ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಬಿಜೆಪಿ ನಿಯೋಗ ಮನವಿ

ಚಿಕ್ಕಮಗಳೂರು: ಒಂದು ತಿಂಗಳಿನಿಂದ ನಗರದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನೀರು ಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಿಜೆಪಿ ನಿಯೋಗ ಆಗ್ರಹಿಸಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ ಮಾತನಾಡಿ, ಈ ಹಿಂದೆ 2 ಅಥವಾ 3 ದಿನಕ್ಕೊಮ್ಮೆ ನಗರಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ 7 ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ರಾಮನಹಳ್ಳಿ ಫಿಲ್ಟರ್ ಬೆಡ್ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಿರೇಕೊಳಲೆ ಕೆರೆ ನೀರನ್ನು ಸರಬರಾಜು ಮಾಡುತ್ತಿದ್ದ ವಾರ್ಡ್​ಗಳಿಗೂ ಈಗ ಯಗಚಿ ನೀರನ್ನೇ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಇಡೀ ನಗರಕ್ಕೆ ಬೇಲೂರಿನ ಯಗಚಿಯಿಂದ ಬರುವ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಲೂರಿನ ಯಗಚಿ ಪಂಪ್ ಹೌಸ್​ನಲ್ಲಿ ನಿತ್ಯ ಅನಿಯಮಿತ ವಿದ್ಯುತ್ ನಿಲುಗಡೆಯಿಂದ ಪ್ರತಿದಿನ ಕೇವಲ 10 ಗಂಟೆ ಮಾತ್ರ ಪಂಪ್ ಮಾಡಲಾಗುತ್ತಿದೆ. ಬೇಲೂರಿನ ಯಗಚಿ ಪಂಪ್ ಹೌಸ್​ಗೆ ಮೆಸ್ಕಾಂನಿಂದ ಅಳವಡಿಸಿದ ಎಕ್ಸ್​ಪ್ರೆಸ್ ಲೈನ್​ನಿಂದ ಗ್ರಾಮಾಂತರ ಲೈನ್​ಗೆ ಲಿಂಕ್ ಮಾಡಿರುವುದೇ ಇದಕ್ಕೆ ಕಾರಣ. ಅಪರ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಕುಮಾರ್ ಅವರಿಗೆ ಹಾಸನ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜತೆ ಕೂಡಲೇ ರ್ಚಚಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಮತ್ತು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಪಕ್ಷದ ನಗರಾಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ರಾಜಪ್ಪ, ಜಿಲ್ಲಾ ಖಜಾಂಚಿ ನಾರಾಯಣ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪ್ಪಾಜ್ ನೇತೃತ್ವ ವಹಿಸಿ ಸಮಸ್ಯೆ ಬಗ್ಗೆ ರ್ಚಚಿಸಿದರು. ಕೆ.ಪಿ.ವೆಂಕಟೇಶ್, ದಿನೇಶ್, ಸಚಿನ್, ರಾಜು ಮತ್ತು ನಾಗೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *