21 C
Bengaluru
Thursday, January 23, 2020

ಮಕ್ಕಳಿಗೆ ಮನೆಯ ಪರಿಸ್ಥಿತಿ ಮನದಟ್ಟು ಮಾಡಿಸಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮಧ್ಯಮ ವರ್ಗದ ಪೇರೆಂಟ್ಸ್ ಮಾಡುವ ಅತಿ ಮುದ್ದಾಟಕ್ಕೆ ಉದಾಹರಣೆಗಳು ಅದೆಷ್ಟೋ! ಪಕ್ಕದ ಮನೆಯ ಶ್ರೀಮಂತರ ಮಕ್ಕಳ ಸಮಾನವಾಗಿ ತಮ್ಮ ಮಕ್ಕಳನ್ನು ಬೆಳೆಸಬೇಕೆಂಬಾಸೆ ಆ ಪ್ರೀತಿಗೆ ಕಾರಣ. ಅದಕ್ಕಿಂತ ಮುಖ್ಯವಾಗಿ ಕೇಳಿದ್ದನ್ನು ಕೊಡಿಸದಿದ್ದರೆ ದೊಡ್ಡವರಾದ ಮೇಲೆ ಮಕ್ಕಳು ತಮ್ಮನ್ನು ದೂರ ಮಾಡಿಯಾರು ಎಂಬ ಅವ್ಯಕ್ತ ಭಯ.

ಒಮ್ಮೆ ಪ್ರಯಾಣ ಮಾಡುವಾಗ, ಸಹ ಪ್ರಯಾಣಿಕ ನನ್ನ ಒಬ್ಬ ಅಭಿಮಾನಿ. ಆತ ಒಬ್ಬ ಸೈಕಿಯಾಟ್ರಿಸ್ಟ್. ಮಾತಿನ ಸಂದರ್ಭದಲ್ಲಿ ನನ್ನ ಕೃತಿ ‘ಕೋಣಗಳು’ ಪ್ರಸ್ತಾಪ ಬಂದಿತು. ‘ಒಬ್ಬ ಮನುಷ್ಯನಿಗೆ ನಿಧಾನವಾಗಿ ಕೊಂಬುಗಳು ಬೆಳೆಯುತ್ತವೆ. ಕಲಗಚ್ಚು ಕುಡಿಯುವ ಆಸೆಯಾಗುತ್ತದೆ. ಒಂದು ಹಂತ ಬಂದಾಗ, ಪ್ರತಿಯೊಬ್ಬರೂ ಕೋಣವಾಗಿ ಬದಲಾಗಿರುತ್ತಾರೆ. ಒಬ್ಬ ವಿಚಾರವಾದಿ ಮಾತ್ರ ಮನುಷ್ಯನಾಗಿ ಉಳಿದಿರುತ್ತಾನೆ. ಅವನನ್ನು ಆ ಕೋಣಗಳು ಕೊಂಬಿನಿಂದ ಇರಿದು ಸಾಯಿಸುತ್ತವೆ’ ಎಂದು ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದೆ. ಆ ಅಭಿಮಾನಿ ಹೊರಡುವಾಗ, ‘ನಾನು ನಿಮ್ಮ ಬಗ್ಗೆ ತಿಳಿದಿರುವುದು ಸರಿ. ನೀವು ಕೂಡ ರಾಮಗೋಪಾಲ್ ವರ್ವ ಹಾಗೇನೇ ಒಬ್ಬ ಮಿಸಾಂತ್ರೋಪ್’ ಎಂದು ಹೇಳಿ ಹೊರಟ.

ಅದು ನನಗೆ ಹೊಸ ಪದ. ಅದು ಟೀಕೆಯೋ, ಹೊಗಳಿಕೆಯೋ ತಿಳಿಯಲಿಲ್ಲ. ನಂತರ ಪರಿಶೀಲಿಸಿದಾಗ ಅರ್ಥವಾಯಿತು. ಮಿಸಾಂತ್ರೋಪ್ ಎಂದರೆ ತನ್ನ ಅಭಿಪ್ರಾಯಗಳ ಬಗ್ಗೆ ಇರುವ ನಂಬಿಕೆಯಿಂದ, ಪ್ರಪಂಚದೆಡೆಗೆ ಕೋಪದಿಂದ ಪ್ರತಿಕ್ರಿಯಿಸುವವನು. ‘ಪ್ರಪಂಚದಲ್ಲಿ ನಾನು ಅತ್ಯಂತ ಅಸಹ್ಯಪಡುವ ಪ್ರಾಣಿ-ಮನುಷ್ಯ’ ಎಂದಿದ್ದಾನೆ ಅಲೆಕ್ಸಾಂಡರ್ ಪೋಪ್. ಆಸ್ಕರ್ ವೈಲ್ಡ್, ಸಾರ್ತ್ರೆ, ಜೋನಾಥನ್ ಸ್ವಿಫ್ಟ್ ಕೂಡ ಈ ಗುಂಪಿನವರೇ. ಇವರು ಇತರರ ನಕಾರಾತ್ಮಕ ಗುಣಗಳನ್ನು ಪರಿಶೀಲಿಸುತ್ತ, ಇಷ್ಟವಾಗದವರನ್ನು ಮರುಕ್ಷಣದಿಂದಲೇ ಅವಾಯ್್ಡ ಮಾಡುತ್ತಾರೆ. ಬೇರೆಯವರನ್ನು ಇಂಪ್ರೆಸ್ ಮಾಡಲಿಕ್ಕೆ ಮುಖವಾಡ ಧರಿಸುವುದಿಲ್ಲ. ತಾವರೆ ಎಲೆ ಮೇಲಿನ ನೀರಹನಿಯಂತೆ, ಜನರ ಜೊತೆ ಬದುಕಲೇ ಬೇಕಲ್ಲ ಎಂಬಂತೆ ಇರುತ್ತಾರೆ. ಇದರಿಂದ ಇವರಿಗೆ (ತಮ್ಮ ಗ್ರೂಪ್ ಬಿಟ್ಟು) ಸ್ನೇಹಿತರು ಕಡಿಮೆ. ತಮ್ಮ ಅಭಿಪ್ರಾಯಗಳನ್ನು ಒಪ್ಪದವರು ಮೂರ್ಖರು ಎಂದುಕೊಳ್ಳುತ್ತಾರೆ. ಸಮಾಜದಲ್ಲಿ ‘ಔಟ್​ಸೈಡರ್’ ಆಗಿ ಬದುಕುತ್ತಾರೆ. ತಾವು ಹೇಳಿದ್ದು ಸರಿ ಎಂಬ ಭಾವನೆ ತಪ್ಪಲ್ಲ. ಆದರೆ ವಯಸ್ಸು ಬೆಳೆದಾಗ ಒಂಟಿಯಾಗಿ ಬಿಡುತ್ತಾರೆ. ಸಾಧಾರಣವಾಗಿ ನಗುವುದಿಲ್ಲ.

ಬಾಂಧವ್ಯಗಳು ಹೆಚ್ಚಾಗಿ ಇರದಿರುವುದರಿಂದ ಇವರಿಗೆ ದುಃಖ ಕೂಡ ಕಡಿಮೆಯೇ. ತನ್ನ ಮಗಳು ಪರಜಾತಿಯವನನ್ನು ಮದುವೆಯಾದರೆ ಸಮಾಜ ಏನೆನ್ನುತ್ತದೋ ಎಂದು ಜನ ಹೆದರುತ್ತಾರೆ. ಮಿಸಾಂತ್ರೋಪ್ ವ್ಯಕ್ತಿ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಷ್ಟವಿದ್ದರೆ ಮಗಳನ್ನು ಮನೆಗೆ ಆಹ್ವಾನಿಸುತ್ತಾನೆ. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಅವಳನ್ನು ತೊರೆದು ಬಿಡುತ್ತಾನೆ. ಸಮಾಜದ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಯಾರೂ ಇಲ್ಲದಿದ್ದರೂ ಬದುಕಬಲ್ಲೆ ಎಂಬ ಧೈರ್ಯ, ಹೆಸರು, ದುಡ್ಡು ಇದ್ದವರಿಗೆ ಪರವಾಗಿಲ್ಲ. ಇಲ್ಲದಿದ್ದರೆ ಮಿಸಾಂತ್ರೋಪ್ ವ್ಯಕ್ತಿ ‘ಅಜಾತಮಿತ್ರ’ನಾಗಿ ಉಳಿದುಬಿಡುತ್ತಾನೆ.

ಪ್ರಸ್ತುತ ಕೆಲವು ಟೀನೇಜರ್ಸ್​ನಲ್ಲಿ ಈ ಮನಸ್ಥಿತಿ ಅಧಿಕವಾಗುತ್ತಿದೆ. ಅವರು ಹಿರಿಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಇವರ ದೃಷ್ಟಿಯಲ್ಲಿ ‘ಕಷ್ಟಗಳು’ ಸ್ವಯಂಕೃತ ಅಪರಾಧಗಳು. ಅದಕ್ಕೇ ಹಿರಿಯರ ಕಷ್ಟಗಳನ್ನು ಹಂಚಿಕೊಳ್ಳುವುದಿಲ್ಲ. ಹುಕ್ಕಾ ಸೇದಿದರೂ, ಸಣ್ಣ ವಯಸ್ಸಿನಲ್ಲಿ ಪ್ರೇಮದಲ್ಲಿ ಸಿಲುಕಿದರೂ, ಕುಡಿದು ಆಕ್ಸಿಡೆಂಟ್ ಮಾಡಿದರೂ ತನ್ನ ಮಾತೇ ಅವನ ಸಿದ್ಧಾಂತ! ಈ ಮನಸ್ಥಿತಿ ಮಿತಿ ಮೀರಿದರೆ ಅದು ‘ಅಮಾನುಷ’ವಾಗುತ್ತದೆ. ತಮ್ಮ ಅಭಿಪ್ರಾಯ ಒಪ್ಪದವರನ್ನು ಅಮಿತವಾಗಿ ದ್ವೇಷಿಸುತ್ತಾರೆ. ಅಮಾಯಕರನ್ನು ಸಾಯಿಸುವ ಐಸಿಸ್ ಉಗ್ರರಿಂದ ಹಿಡಿದು, ಪ್ರೀತಿಸಿದ ಹುಡುಗಿಯ ಮುಖಕ್ಕೆ ಆಸಿಡ್ ಎರಚುವ ನೀಚರವರೆಗೆ- ಈ ಪ್ರಪಂಚದಲ್ಲಿ ಮಿಸಾಂತ್ರೋಪ್​ಗಳ ಸಂಖ್ಯೆ ದೊಡ್ಡದಿದೆ.

ಒಂದು ಸತ್ಯ ಬದುಕನ್ನೇ ಬದಲಾಯಿಸುತ್ತದೆ: ಒಂದು ಕಂಪನಿಯಲ್ಲಿ ಪೇರೆಂಟ್ಸ್ ಸೆಮಿನಾರ್ ಪೂರ್ತಿಯಾದ ಮೇಲೆ ಒಬ್ಬ ತರುಣ ಎಕ್ಸಿಕ್ಯೂಟಿವ್ ನನ್ನ ಬಳಿಗೆ ಬಂದು ‘ನಿಮ್ಮ ಉಪನ್ಯಾಸದಲ್ಲಿ ಹೇಳಿದ ಯೂ ಆರ್ ಡಿಫರೆಂಟ್… ಕಾನ್ಸೆಪ್ಟನ್ನು ಚೆನ್ನಾಗಿ ಪಾಪ್ಯುಲರೈಸ್ ಮಾಡಿ ಸರ್’ ಎಂದ. ನಂತರ, ‘ನಾನು ಪಿಯುಸಿಯಲ್ಲಿ ಓದುತ್ತಿದ್ದ ದಿನಗಳವು. ನಮ್ಮದು ಲೋವರ್ ಮಿಡಲ್ ಕ್ಲಾಸ್ ಫ್ಯಾಮಿಲಿ. ಡಿಗ್ರಿ ಓದುತ್ತಿದ್ದ ಅಣ್ಣ, ಮದುವೆ ಆಗಬೇಕಿದ್ದ ಇಬ್ಬರು ಅಕ್ಕಂದಿರು. ನನ್ನ ಗೆಳೆಯರಿಗೆ ಬೈಕುಗಳಿದ್ದವು. ರೈಡಿಂಗ್ ಅಂದರೆ ನನಗೆ ಬಹಳ ಇಷ್ಟ. ‘ಕೊಡಿಸಿ’ ಎಂದು ಅಪ್ಪನಿಗೆ ಹೇಳಿದೆ. ಆದರೆ ನಮ್ಮ ಪೇರೆಂಟ್ಸ್ ಒಪ್ಪಲಿಲ್ಲ. ಏನೇ ಆಗಲಿ, ಕೊಡಿಸಲೇಬೇಕು ಎಂದು ಊಟ ತೊರೆದು ಎಮೋಷನಲ್  ಬ್ಲ್ಯಾಕ್​ವೆುೕಲ್ ಮಾಡಿದೆ. ಮಾಮೂಲಿಗಿಂತ ಹೆಚ್ಚು ಸುಸ್ತಾದವರಂತೆ ನಟಿಸಿದೆ. ಮೂರು ದಿನಗಳ ನಂತರ ಅಪ್ಪ ಬಂದರು. ನಾನು ರೂಂನಲ್ಲಿ ಮಲಗಿದ್ದೆ. ಅಮ್ಮ ನನ್ನ ಬಳಿ ಕುಳಿತು ಬೇಡಿಕೊಳ್ಳುತ್ತಿದ್ದಳು. ಒಳಗೆ ಬಂದ ಅಪ್ಪ, ‘ಅವನಿಗೆ ಊಟ ಮಾಡಲು ಹೇಳು. ನಾಳೆ ಕೊಡಿಸುತ್ತೇನೆ’ ಎಂದು ಅಮ್ಮನಿಗೆ ಹೇಳಿ ಹೊರಟು ಹೋದರು. ಅಷ್ಟು ಬೇಗ ಅಪ್ಪ ಒಪ್ಪಿಕೊಳ್ಳಬಹುದೆಂದು ತಿಳಿದಿರಲಿಲ್ಲ. ಎವರೆಸ್ಟ್ ಹತ್ತಿದಷ್ಟು ಸಂತೋಷವಾಯ್ತು. ಅಮ್ಮ ಒದ್ದೆ ಬಟ್ಟೆಯಿಂದ ನನ್ನ ಮುಖ ಒರೆಸಿ ಅಡಿಗೆಮನೆಗೆ ಕರೆದೊಯ್ಯುತ್ತಿರುವಾಗ, ವಾಷ್​ಬೇಸಿನ್ ಬಳಿ ನಿಂತು ಬಾಯಿಗೆ ಕೈ ಅಡ್ಡ ಇಟ್ಟುಕೊಂಡು ಅಪ್ಪ ಅಳುತ್ತಿರುವುದು ಕಾಣಿಸಿತು. ನಡುಗಿ ಹೋದೆ. ಮೈಯೆಲ್ಲ ಬೆವರೊಡೆಯಿತು. ಬಹುಶಃ ಆಗಲೇ ನನ್ನ ಬದುಕಿಗೆ ಒಂದು ತಿರುವು ಸಿಕ್ಕಿದ್ದು. ನಾನಿವತ್ತು ಈ ಉನ್ನತ ಸ್ಥಿತಿಯಲ್ಲಿ ಇರುವುದಕ್ಕೆ ಆ ಘಟನೆಯೇ ಕಾರಣ. ಆ ದೃಶ್ಯ ಈಗಲೂ ನನ್ನ ಕಣ್ಮುಂದೆ ಬರುತ್ತಿದೆ. ಕೆಲಸಕ್ಕೆ ಸೇರಿದ ನಂತರ ಮೊದಲು ಅಪ್ಪನ ಸಾಲಗಳನ್ನು ತೀರಿಸಿದೆ. ಐದು ವರ್ಷಗಳ ನಂತರ ಒಂದು ಬೈಕ್ ಕೊಂಡೆ’ ಎಂದು ಹೇಳಿದ.

ಶಕ್ತಿಗೆ ಮೀರಿದ್ದನ್ನು ಆಶಿಸಿದರೆ ಅದು ಬಯಕೆ. ಅದಕ್ಕಿಂತ ಹೆಚ್ಚು ಬಯಸಿದರೆ ಅದು ಅತಿಯಾಸೆ, ಬಯಕೆ ತೀರಿಸುವುದಕ್ಕೆ ಶ್ರಮಪಟ್ಟರೆ ಅದು ‘ಗುರಿ’ ಆಗುತ್ತದೆ. ಆಸೆ-ಅತಿಯಾಸೆ ನಡುವೆ ಗೆರೆ ಎಳೆಯುವುದು ಕಷ್ಟ. ಆದರೆ ಅಸಾಧ್ಯವಲ್ಲ.

ಯೂ ಆರ್ ಡಿಫರೆಂಟ್: ಮಕ್ಕಳಿಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಅರ್ಥವಾಗುವ ಹಾಗೆ ಹೇಳಿ. ಅನುಸರಿಸಿಕೊಂಡು ಹೋಗುವುದನ್ನು, ರಾಜಿಯಾಗುವದನ್ನು ಕಲಿಸಿರಿ. ‘ಕ್ಲಾಸ್​ನಲ್ಲಿ ಎಲ್ಲರ ಹತ್ತಿರ ಮೊಬೈಲ್ ಫೋನ್ ಇದೆ. ನನ್ನ ಹತ್ತಿರ ಮಾತ್ರ ಇಲ್ಲ’ ಎಂದು ಹತ್ತನೆ ತರಗತಿಯ ಮಗ ಹಟ ಮಾಡಿದರೆ ‘ನೀನು ಡಿಫರೆಂಟ್ ಕಣಪ್ಪಾ, ಅವರು ಬೇರೆ, ನಾವು ಬೇರೆ, ನಮಗೆ ಅಷ್ಟು ಚೈತನ್ಯವಿಲ್ಲ’ ಎಂದು ಹೇಳಿ. ಮಕ್ಕಳನ್ನು ಇನ್ವಾಲ್ವ್ ಮಾಡುವುದು ಎಂದರೆ, ಆರ್ಥಿಕ ಸುನಾಮಿ ಅಪ್ಪಳಿಸುತ್ತಿರುವಾಗ ಚುಕ್ಕಾಣಿಯನ್ನು ಅವರ ಕೈಗೆ ಕೊಡುವುದು ಎಂದರ್ಥ. ಆ ಚುಕ್ಕಾಣಿಯ ಇನ್ನೊಂದು ಹೆಸರೇ ‘ಜವಾಬ್ದಾರಿ’.

ತಾಕತ್ತಿಗೆ ಮೀರಿದ ಕೋರಿಕೆಗಳನ್ನು ಬಯಸಿದಾಗ, ಗುಂಪಿನಲ್ಲಿ ಗೋವಿಂದ ಎಂಬ ಭಾವನೆ ತೊಡೆದು ಹಾಕುವುದಕ್ಕೆ ‘ನೀನು ಡಿಫರೆಂಟ್’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತಿರಿ. ಹಾಗೆ ಹೇಳಿದರೆ ‘ದೊಡ್ಡವರ ಆರ್ಥಿಕ ಸಂಕಷ್ಟ’ದಲ್ಲಿ ಮಕ್ಕಳೂ ಪಾಲುದಾರರಾಗುತ್ತಾರೆ ಎಂದು ಸೈಕಾಲಜಿಸ್ಟರು ಹೇಳುತ್ತಾರೆ. ಇದು ನಿಜ ಅನಿಸುತ್ತದೆ. ಬಯಕೆ ತೀರಿಸಿಕೊಳ್ಳುವುದಕ್ಕಿಂತ ನಂಬಿಕೆಯಲ್ಲಿ ಪಾಲು ಹಂಚಿಕೊಳ್ಳುವುದು ಮಕ್ಕಳಿಗೂ ಸಂತೋಷ ಕೊಡುತ್ತದೆ.

ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂದು ಕಾಲೇಜ್​ಗೆ ಹೋಗುವುದನ್ನು ನಿಲ್ಲಿಸಿದ ಹುಡುಗಿ, ಪಿಕ್ನಿಕ್​ಗೆ ಹೋಗಲು ದುಡ್ಡು ಕೊಡದಿದ್ದುದಕ್ಕೆ ಕೈ ಕುಯ್ದುಕೊಂಡು ಎಮೋಷನಲ್ ಬ್ಲಾ್ಯಕ್​ವೆುೕಲ್ ಮಾಡಿದ ಹುಡುಗನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಪಿಕ್ನಿಕ್ ಪ್ರಸ್ತಾಪ ಬಂದಿದ್ದರಿಂದ ಇನ್ನೊಂದು ವಿಷಯ ಹೇಳುತ್ತಿದ್ದೇನೆ. ಟೀನೇಜರ್ಸ್​ಗೆ ಪಿಕ್ನಿಕ್ ಬಗ್ಗೆ ಬಹಳ ಮೋಜು. ಇದನ್ನು ಕೆಲವು ಕಾಲೇಜ್​ಗಳು ಕ್ಯಾಷ್ ಮಾಡಿಕೊಳ್ಳುತ್ತವೆ. ಸದರಿ ಕಾಲೇಜ್​ನವರು ಪ್ರತಿ ವರ್ಷ ಪಿಕ್ನಿಕ್​ಗೆ ಕರೆದೊಯ್ಯುತ್ತಾರೆ ಎಂಬ ವಿಷಯ ಪ್ರಚಾರವಾದರೆ ಹೊಸ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಾರೆ. ಇದನ್ನು ಕಾಲೇಜ್​ಗಳು ಚೆನ್ನಾಗಿ ಬಳಸಿಕೊಳ್ಳುತ್ತವೆ. ‘ಸ್ಟಡಿ ಟೂರ್’ ಹೆಸರಲ್ಲಿ ಮಂಜಿನ ಪರ್ವತಗಳಿಗೆ, ವಿದೇಶಗಳಿಗೆ ಕರೆದೊಯ್ಯುತ್ತಾರೆ. ನೀವು ಒಪ್ಪದಿದ್ದರೆ ಮಕ್ಕಳು ಮನೆಯಲ್ಲಿ ಪ್ರಳಯ ಸೃಷ್ಟಿ ಮಾಡುತ್ತಾರೆ. (ಮಗ ತನಗೆ ಹೊಡೆದು ಮನೆಯಲ್ಲಿದ್ದ ದುಡ್ಡನ್ನು ಎತ್ತಿಕೊಂಡು ಹೋದ ಎಂದು ಓರ್ವ ವಿಧವೆ ಅಳುತ್ತ ಹೇಳಿದಳು). ಮಕ್ಕಳನ್ನು ಕಳಿಸುವ ಮೊದಲು ಮ್ಯಾನೇಜ್​ವೆುಂಟ್​ನವರನ್ನು ಕೆಲವು ಪ್ರಶ್ನೆ ಕೇಳಿ ‘ಇದು ಸ್ಟಡೀ ಟೂರಾ? ಪಿಕ್ನಿಕ್ಕಾ? ಕಂಪಲ್ಸರೀನಾ? ಹಾಗಿದ್ದರೆ ಕಾಲೇಜ್​ಗೆ ಸೇರುವಾಗಲೇ ಏಕೆ ತಿಳಿಸಲಿಲ್ಲ?’ ಉತ್ತರ ಬಂದ ನಂತರ ನಿರ್ಧಾರ ನಿಮ್ಮದೇ. ಆ ನಂತರದ ಪರಿಣಾಮಗಳ ಜವಾಬ್ದಾರಿಯೂ ನಿಮ್ಮದೇ.

‘ದೂರದಲ್ಲಿ ಕುಳಿತು ಸಲಹೆ ಕೊಡುವುದು ಸುಲಭ. ನಿಮಗೇನು ಗೊತ್ತು? ಕೇಳಿದ್ದು ಕೊಡಿಸದಿದ್ದರೆ ಮನೆ ಧ್ವಂಸ ಮಾಡಿಬಿಡುತ್ತಾನೆ’ ಅನ್ನುತ್ತೀರಾ? ನೀವು ಅವರಿಗಾಗಿ ಮಾಡಿದ ತ್ಯಾಗವನ್ನು ಮಕ್ಕಳು ಗುರುತಿಸುವುದಿಲ್ಲ. ಹಾಗೆ ಕೊಡಿಸುವುದು ನಿಮ್ಮ ಕರ್ತವ್ಯ ಎಂದು ತಿಳಿಯುತ್ತಾರೆ. ಅದಕ್ಕೆ ನೀವೆಷ್ಟು ಕಷ್ಟಪಡುತ್ತಿದ್ದೀರೆಂದು ಯೋಚಿಸುವುದಿಲ್ಲ. ಅದನ್ನು ನಿಮ್ಮ ಬಲಹೀನತೆ (ತಮ್ಮ ಹಕ್ಕು) ಎಂದು ತಿಳಿದು ಬ್ಲಾ್ಯಕ್​ವೆುೕಲ್ ಮಾಡುತ್ತಾರೆ. ಈ ಸ್ವಭಾವವನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕು.

ರಜೆಗೆ ಮನೆಗೆ ಬಂದ ಮಗ ‘ನನ್ನ ಫ್ರೆಂಡ್ಸೆಲ್ಲ ಎಷ್ಟೋ ಹ್ಯಾಪಿಯಾಗಿ, ಲಕ್ಸುರಿಯಾಗಿದ್ದಾರೆ. ನೀವು ನನಗೇನೂ ಮಾಡುತ್ತಿಲ್ಲ. ನಂಗೆ ಬಹಳ ನಾಚಿಕೆಯಾಗತ್ತೆ…’ ಎಂದು ಗಟ್ಟಿಯಾಗಿ ಕೂಗಾಡುತ್ತಿದ್ದರೆ ತಂದೆ-ತಾಯಿ ನೆಲ ನೋಡಿದರು. ಅವರ ನೋಟ ಚಪ್ಪಲಿಗಳಿಲ್ಲದ ತಮ್ಮ ಪಾದಗಳ ಕಡೆಗೂ ಆರು ಸಾವಿರ ಬೆಲೆಯ ಮಗನ ಷೂಗಳ ಕಡೆಗೂ ಹರಿದಾಡುತ್ತಿತ್ತು.

ಕೊಡುವುದು ಪ್ರೀತಿಯಲ್ಲ- ಏನು, ಯಾವಾಗ, ಎಷ್ಟು ಕೊಡಬೇಕೆಂದು ತಿಳಿದುಕೊಂಡು ಕೊಡುವುದು ನಿಜವಾದ ಆರೋಗ್ಯಕರವಾದ ಪ್ರೀತಿ. ಅವರ ಕಡೆಗೆ ನಿಮಗಿರುವ ಪ್ರೀತಿಯನ್ನು ಪೂ›ವ್ ಮಾಡುವುದಕ್ಕೋಸ್ಕರ ಕೊಡುವ ಬದಲು, ಅವರ ಭವಿಷ್ಯಕ್ಕೋಸ್ಕರ ಅವರ ಆಸೆಗಳನ್ನು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವುದನ್ನು ಕಲಿಸುವುದಕ್ಕೋಸ್ಕರ ಅಗತ್ಯ ಇರುವುದನ್ನು ಮಾತ್ರ ಕೊಡಬೇಕು. ಕ್ರಿಕೆಟರ್ ರೋಹಿತ್ ಶರ್ವನ ತಂದೆ ಮಗನನ್ನು ಸರಿಯಾಗಿ ಪೋಷಣೆ ಮಾಡಲಾಗದೆ ತನ್ನ ತಂದೆಯ (ರೋಹಿತ್​ನ ತಾತ) ಮನೆಯಲ್ಲಿ ಬಿಟ್ಟರು. ರೋಹಿತ್ ಅಲ್ಲಿ ಇಲ್ಲಿ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮಾಡಿದ. ಸಿ.ಎ. ಓದುತ್ತಿದ್ದ ದಿನಗಳಲ್ಲಿ ಮಧ್ಯಾಹ್ನದ ಲಂಚ್​ಗೆ ಅಂತ ಮನೆಯಲ್ಲಿ ಮೂವತ್ತು ಪೈಸೆ ಕೊಡುತ್ತಿದ್ದರು. ಅದಕ್ಕೆ ಒಂದು ದೋಸೆ ಬರುತ್ತಿತ್ತು, ‘ಚಟ್ಣಿ ಫ್ರೀಯಾದ್ದರಿಂದ ಐದಾರು ಬಾರಿ ಹಾಕಿಸಿಕೊಂಡು ತಿನ್ನುತ್ತಿದ್ದೆ’ ಎಂದಿದ್ದಾನೆ ರೋಹಿತ್ ಶರ್ವ. ಇದನ್ನೆಲ್ಲ ರೋಮಾಂಟಿಸೈಸಿಂಗ್ ದ ಪಾಸ್ಟ್ ಎಂದು ಕೊಚ್ಚಿಕೊಳ್ಳುತ್ತಿಲ್ಲ. ಅರ್ಥ ಮಾಡಿಕೊಳ್ಳುವ ವಯಸ್ಸು ಬಂದ ಕೂಡಲೇ ಇಲ್ಲಸಲ್ಲದ ಹೆಚ್ಚುಗಾರಿಕೆಗೆ ಹೋಗದೇ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಮಕ್ಕಳಿಗೆ ತಿಳಿಸಿದರೆ ಅವರು ಅರ್ಥ ಮಾಡಿಕೊಳ್ಳುತ್ತಾರೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...