More

    ಬೈಲಹೊಂಗಲ: ಮಕ್ಕಳಿಗೆ ವೈಜ್ಞಾನಿಕ ಸತ್ಯಗಳ ಅರಿವು ಮೂಡಿಸಿ

    ಬೈಲಹೊಂಗಲ: ಬದಲಾಗುತ್ತಿರುವ ಜಗತ್ತಿನ ವಿಜ್ಞಾನ, ತಂತ್ರಜ್ಞಾನ ವೇಗಕ್ಕೆ ತಕ್ಕಂತೆ ಮಕ್ಕಳನ್ನು ಸಿದ್ಧಪಡಿಸಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದ್ದಾರೆ.

    ತಾಲೂಕಿನ ತಿರುಳ್ಗನ್ನಡ ನಾಡು ವಕ್ಕುಂದ ಗ್ರಾಮದ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಪಂ, ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ 2019-20 ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯ ರೂಪಿಸಲು ಮಕ್ಕಳಿಗೆ ಉತ್ತಮ ಶಿಕ್ಷಣ ಅವಶ್ಯ ಎಂದರು.

    ಜಿಪಂ ಸಿಇಒ ರಾಜೇಂದ್ರ ಕೆ.ವಿ.ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲಿ ವಿಜ್ಞಾನದ ಕುತೂಹಲ, ಕೌತುಕತೆ ಇರುತ್ತದೆ. ಅದನ್ನು ತಿಳಿಪಡಿಸುವ ಕರ್ತವ್ಯ ಶಿಕ್ಷಕರು, ಪಾಲಕರು, ಸಮುದಾಯದ್ದಾಗಿದೆ ಎಂದು ಹೇಳಿದರು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎ.ಬಿ.ಪುಂಡಲೀಕ, ಡೈಯಟ್ ಪ್ರಾಚಾರ್ಯ ಎಂ.ಆರ್.ಸಿಂಧೂರ, ಜಿಪಂ ಸದಸ್ಯರಾದ ಅನಿಲ ಮೇಕಲಮರ್ಡಿ, ಶಂಕರ ಮಾಡಲಗಿ, ವೀರಣ್ಣ ಕರೀಕಟ್ಟಿ, ರೋಹಿಣಿ ಪಾಟೀಲ, ತಾಪಂ ಅಧ್ಯಕ್ಷೆ ನೀಲವ್ವ ಫಕೀರನ್ನವರ, ಸದಸ್ಯ ಬಸನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ, ಉಪಾಧ್ಯಕ್ಷೆ ಭಾರತಿ ಇಳಿಗೇರ, ಅಶೋಕ ಭದ್ರಶೆಟ್ಟಿ, ಸಂಗಪ್ಪ ಭದ್ರಶೆಟ್ಟಿ, ತಹಸೀಲ್ದಾರ್

    ಡಾ.ದೊಡ್ಡಪ್ಪ ಹೂಗಾರ, ತಾಪಂ ಇಒ ಸಮೀರ ಮುಲ್ಲಾ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಹುಂಬಿ, ಸಿ.ಕೆ.ಮೆಕ್ಕೇದ, ರಾಮನಗೌಡ ಪಾಟೀಲ, ಸಂತೋಷ ಹಡಪದ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸುತಗಟ್ಟಿ, ಬಸನಗೌಡ ಪಾಟೀಲ, ಮಡ್ಡೆಪ್ಪ ಪಂತ, ಬಸವರಾಜ ಕೊಟಗಿ, ಈರಣ್ಣ ಅಂಗಡಿ, ಪಿಡಿಒ ವಿಜಯಲಕ್ಷ್ಮೀ ಆನಿಗೋಳ, ಈರಣಗೌಡ ಶೀಲವಂತರ, ಮಡಿವಾಳಪ್ಪ ತಡಸಲ, ಸಿ.ಎಸ್.ತಾಳಿಕೋಟಿಮಠ, ಸಂಗಯ್ಯ ಕೊರಿಕೊಪ್ಪಮಠ, ಶಂಕರ ಕೊಟಗಿ, ಪ್ರಕಾಶ ಹಂಪನ್ನವರ, ಮಹಾಂತೇಶ ಉಳ್ಳಿಗೇರಿ, ಗಫಾರ್ ನದಾಫ್, ಮಲ್ಲಾರಪ್ಪ ಢವಳೆ, ಶಾಲಾ ಮುಖ್ಯಾಧ್ಯಾಪಕಿ ವಿಜಿಯಾ ಮುರಗೋಡ, ಸಂಗಮೇಶ ಖನ್ನಿನಾಯ್ಕರ, ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಲೀಲಾವತಿ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಮಹಾದೇವಿ ಅಂಗಡಿ, ರಾಜು ಹಕ್ಕಿ ನಿರೂಪಿಸಿದರು. ಬಿಇಒ ಪಾರ್ವತಿ ವಸ್ತ್ರದ ವಂದಿಸಿದರು.

    ಮೆರುಗು ತಂದ ಮೆರವಣಿಗೆ: ಜಿಲ್ಲಾಮಟ್ಟದ ವಿಜ್ಞಾನ ಹಬ್ಬದ ಅಂಗವಾಗಿ ಶಾಲೆಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಶಾಲೆಯ ಆವರಣ, ಗೋಡೆ, ಕೊಠಡಿಗಳು ವಿವಿಧ ಬರಹ, ಮಹಾನ್ ಪುರುಷರ ಚಿತ್ರಗಳಿಂದ ಕಂಗೊಳಿಸುತ್ತಿತ್ತು. ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಸಿಂಗಾರಗೊಂಡ ಜೋಡೆತ್ತು, ಚಕ್ಕಡಿಗಳೊಂದಿಗೆ ವಿಜ್ಞಾನ ಹಬ್ಬದ ಮೆರವಣಿಗೆ ಜರುಗಿತು. ಶಾಸಕ ಮಹಾಂತೇಶ ಕೌಜಲಗಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮಕ್ಕಳ ರೂಪಕಗಳು ಗಮನ ಸೆಳೆದವು. ವಿವಿಧ ವಾದ್ಯಮೇಳಗಳು ರಂಗು ತಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts