25.1 C
Bangalore
Friday, December 6, 2019

ಬಸ್‌ಗೆ ಜೋತು ಬಿದ್ದು ಪ್ರಯಾಣ!

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಸಿದ್ರಾಮ ಇಟ್ಟಿ
ಚಿಕ್ಕಪಡಸಲಗಿ: ಜಮಖಂಡಿ ನಗರಕ್ಕೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲದ ಕಾರಣ ಪರದಾಡುವಂತಾಗಿದ್ದು, ತರಗತಿಗಳನ್ನು ತಪ್ಪಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಅಡಿಹುಡಿ, ಗೋಠೆ, ಗದ್ಯಾಳ, ತೊದಲಬಾಗಿ, ಚಿಕ್ಕಪಡಸಲಗಿ ಆರ್‌ಸಿ, ಜನವಾಡ ಆರ್‌ಸಿ, ಕವಟಗಿ ಆರ್‌ಸಿ, ಚಿಕ್ಕಪಡಸಲಗಿ, ಆಲಗೂರ ಗಡ್ಡಿ, ಆಲಗೂರ, ಕುಂಬಾರಹಳ್ಳ ಸೇರಿದಂತೆ ಅನೇಕ ಹಳ್ಳಿಗಳ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಮಖಂಡಿ ನಗರಕ್ಕೆ ಶಿಕ್ಷಣ ಕಲಿಯಲು ಹೋಗುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಬೆಳಗ್ಗೆ ಹೋಗಲು ಮತ್ತು ಸಂಜೆ ಗ್ರಾಮಗಳಿಗೆ ಆಗಮಿಸಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೆಲ ವಿದ್ಯಾರ್ಥಿಗಳು ಶಿಕ್ಷಣವೇ ಸಾಕು ಎಂದು ಕಾಲೇಜು ತೊರೆಯುತ್ತಿದ್ದಾರೆ.

ಕಿಕ್ಕಿರಿದು ತುಂಬುವ ಬಸ್
ಜಮಖಂಡಿ ವಿಜಯಪುರ ಮಾರ್ಗವಾಗಿ ತುಂಗಳ-ಜಮಖಂಡಿ, ಕಲಬೀಳಗಿ-ಜಮಖಂಡಿ, ಐಗಳಿ-ಜಮಖಂಡಿ, ವಿಜಯಪುರ-ಜಮಖಂಡಿ, ಕಾಜಿಬೀಳಗಿ-ಜಮಖಂಡಿ, ಸಾವಳಗಿ-ಜಮಖಂಡಿ ಬಸ್‌ಗಳು ಆಯಾ ವಾಯಾ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು, ಸಾರ್ವಜನಿಕರನ್ನು ತುಂಬಿಕೊಂಡು ಆಗಮಿಸುತ್ತವೆ.

ಚಿಕ್ಕಪಡಸಲಗಿ, ಆಲಗೂರ ಗಡ್ಡಿ, ಆಲಗೂರ, ಕುಂಬಾರಹಳ್ಳ ಗ್ರಾಮಗಳಿಗೆ ಆಗಮಿಸುವಷ್ಟರಲ್ಲಿ ಬಸ್‌ಗಳು ಸಂಪೂರ್ಣ ತುಂಬಿಕೊಂಡಿರುತ್ತವೆ. ಇದರಿಂದ ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಬಸ್‌ನ ಬಾಗಿಲಿನಲ್ಲೇ ಜೋತು ಬಿದ್ದು ಪ್ರಯಾಣಿಸುತ್ತಾರೆ. ಬೆಳಗ್ಗೆ 7.30 ರಿಂದ 8ರೊಳಗಾಗಿ ಒಂದೆರಡು ಬಸ್‌ಗಳನ್ನು ಹೆಚ್ಚಿಗೆ ಓಡಿಸಿದರೆ ಈ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕರು.

ಅಧಿಕಾರಿಗಳ ವಿರುದ್ಧ ಆಕ್ರೋಶ
ಜಮಖಂಡಿ ಘಟಕದಿಂದ ಬಸ್‌ಗಳ ಸೇವೆಯನ್ನು ವಿಸ್ತರಿಸದೆ ಇರುವುದರಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಇದಕ್ಕೆ ಘಟಕದ ಅಧಿಕಾರಿಗಳ ನಿರ್ಲಕ್ಷೃವೇ ಕಾರಣವಾಗಿದ್ದು, ತಕ್ಷಣ ಎಚ್ಚೆತ್ತುಕೊಂಡು ಸಂಬಂಧಿಸಿದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ವಾರದೊಳಗೆ ಓಡಿಸಬೇಕು. ಇಲ್ಲದಿದ್ದರೆ ಪಾಲಕರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಸಮಸ್ಯೆ ಸಾರಿಗೆ ಅಧಿಕಾರಿಗಳ ಗಮನಕ್ಕೂ ಇದ್ದರೂ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮಖಂಡಿ ಪಟ್ಟಣಕ್ಕೆ ಶಾಲೆಗೆ ಹೋಗುವ ನಮ್ಮ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ಅಲ್ಲದೆ, ಎಲ್ಲ ಬಸ್‌ಗಳು ಕಿಕ್ಕಿರಿದು ತುಂಬಿರುತ್ತವೆ. ಹೆಚ್ಚಿನ ಬಸ್ ಓಡಿಸಿದರೆ ಮಕ್ಕಳು ಅನುಕೂಲವಾಗುತ್ತದೆ. ಮೇಲಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಕ್ರಮ ಕೈಗೊಳ್ಳಬೇಕು.
ಸುರೇಶ ಹಂಚಿನಾಳ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಮಖಂಡಿ

ಚಿಕ್ಕಪಡಸಲಗಿ ಭಾಗದಲ್ಲಿನ ಬಸ್‌ಗಳ ಸಮಸ್ಯೆ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಜಮಖಂಡಿ ಡಿಪೋ ವ್ಯವಸ್ಥಾಪಕರ ಜತೆ ಮಾತನಾಡಿ ವಿಚಾರಿಸುತ್ತೇನೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ.
ಪಿ.ವಿ. ಮೇತ್ರಿ, ಎನ್‌ಡಬ್ಲುೃಕೆಆರ್‌ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಬಾಗಲಕೋಟೆ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...