚಿಸುತ್ತೇನೆ. ಸಂವಿಧಾನ ಸಂರಕ್ಷಣೆಗಾಗಿ ಹೋರಾಟ ಅನಿವಾರ್ಯವಾಗಿತ್ತು.
| ಸುಭಾಷ ರಾಠೋಡ್
ಕೆಪಿಸಿಸಿ ಉಪಾಧ್ಯಕ್ಷ

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…