ಜ್ಯೋತಿಷಿ ಮಾತಿಗೆ ಹೆದರಿ ಗ್ರಾಮವನ್ನೇ ತೊರೆದ ಜನರು

ಚಿಕ್ಕಮಗಳೂರು: ಚಂದ್ರ ಗ್ರಹಣದ ವೇಳೆ ಗ್ರಾಮಕ್ಕೆ ತೊಂದರೆಯಾಗಲಿದೆ ಎಂಬ ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿ ಗ್ರಾಮಸ್ಥರು ರಾತ್ರೋ ರಾತ್ರಿ ಊರನ್ನೇ ತೊರೆದಿರುವ ಘಟನೆ ಎನ್. ಆರ್ ಪುರ ತಾಲೂಕಿ ಕೈಮರ ಸಮೀಪದ ಸಿಗುವಾನಿ ಗ್ರಾಮದಲ್ಲಿ ನಡೆದಿದೆ.

ಚಂದ್ರ ಗ್ರಹಣದ ವೇಳೆ ದಿನದವೊತ್ತಿಗೆ ಗ್ರಾಮ ತೊರೆಯದಿದ್ದರೆ ಜನರು ರಕ್ತಕಾರಿ ಸಾಯಲಿದ್ದಾರೆ ಎಂದು ಕೇರಳ ಮೂಲದ ಜ್ಯೋತಿಷಿ ಎಚ್ಚರಿಕೆ ನೀಡಿದ್ದ. ಇದರಿಂದ ಆತಂಕಗೊಂಡ ಗ್ರಾಮಸ್ಥರು ತಾವು ಸಾಕಿದ ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಪಲಾಯನ ಮಾಡಿದ್ದಾರೆ .

ಗ್ರಾಮದಲ್ಲಿ ಸುಮಾರು 60 ಹಕ್ಕಿ-ಪಿಕ್ಕಿ ಕುಟುಂಬಗಳು ವಾಸಿಸುತ್ತಿವೆ. ಮಲೆಯಾಳಿ ಮಾಂತ್ರಿಕ ಮಾತಿಗೆ ಬೆಚ್ಚಿಬಿದ್ದು, ಮತ್ತೊಮ್ಮೆ ಅವರ ಗ್ರಾಮಕ್ಕೆ ಬರದಿರಲು ನಿರ್ಧರಿಸಿದ್ದಾರೆ. ಗುಳೆ ಹೋದವರು ಕುದ್ರೆಗುಂಡಿ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಗುಳೆ ಹೋಗಿರುವ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಎನ್.ಅರ್.ಪುರ ತಹಸೀಲ್ದಾರ್​ಗೆ ಸೂಚನೆ ನೀಡಿದ್ದಾರೆ

Leave a Reply

Your email address will not be published. Required fields are marked *