More

    ಶಾಲೆ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ

    ಚಿಮ್ಮಡ: ಭಾರತ ಸೇವಾದಳ ಮಕ್ಕಳಲ್ಲಿ ಆರೋಗ್ಯಪೂರ್ಣ ಹವ್ಯಾಸಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಗ್ರಾಮದ ಮುಖಂಡ ಪಿ.ಡಿ. ನೇಸೂರ ಹೇಳಿದರು.

    ಚಿಮ್ಮಡ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲೆಯೇ ಜೀವಂತ ದೇವಾಲಯ. ಅದರ ಪ್ರಗತಿಗೆ, ಮಕ್ಕಳ ಶ್ರಯೋಭಿವೃದ್ಧಿಗೆ ಎಸ್‌ಡಿಎಂಸಿ, ಸಮುದಾಯ ಸೇರಿ ಎಲ್ಲರ ಸಹಕಾರವೂ ಅವಶ್ಯ ಎಂದರು.

    ಸೇವಾದಳ ಸಂಘಟಕ ಮಹೇಶ ಪತ್ತಾರ, ಎಸ್‌ಡಿಎಂಸಿ ಅಧ್ಯಕ್ಷ ಭೀಮಶಿ ಅರುಟಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದೇವೇಂದ್ರ ವಂದಾಲ, ಬಿ.ಎಸ್. ಹಲಗಿ, ಎಸ್.ಟಿ. ಮಾಳಗೆ, ಜಿ.ವಿ. ಮಂಜುನಾಥ, ಪಿ.ಎಂ. ಭಜಂತ್ರಿ, ಶಾಂತಪ್ಪ ಕೆ., ಪಿ.ಪಿ. ಮಾಳಿಗಡ್ಡಿ ಇತರರಿದ್ದರು.

    ವಿ.ಎಸ್. ಉಪ್ಪಿನ ಗೌರವ ರಕ್ಷೆ ನಡೆಸಿಕೊಟ್ಟರು. ಶಾಖಾ ನಾಯಕ ಎಸ್.ಎ. ಬಿರಾದಾರ ಸ್ವಾಗತಿಸಿದರು. ಮ.ಕೃ. ಮೇಗಾಡಿ ನಿರೂಪಿಸಿದರು. ಜ್ಯೋತಿ ಗಡೆನ್ನವರ ವಂದಿಸಿದರು. ಪಿಕೆಪಿಎಸ್ ಅಧ್ಯಕ್ಷ ಆರ್.ವೈ.ಮುಗಳಖೋಡ, ಬೀರೇಂದ್ರ ೌಂಡೇಷನ್ ಅಧ್ಯಕ್ಷ ಪರಪ್ಪ ಮುಂದಿನಮನಿ, ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ತಾಲೂಕು ನಿರ್ದೇಶಕ ಬಿ.ಡಿ. ನೇಮಗೌಡ ಅವರನ್ನು ಸನ್ಮಾನಿಸಲಾಯಿತು.

    ಪ್ರಭಾತ ಫೇರಿ
    ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಚಿಂತನೆ, ಯೋಗ, ಲಘು ವ್ಯಾಯಾಮ, ಶ್ರಮದಾನಗಳಲ್ಲಿ ಮಕ್ಕಳು ಪಾಲ್ಗೊಂಡರು. ನಂತರ ಶಾಲೆ ಆವರಣದಿಂದ ಪ್ರಭಾತ ಫೇರಿ ಆರಂಭವಾಗಿ ಗ್ರಾಮದ ಬಸ್ ನಿಲ್ದಾಣ, ಅಗಸಿ ಬಾಗಿಲು, ಬನಶಂಕರಿ ದೇವಾಲಯ, ಭಕ್ತ ಕನಕದಾಸ ವೃತ್ತ, ವಿರಕ್ತಮಠ ಮೂಲಕ ಶಾಲೆ ಆವರಣಕ್ಕೆ ಮರಳಿತು.

    ಕವಾಯತು ಪ್ರದರ್ಶನ
    ಸಾರಿ ಡಾನ್ಸ್, ಲೋಟಸ್, ಹ್‌ಸೂ ಕಾಟೆ ಕವಾಯತುಗಳು ಗ್ರಾಮಸ್ಥರ ಗಮನ ಸೆಳೆದವು. ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳಿಂದ 800 ಮಕ್ಕಳು ಮೇಳದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ, ಉಪಹಾರ, ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts