ಹುಬ್ಬಳ್ಳಿ : ಧರ್ಮದ ಮಾರ್ಗದಲ್ಲಿ ನಡೆಯುವುದು ಹೇಗೆಂಬ ಸಂಸ್ಕಾರವನ್ನು ರಾಜಮಾತಾ ಜೀಜಾಬಾಯಿ ಅವರು ತಮ್ಮ ಪುತ್ರ ಛತ್ರಪತಿ ಶಿವಾಜಿ ಮಹಾರಾಜರಿಗೆ ನೀಡಿದರು. ಇದೇ ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜರಿಗೆ ಹಿಂದು ಧರ್ಮದ ರಕ್ಷಣೆ ಮಾಡಲು ನಾಂದಿಯಾಯಿತು ಎಂದು ಪಾಲಿಕೆ ಸದಸ್ಯೆ ಪೂಜಾ ಸತೀಶ ಶೇಜವಾಡಕರ ಹೇಳಿದರು.
ಇಲ್ಲಿನ ಜೀಜಾಮಾತಾ ಮರಾಠಾ ಮಹಿಳಾ ಮಂಡಳ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀಜಾಮಾತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀಜಾಬಾಯಿಯವರು ನೀಡಿದ ಸಂಸ್ಕಾರವೇ ಇಂದು ಹಿಂದು ಧರ್ಮದ ಉಳಿವಿಗೆ ಮುಖ್ಯ ಕಾರಣ. ಪ್ರಸ್ತುತ ಕಾಲಮಾನದಲ್ಲಿ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಾವೆಲ್ಲ ಜೀಜಾಬಾಯಿಯಂತೆ ನಮ್ಮ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.
ಸುಮಾ ದಳವಿ, ಮಂಜುಳಾ ಪರಬತ್ ಅತಿಥಿಗಳಾಗಿದ್ದರು. ವಿದ್ಯಾ ಪವಾರ ಅಧ್ಯಕ್ಷತೆ ವಹಿಸಿದ್ದರು.
ರೇಖಾ ಕಾಮಕರ, ರುಕ್ಮಿಣಿಬಾಯಿ ಜಾಧವ, ಮಧುಮತಿ ಶಿಂಧೆ, ಮೀರಾಬಾಯಿ, ಮನಿಷಾ ಶಿಂಧೆ, ಜೊ್ಯೕತಿ ಕಾಮಕರ್, ರೋಹಿಣಿ ಗಾಯಕವಾಡ, ಭಾರತಿ ಮಾನೆ, ರೀತಿಕಾ ಪವಾರ, ಸಂಗೀತಾ ಚವ್ಹಾಣ, ಮಂಜುಳಾ ಶಿಂಧೆ, ಜಯಾ ಜಾಧವ, ಶೋಭಾ ಇಂಗಳೆ ಹಾಗೂ ಇತರರು ಉಪಸ್ಥಿತರಿದ್ದರು. ಮಾಧವಿ ಚವ್ಹಾಣ ನಿರೂಪಿಸಿದರು.