ಗಡಿಯಲ್ಲಿ ಚೀನಾ ಯೋಧರ ಜಮಾವಣೆ: ಪ್ರತೀಕಾರಕ್ಕೆ ಭಾರತವೂ ಸನ್ನದ್ಧ

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನತೆ ಮುಂದುವರಿದಿದೆ. ಭಾರತ-ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಕೂಡ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಮುಂಚೂಣಿ ನೆಲೆಗಳಲ್ಲಿರುವ ತುಕಡಿಗಳಿಗೆ ಬೇಕಾದ ಸರಕುಗಳನ್ನು ವಾಯುಪಡೆಯ ಬೋಯಿಂಗ್ ಸಿ-17 ಗ್ಲೋಬ್‌ಮಾಸ್ಟರ್ ಸರಕು ಸಾಗಣೆ ವಿಮಾನ ಸರಬರಾಜು ಮಾಡುತ್ತಿದೆ. ಮತ್ತೊಂದೆಡೆ ಚೀನೂಕ್ ಹೆಲಿಕಾಪ್ಟರ್ ಸೇರಿ ಅತ್ಯಾಧುನಿಕ ಯುದ್ಧ ವಿಮಾನಗಳು ಗಡಿಯಲ್ಲಿ ಗಸ್ತು ತಿರುಗುತ್ತಿವೆ. … Continue reading ಗಡಿಯಲ್ಲಿ ಚೀನಾ ಯೋಧರ ಜಮಾವಣೆ: ಪ್ರತೀಕಾರಕ್ಕೆ ಭಾರತವೂ ಸನ್ನದ್ಧ