ಚಿಕ್ಕೋಡಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು


ಚಿಕ್ಕೋಡಿ: ತಾಲೂಕಿನ ಖಡಕಲಾಟ ಕ್ರಾಸ್‌ನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾನೆ.
ಚಿಕ್ಕೋಡಿ ಪಟ್ಟಣದ ಸಾದಿಕ್ ಅಬ್ದುಲ್‌ಖಾದರ ಕೊಚ್ಚರಗಿ(36) ಮೃತ ವ್ಯಕ್ತಿ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರವಾಹನ ಮತ್ತು ಟ್ಯಾಂಕರ್ ಮಧ್ಯೆ ಇತ್ತೀಚೆಗೆ ಡಿಕ್ಕಿ ಸಂಭವಿಸಿ ಈತ ಗಂಭೀರವಾಗಿ ಗಾಯಗೊಂಡಿದ್ದನು.

ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *