ಸೊಲ್ಲಾಪುರದಲ್ಲಿ ಬಾಲಕರು ಪತ್ತೆ

ಬಾಗಲಕೋಟೆ: ನವನಗರದ ಸೆಕ್ಟರ್ ನಂ.28ರಲ್ಲಿ ಶನಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಪತ್ತೆಯಾಗಿದ್ದ ನಾಲ್ವರ ಪೈಕಿ ಒಬ್ಬ ಬಾಲಕ ವಿಜಯಪುರದಲ್ಲಿ ತಪ್ಪಿಸಿಕೊಂಡಿದ್ದು, ಆತನ ಹುಡá-ಕಾಟ ಮುಂದá-ವರಿದಿದೆ.

ಶಾಲೆಗೆ ಹೋಗá-ವುದಾಗಿ ಮನೆಯಲ್ಲಿ ಹೇಳಿ ಗೌತಮ ಸೂರ್ಯವಂಶಿ (12), ಆತನ ಸಹೋದರ ಪ್ರೀತಂ ಸೂರ್ಯವಂಶಿ (10), ಪ್ರಜ್ವಲ್ (8), ರಾಜು ಗೌಡರ (10) ಮನೆಯಿಂದ ಶನಿವಾರ ಬೆಳಗ್ಗೆ ಹೋಗಿದ್ದರು. ಸಂಜೆವರೆಗೂ ಮಕ್ಕಳು ಮನೆಗೆ ಬರದಿದ್ದಕ್ಕೆ ಪಾಲಕರು ಆತಂಕಗೊಂಡು ಶನಿವಾರ ತಡರಾತ್ರಿ ನವನಗರ ಠಾಣೆಯಲ್ಲಿ ದೂರು ನೀಡಿದ್ದರು.

ನಾಲ್ವರು ಬಾಲಕರು ಶನಿವಾರ ಮಧ್ಯಾಹ್ನ ಬಾಗಲಕೋಟೆಯಿಂದ ಬಸವ ಎಕ್ಸ್​ಪ್ರೆಸ್ ಮೂಲಕ ಸೊಲ್ಲಾಪುರ ಮಾರ್ಗವಾಗಿ ಮುಂಬೈಗೆ ಹೊರಟಿದ್ದರು. ಸೊಲ್ಲಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಅಧಿಕಾರಿಗೆ ಅನá-ಮಾನ ಬಂದು ವಿಚಾರಿಸಿದಾಗ ಮಕ್ಕಳು ಮನೆಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಕ್ಕಳ ಸಹಾಯವಾಣಿ ಸುರ್ಪಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಭಾನá-ವಾರ ಬೆಳಗ್ಗೆ ಬಾಗಲಕೋಟೆಯಲ್ಲಿರುವ ಪಾಲಕರಿಗೆ ಅವರನ್ನು ಒಪ್ಪಿಸಲಾಗಿದೆ. ಆದರೆ, ಮಕ್ಕಳನ್ನು ಸೊಲ್ಲಾಪುರದಿಂದ ಕರೆದá-ಕೊಂಡು ಬರá-ತ್ತಿದ್ದಾಗ ವಿಜಯಪುರದಲ್ಲಿ ಈ ಮೂವರು ವಿದ್ಯಾರ್ಥಿಗಳನ್ನು ಮುಂಬೈಗೆ ಕರೆದುಕೊಂಡು ಹೊರಟಿದ್ದ ಇನ್ನೊ್ಬ ಬಾಲಕ ರಾಜು ಗೌಡರ ಸಹಾಯವಾಣಿ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆತನಿಗಾಗಿ ಹುಡá-ಕಾಟ ನಡೆಸಿದ್ದಾರೆ.

ಶಾಲೆಗೆ ಹೋಗಲು ಮನಸ್ಸು ಇರಲಿಲ್ಲ:ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಆಸಕ್ತಿ ಇರಲಿಲ್ಲ. ಇದೇ ವೇಳೆ ಶಾಲೆಗೆ ಹೋಗದ ಸ್ನೇಹಿತ ರಾಜು, ಮುಂಬೈನಲ್ಲಿ ತಮ್ಮ ತಾತ ನಿಧನರಾಗಿದ್ದು ಅಲ್ಲಿಗೆ ನಾವೆಲ್ಲ ಹೋಗೋಣ ಎಂದು ಹೇಳಿದ್ದ. ಶಾಲೆಗೆ ಹೋಗá-ವುದು ತಪ್ಪುತ್ತಲ್ಲ ಎಂದು ಇನ್ನುಳಿದವರು ಆತನ ಜತೆ ಸೇರಿ ರೈಲಿನಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು.