ಬಿಜೆಪಿಯಿಂದ ಕಾರ್ವಿುಕರ ಸಮಸ್ಯೆ ನಿರ್ಲಕ್ಷ್ಯ

ಚಿಕ್ಕಮಗಳೂರು: ಜಿಲ್ಲೆಯ ಕಾಫಿ, ಅಡಕೆ ಬೆಳೆಗಾರರ, ತೋಟದ ಕಾರ್ವಿುಕರ, ಜನಸಾಮಾನ್ಯರ ಸಮಸ್ಯೆಗಳನ್ನು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಿರ್ಲಕ್ಷಿಸಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ದೂರಿದರು.

ಜಿಲ್ಲಾ ಸಿಪಿಐ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಫಿ ಉದ್ಯಮ ನೆಲಕಚ್ಚಿದೆ. ಕಾರ್ವಿುಕರಿಗೆ ಕೆಲಸ ದೊರೆಯುತ್ತಿಲ್ಲ. ಶೋಭಾ ಕರಂದ್ಲಾಜೆ ಅವರು ಪ್ರಧಾನಿ ಬಳಿಗೆ ನಿಯೋಗ ಒಯ್ದು ಸಮಸ್ಯೆ ಬಗೆಹರಿಸಲು ಪ್ರಯತ್ನವೇ ಪಟ್ಟಿಲ್ಲ ಎಂದು ಆರೋಪಿಸಿದರು.

ನಾವು ಶೋಭಾ ಅವರಿಗೆ ಮತ ಕೇಳುತ್ತಿಲ್ಲ. ನರೇಂದ್ರ ಮೋದಿಗೆ ವೋಟು ಕೇಳುತ್ತಿದ್ದೇವೆ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಬಿಜೆಪಿ ಮಾಡುತ್ತಿರುವ ಮೋಸ, ಕುತಂತ್ರವನ್ನು ಅವರ ಕಾರ್ಯಕರ್ತರು, ಮುಖಂಡರೂ ನಡೆಸುತ್ತಿದ್ದಾರೆ. ಇವುಗಳನ್ನು ಸಿಪಿಐ ಜನರಿಗೆ ಮನದಟ್ಟು ಮಾಡಬೇಕು ಎಂದರು.

ಮುಖಂಡರಾದ ಕೆ.ಗುಣಶೇಖರನ್, ರಾಧಾ ಸುಂದರೇಶ್, ಜಿ.ರಘು, ಎಸ್.ವಿಜಯಕುಮಾರ್ ಇತರರಿದ್ದರು.