ಚಿಕ್ಕೋಡಿ: ಸಾಧನೆ ಮಾಡಲು ಸಕಾರಾತ್ಮಕತೆ ಅಗತ್ಯ

ಚಿಕ್ಕೋಡಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆಗೈಯಲು ತಾಳ್ಮೆ, ಸಹನೆ, ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದು ರ್ನಾಟಕ ಹಾಗೂ ಗೋವಾ ರಾಜ್ಯದ ರಿಲಯನ್ಸ್ ಆರೋಗ್ಯ ಜೀವವಿಮೆಯ ನಿರ್ದೇಶಕಿ ಅಶ್ವಿನಿ ಪಾಟೀಲ ಹೇಳಿದ್ದಾರೆ. ಪಟ್ಟಣದ ಕೇಶವ ಕಲಾಭವನದಲ್ಲಿ ಬಸವಜ್ಯೋತಿ ಯೂಥ್ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪರೀಕ್ಷೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತಮ್ಮ ಮನಸ್ಸನ್ನು ನಿರಾಳ ಮಾಡಿಕೊಂಡು ಪ್ರತಿಯೊಂದು ವಿಷಯಗಳ ಮನನ ಮಾಡಿಕೊಂಡು ಅಭ್ಯಸಿಸಬೇಕು. ದಿನನಿತ್ಯದ ಚಟುವಟಿಕೆಗಳೊಡನೆ ಎಂಟು ಗಂಟೆ ನಿದ್ದೆ ಹಾಗೂ ಪರಿಮಿತ ಆಹಾರ ಸೇವಿಸಬೇಕು. ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಫಲ ಸಿಗುವುದು ಖಚಿತ ಎಂದರು. ಕಾರ್ಯಾಗಾರದಲ್ಲಿ ಚಿಕ್ಕೋಡಿ ಪಟ್ಟಣದ ವಿವಿಧ ಪ್ರೌಢಶಾಲೆಗಳ ಸುಮಾರು 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚಿಕ್ಕೋಡಿ ಸಿ.ಟಿ.ಇ. ಸಂಸ್ಥೆಯ ಜಂಟಿ ಆಡಳಿತಾಧಿಕಾರಿ ಎಸ್.ಎಸ್. ಕುಲಕರ್ಣಿ, ಪುರಸಭೆ ಸದಸ್ಯರಾದ ನಾಗರಾಜ ಮೇದಾರ, ಸೋಮು ಗಾವನಾಳೆ, ಸಿದ್ದಪ್ಪ ಡಂಗೇರ್, ಬಸವಜ್ಯೋತಿ ಯೂಥ್ ಫೌಂಡೇಷನ್ ಉಪಾಧ್ಯಕ್ಷ ಮಹೇಶ ನೂಲಿ, ನಿರ್ದೇಶಕರಾದ ಶಿವರಾಜ ಜೊಲ್ಲೆ, ಸದಸ್ಯರಾದ ಅಮಿತ ಮಗದುಮ್ಮ, ಸಾಗರ ಚೌಗುಲೆ, ರವಿ ಸಾವಜಿ, ಅಧೀಕ್ಷಕ ಮಹಾದೇವ ಪಾಟೀಲ, ವಿ.ಆರ್. ಭಿವಸೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜು ಡೋಂಗರೆ ಸ್ವಾಗತಿಸಿದರು. ಎಂ.ಎ.ಸನದಿ ನಿರೂಪಿಸಿ, ವಂದಿಸಿದರು.