ಸಿದ್ಧಗಂಗಾ ಶ್ರೀಗೆ ಭಾರತ ರತ್ನಕ್ಕೆ ಒತ್ತಾಯಿಸಿ ಸಹಿ ಸಂಗ್ರಹ

ಚಿಕ್ಕಮಗಳೂರು: ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಪ್ರದಾನ ಮಾಡಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆ ಚಿಕ್ಕಮಗಳೂರು ಘಟಕವು ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಸಿತು.

ಸಹಿ ಸಂಗ್ರಹ ಅಭಿಯಾನಕ್ಕೆ ಸಖರಾಯಪಟ್ಟಣದ ಗಣೇಶ್ ಗೌಡ ಚಾಲನೆ ನೀಡಿದರು. ಶ್ರೀರಾಮ ಸೇನೆ ಜಿಲ್ಲಾ ಪ್ರಮುಖ್ ಪ್ರೀತೇಶ್ ಮಾತನಾಡಿ, ನಡೆದಾಡುವ ದೇವರು ಎಂದೇ ಪ್ರಸಿದ್ಧಿಯಾಗಿರುವ ಗುರುಗಳು ತ್ರಿವಿಧ ದಾಸೋಹಿ ಹಾಗೂ ಆಧುನಿಕ ಬಸವಣ್ಣ ಎನಿಸಿದ್ದಾರೆ. ಸ್ವಾಮೀಜಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿದರೆ ಪ್ರಶಸ್ತಿಯ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದರು.

ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಮೋಹನ್​ರಾಜ್ ಗೌಡ, ಶರತ್, ದರ್ಶನ್ ಇದ್ದರು.

Leave a Reply

Your email address will not be published. Required fields are marked *