Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ದೇವಾಲಯದಲ್ಲಿ ಮೊಳಗಿದ ಓಂ ನಮಃ ಶಿವಾಯ

Tuesday, 13.02.2018, 10:36 PM       No Comments

ಚಿಕ್ಕಮಗಳೂರು: ಎಲ್ಲಿ ನೋಡಿದರೂ ಶಿವನಾಮ ಜಪ-ತಪ. ಶಿವನ ಸ್ಮರಣೆಯ ಜತೆ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರದ ಘೊಷಣೆ ಮೊಳಗುತ್ತಿತ್ತು.

ಮಂಗಳವಾರ ನಗರ ಹಾಗೂ ಸುತ್ತಮುತ್ತಲ ದೇವಾಲಯಗಳಲ್ಲಿ ಜನರು ಮಹಾ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದರು. ಬೆಳಗ್ಗೆಯಿಂದ ಶಿವ ಭಕ್ತರು ಜಾಗರಣೆ ಮಾಡಿದರು.

ನುಸುಕಿನಲ್ಲಿಯೇ ದೇವಾಲಯಗಳಲ್ಲಿ ಸ್ವಚ್ಛತೆ ಮೂಲಕ ಹೂ, ತಳಿರು ತೋರಣ ಕಟ್ಟಿ ಸಿಂಗರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಶಿವ ದೇವಾಲಯಗಳಲ್ಲಿ ಲಿಂಗಕ್ಕೆ ವಿಶೇಷ ತೀರ್ಥ ಅಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆಯ ಪೂಜೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮುಖ್ಯ ಶಿಕ್ಷಕರಾದ ರವಿ ಶಿವಕುಮಾರ್ ನೇತೃತ್ವದಲ್ಲಿ 150-200 ಭಕ್ತರು ಶ್ರೀ ಕಾಮಧೇನು ಮಹಾ ಶಕ್ತಿ ಗಣಪತಿ ದೇವಾಲಯದಲ್ಲಿ ಶಿವನಿಗೆ ಪ್ರಿಯವಾದ ವಿವಿಧ ಆಸನಗಳನ್ನು ಮಾಡಿದರು. ವಿಶೇಷವಾದ ಏಕಾದಶ ರುದ್ರ ನಮಸ್ಕಾರ ಸಹ ಮಾಡಲಾಯಿತು.

ಹಂಪಾಪುರ, ತೋರಣಮಾವು, ಮಗುಳುವಳ್ಳಿಯಲ್ಲಿರುವ ಬೃಹತ್ ಶಿವನಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯಗಳಲ್ಲಿಯೂ ಪೂಜೆ ಪುನಸ್ಕಾರ ನಡೆಯಿತು. ನಗರದ ಶ್ರೀ ಬೋಳರಾಮೇಶ್ವರ ದೇವಾಲಯ, ಬಸವನಹಳ್ಳಿಯ ಶ್ರೀ ಗಣಪತಿ ಓಂಕಾರೇಶ್ವರ ದೇವಾಲಯ, ಅರವಿಂದ ನಗರದ ಶ್ರೀ ಸೋಮೇಶ್ವರ ದೇವಾಲಯ, ಕೋಟೆ ಹರಿಹರೇಶ್ವರ ದೆವಾಲಯ, ರಾಮನಹಳ್ಳಿಯ ರಾಮೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಸಾಲು ಸಾಲಾಗಿ ಗಂಟೆ ಗಂಟೆಲೆ ನಿಂತು ಶಿವನ ದರ್ಶನ ಪಡೆದು ಪುನೀತರಾದರು.

ಕೆಲ ದೇವಸ್ಥಾನಗಳಲ್ಲಿ ಸಿಹಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಆಗುತ್ತಲೇ ದೇವಸ್ಥಾಗಳಲ್ಲಿ ಜನ ಸಂದಣೆ ಹೆಚ್ಚಾಗತ್ತ ಬಂತು. ಸಂಜೆ ವೇಳೆಗೆ ಸರದಿಯಲ್ಲಿ ಗಂಟೆ ಗಂಟಲೆ ಜನ ನಿಂತು ದೇವರ ದರ್ಶನ ಪಡೆಯುತ್ತಿದ್ದರು.

Leave a Reply

Your email address will not be published. Required fields are marked *

Back To Top