ವಿದ್ಯುತ್​ ತಂತಿ ಸ್ಪರ್ಶಿಸಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಬೆಂಗಳೂರು: ಮತ್ತಿಕೆರೆಯ ನೇತಾಜಿ ಸರ್ಕಲ್​ ಬಳಿ ವಿದ್ಯುತ್​ ತಂತಿ ಸ್ಪರ್ಶಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮತ್ತಿಕೆರೆ ನಿವಾಸಿಗಳಾದ ಅಂಬರೀಶ್, ರಮಾಬಾಯಿ ದಂಪತಿ ಪುತ್ರ ಲಿಖಿತ್​​ (14) ಮೃತಪಟ್ಟ ಬಾಲಕ. ಆಟವಾಡುವಾಗ ಚೆಂಡು ತರಲು ಕಟ್ಟಡವೇರಿದ್ದ ಬಾಲಕ ಹೈಟೆನ್ಷನ್​​ ವೈರ್​ ತಗುಲಿ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದ. ಈ ಅವಘಡದಲ್ಲಿ ಬಾಲಕನಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಹೈಟೆನ್ಷನ್ ವೈರ್ ಹಾದು ಹೋಗಿರುವ ಜಾಗದಲ್ಲಿ ಮನೆ ಕಟ್ಟಬಾರದು. ಮನೆ ನಿರ್ಮಿಸಬೇಕು ಎಂದರೆ ನಾಲ್ಕು ಮೀಟರ್ ಅಂತರ ಇರಬೇಕು ಎಂದು ಕೆಪಿಟಿಸಿಎಲ್ ಸ್ಥಳೀಯ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಆದರೂ, ನಿಯಮ ಮೀರಿ ಮನೆ ನಿರ್ಮಾಣ ಮಾಡಿದ್ದರು ಎಂಬ ಆರೋಪ ಇದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *