ವಿರಾಜಪೇಟೆ: ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಚಿಮ್ಮಂಗಡ ಕೆ ಪೂವಣ್ಣ, ಉಪಾಧ್ಯಕ್ಷರಾಗಿ ಬಾಚಟ್ಟಿರ ಎನ್. ಸುಬ್ಬಯ್ಯ ಆಯ್ಕೆಯಾದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಎನ್.ಎಸ್.ಪ್ರಶಾಂತ್, ಜಂಟಿ ಕಾರ್ಯದರ್ಶಿಯಾಗಿ ಬಿ.ಎನ್. ಜಗದೀಶ್, ಖಜಾಂಚಿಯಾಗಿ ಹಾಜಿರಾ ಷರೀಫ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿತೀಯಯಂಡ ಪ್ರದಿಮ್ನ, ಬಿ.ಅನುಪಮಾ ಕಿಶೋರ್, ವಿಜಯಲಕ್ಷ್ಮೀ, ಸಿ.ಕೆ. ಪೊನ್ನಣ್ಣ, ಬಿ.ಟಿ.ಗೀತಾ, ವಿ.ಎಸ್. ಪ್ರೀತಮ್ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಪೂವಣ್ಣ ಮಾತನಾಡಿ, ಸಂಘವನ್ನು ಅಭಿವೃದ್ಧಿಗೊಳಿಸುವುದೇ ನೂತನ ಆಡಳಿತ ಮಂಡಳಿ ಉದ್ದೇಶವಾಗಿದೆ. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ರೂಪುರೇಷೆ ಕೈಗೊಳ್ಳಲಾಗುವುದು ಎಂದರು.