ಚಿಕ್ಕೋಡಿ: ಪಾಕಿಸ್ತಾನ, ಚೀನಾ ಹುಟ್ಟಡಗಿಸಿಚಿಕ್ಕೋಡಿ: ದೇಶದ ಯೋಧರ ಸಾವಿಗೆ ಕಾರಣವಾಗುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ತಕ್ಷಣ ಯುದ್ಧ ಸಾರಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ವಿಕ್ರಂ ಬಣಗೆ ಮಾತನಾಡಿ, ದೇಶದ ಉನ್ನತಿ ಮತ್ತು ಏಳ್ಗೆ ಸಹಿಸದ ಚೀನಾ ಮತ್ತು ಪಾಕಿಸ್ತಾನ ಸಂಚು ಮಾಡುತ್ತ ಉಗ್ರವಾದಿಗಳನ್ನು ಬೆಳೆಸಿ ನಮ್ಮ ದೇಶದ ಮೇಲೆ ದಾಳಿ ಮಾಡಿಸುತ್ತಿವೆ. ದೇಶದ ಇತಿಹಾಸದಲ್ಲಿ ಬೇರೆ ದೇಶಗಳ ಮೇಲೆ ಆಕ್ರಮಣ ಹಾಗೂ ದಾಳಿ ಮಾಡಿಲ್ಲ. ಆದರೆ ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಉಗ್ರವಾದಿ ಸಂಘಟನೆಗಳು ಪಾಕಿಸ್ತಾನದಲ್ಲಿದ್ದುಕೊಂಡು ಲಕ್ಷಾಂತರ ಭಾರತೀಯರನ್ನು ಸಾಯಿಸುತ್ತೇವೆ ಎಂದು ಹೇಳಿಕೆ ನೀಡುತ್ತಿವೆ.ಹೀಗಾಗಿ ಈ ಎರಡು ದೇಶಗಳ ಮೇಲೆ ಯುದ್ಧ ಸಾರಿದರೆ ಉಗ್ರವಾದ ಸಂಪೂರ್ಣ ನಾಶವಾಗುತ್ತದೆ ಎಂಬ ಸಂಕಲ್ಪದಿಂದ ಪ್ರಮೋದಜೀ ಮುತಾಲಿಕ ರಾಜ್ಯಾಧ್ಯಕ್ಷರ ಅಪ್ಪಣೆಯ ಮೇರೆಗೆ ರಾಜ್ಯಾದ್ಯಂತ ಶ್ರೀರಾಮ ಸೇನೆ ಪಾಕಿಸ್ಥಾನ ಮತ್ತು ಚೀನಾ ಮೇಲೆ ಯುದ್ದ ಸಾರಿದರೇ ಮೋದಿಯವರಿಗೆ ಬೆಂಬಲ ಹಾಗೂ ಸೇನೆಯ ಜವಾನರಿಗೆ ಬೆಂಬಲ ಸೂಚಿಸಲು ಮನವಿ ಮಾಡುತ್ತಿರುವುದಾಗಿ ಮನವಿ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಂ.ಸಂಗ್ರೊಳ್ಳಿ, ಶಿವಕುಮಾರ ದ್ರಾಕ್ಷಿ, ಕಲ್ಮೇಶ್ವರ ಕುಂಬಾರ, ರಾಮು ಕಮತೆ, ರಾಹುಲ ಮಾಳಿ, ಬಸವರಾಜ ಕಲ್ಯಾಣಿ ,ತೇಜಸ್ ಖೋತ, ಕೃಷ್ಣಾ ಕುಂಬಾರ, ಜಗದೀಶ ಗಣಾಚಾರಿ, ಬಸವರಾಜ ಜಾಧವ, ಮಹಾದೇವ ದ್ರಾಕ್ಷಿ, ಕೃಷ್ಣಾ ಕುಂಬಾರ, ಸಾಗರ ದ್ರಾಕ್ಷಿ ಸೇರಿ ಶ್ರೀರಾಮಸೇನೆ ಪದಾಧಿಕಾರಿಗಳು ಇದ್ದರು.