Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ನಗರದಲ್ಲಿ ಫ್ಲೆಕ್ಸ್ ರಾಜಕೀಯ

Tuesday, 13.02.2018, 10:44 PM       No Comments

ಚಿಕ್ಕಮಗಳೂರು: ಮಹಾ ಶಿವರಾತ್ರಿ ಶುಭಾಶಯ ಕೋರಿ ಹಾಕಿದ್ದ ಜೆಡಿಎಸ್ ಮುಖಂಡರೊಬ್ಬರ ಫ್ಲೆಕ್ಸ್ ತೆಗೆದು ಹಾಕಿ ಶಾಸಕ ಸಿ.ಟಿ.ರವಿ ಅವರ ಫ್ಲೆಕ್ಸ್ ಹಾಕಿದ ಬಗ್ಗೆ ಆರೋಪ ಕೇಳಿ ಬಂದಿದ್ದು ಜೆಡಿಎಸ್ ಕಾರ್ಯಕರ್ತರು ಆ ಫ್ಲೆಕ್ಸ್ ಅನ್ನು ಕಿತ್ತು ಹಾಕಿ ಮತ್ತೆ ಜೆಡಿಎಸ್ ಫ್ಲೆಕ್ ಅಳವಡಿಸಿದ್ದಾರೆ.

ಜೆಡಿಎಸ್ ಮುಖಂಡ ಡಿ.ಎಚ್.ಹರೀಶ್ ನಗರಸಭೆಯಿಂದ ಅನುಮತಿ ಪಡೆದು ಶ್ರೀ ಬೋಳ ರಾಮೇಶ್ವರ ದೇವಾಲಯದ ಸಮೀಪ ಸೋಮವಾರ ಸಂಜೆ ತಾವು ಶುಭಾಶಯ ಕೋರಿದ ಫ್ಲೆಕ್ಸ್ ಹಾಕಿದ್ದರು. ಮಂಗಳವಾರ ಬೆಳಗ್ಗೆ ಗಮನಿಸಿದಾಗ ಈ ಜಾಗದಲ್ಲಿ ಶಾಸಕ ಸಿ.ಟಿ.ರವಿ ಅವರ ಚಿತ್ರ ಹಾಗೂ ಸಂದೇಶ ಇರುವ ಫ್ಲೆಕ್ಸ್ ರಾರಾಜಿಸುತ್ತಿತ್ತು. ಈ ಬಗ್ಗೆ ನಗರಸಭೆಗೆ ದೂರು ನೀಡಿದ ಜೆಡಿಎಸ್ ಕಾರ್ಯಕರ್ತರು ಸ್ವತಃ ಆ ಫ್ಲೆಕ್ಸ್ ಅನ್ನು ತೆರವುಗೊಳಿಸಿ ಹರೀಶ್ ಅವರ ಫ್ಲೆಕ್ಸ್ ಅನ್ನು ಮತ್ತೆ ಅಳವಡಿಸಿದ್ದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top