ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಹಾರಿದ ಮಹಿಳೆ ಈಗ ಪೊಲೀಸ್ ವಶದಲ್ಲಿ…

ಬೆಟ್ಟಿಯಾ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕಾಲುವೆಗೆ ಎಸೆದು, ತಾನೂ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿ, ಈಗ ಪೊಲೀಸರಿಂದ ಬಂಧಿತರಾಗಿದ್ದಾರೆ.

ದುಮಾರಿಯಾ ಗ್ರಾಮದ ಮಹಿಳೆ ಅಂತಿಮಾ ದೇವಿ ಪತಿಯೊಂದಿಗೆ ಆಗಾಗ ಜಗಳವಾಡಿಕೊಳ್ಳುತ್ತಿದ್ದರು. ಹಾಗೇ ಬುಧವಾರ ಕೂಡ ಮನಸ್ತಾಪ ಉಂಟಾಗಿದ್ದು, ಇದರಿಂದ ಬೇಸತ್ತ ಆಕೆ ತನ್ನ ನಾಲ್ಕು ವರ್ಷದ ಮಗ ಮತ್ತು ನವಜಾತ ಹೆಣ್ಣು ಶಿಶುವನ್ನು ತಿರ್ಹತ್ ನದಿ ಕಾಲುವೆಗೆ ಎಸೆದು ತಾನೂ ಹಾರಿದ್ದರೂ. ಅಲ್ಲಿಯೇ ನಿಂತಿದ್ದವರು ಅದನ್ನು ನೋಡಿ, ಆ ಮಹಿಳೆಯನ್ನು ರಕ್ಷಿಸಿದ್ದರು. ಆದರೆ ಅವರ ಇಬ್ಬರೂ ಮಕ್ಕಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಮಕ್ಕಳನ್ನು ಕೊಂದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಠಾಣೆ ಅಧಿಕಾರಿ ತಿಳಿಸಿದ್ದಾರೆ