ನೀರಿನ ತೊಟ್ಟಿಯಲ್ಲಿ ಬಿದ್ದು ಮಕ್ಕಳಿಬ್ಬರ ದುರ್ಮರಣ

ತುಮಕೂರು: ನೀರಿನಲ್ಲಿ ಬಿದ್ದು ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟ ಧಾರುಣ ಘಟನೆ ಕುಣಿಗಲ್​ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ.

ಇಬ್ಬರು ಮಕ್ಕಳ ಹೆಸರೂ ಭರತ್​ ಎಂದಾಗಿದ್ದು ಅದರಲ್ಲಿ ಒಬ್ಬಾತನಿಗೆ 3 ವರ್ಷ ಹಾಗೂ ಇನ್ನೊಬ್ಬವನಿಗೆ 2 ವರ್ಷ ವಯಸ್ಸು. ತುರುವೇಕೆರೆ ಹಡವನಹಳ್ಳಿ ಗೊಲ್ಲರಹಟ್ಟಿ ಶಂಕ್ರಪ್ಪ, ವನಿತಾ ಮತ್ತು ತಿಪಟೂರು ತಾಲೂಕಿನ ಅರಳಗುಪ್ಪೆ ಗೊಲ್ಲರಹಟ್ಟಿಯ ಪರಮೇಶ್​, ಲಕ್ಷ್ಮೀ ದಂಪತಿಗಳ ಮಕ್ಕಳಾದ ಇಬ್ಬರೂ ಅಜ್ಜಿಯ ಮನೆಗೆ ಬಂದಿದ್ದರು. ಅಲ್ಲೇ ಮನೆ ಬಳಿ ನೀರಿನತೊಟ್ಟಿ ಬಳಿ ಆಟವಾಡುತ್ತಿದ್ದಾಗ ಅದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕುಣಿಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.