ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಆಯ್ಕೆ

ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘದ ಸಾಮಾನ್ಯ ಕ್ಷೇತ್ರದ 4 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಎಚ್.ಎಂ.ಶ್ಯಾಮ್ (1330), ಜಿ.ಎಸ್.ಚಂದ್ರಪ್ಪ (1072), ಕೊಪ್ಪ ತಾಲೂಕಿನ ಎಸ್.ಡಿ.ಮನೋಜ್ (155), ಕಡೂರು-ತರೀಕೆರೆ ಕೆ.ಎಸ್.ಮೋಹನ್ ಕುಮಾರ್(375) ಮತಗಳಿಂದ ಗೆಲುವು ಸಾಧಿಸಿದರು.

ನಗರದ ಜೆವಿಎಸ್ ಬಾಲಕಿಯರ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಮತ ಎಣಿಕೆ ನಡೆಯಿತು. ಚುನಾವಣಾಧಿಕಾರಿ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೃಷ್ಣೇಗೌಡ ಹಾಗೂ ಸಹಾಯಕ ಚುನಾವಣಾಧಿಕಾರಿ ಸೀನಪ್ಪ ಗೌಡ ಅವರು ಆಯ್ಕೆ ಪ್ರಕಟಿಸಿದರು.

2018-21ನೇ ಸಾಲಿಗೆ ನಡೆದ ಈ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಎರಡು ಸಾಮಾನ್ಯ ಸ್ಥಾನಗಳಿಗೆ ಒಟ್ಟು 14 ಮಂದಿ ಕಣದಲ್ಲಿದ್ದು, ಸ್ಪರ್ಧೆಯೊಡ್ಡಿದ್ದರು. ಉಳಿದಂತೆ ಚುನಾವಣೆ ನಡೆದ ಇನ್ನೆರಡು ಸಾಮಾನ್ಯ ಕ್ಷೇತ್ರಗಳಲ್ಲಿ ತಲಾ ಇಬ್ಬರು ಮಾತ್ರ ಸ್ಪರ್ಧಿಸಿದ್ದರು.

ಅವಿರೋಧ ಆಯ್ಕೆಗೊಂಡವರು:

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಚಿಕ್ಕಮಗಳೂರು ತಾಲೂಕು ದೊಡ್ಡಮಾಗರವಳ್ಳಿಯ ಸವಿತಾ ರಮೇಶ್, ಮೂಡಿಗೆರೆ ತಾಲೂಕು ಬಾಳೂರಿನ ಡಿ.ಎಲ್.ವಸಂತಕುಮಾರಿ, ಸಾಮಾನ್ಯ ಕ್ಷೇತ್ರದಿಂದ ಮೂಡಿಗೆರೆ ತಾಲೂಕು ಮುಗ್ರಹಳ್ಳಿಯ ಎಂ.ಎಸ್. ಪ್ರದೀಪ್​ಕುಮಾರ್, ಎನ್.ಆರ್.ಪುರ ತಾಲೂಕಿನ ಕಾನ್ಕೆರೆಯ ಕೆ.ಕೆ.ವೆಂಕಟೇಶ್, ಶೃಂಗೇರಿ ತಾಲೂಕಿನ ಕೆ.ಎಂ.ಶ್ರೀನಿವಾಸ್ ಈ ಹಿಂದೆ ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ.

ಉಳಿದಂತೆ ದಾನಿಗಳ ವರ್ಗ 1ರಿಂದ ಭೂತನಕಾಡುವಿನ ಎಂ.ಬಿ.ಆನಂದ್, ಚಿಕ್ಕಮಗಳೂರಿನ ಟಿ.ರಾಜಶೇಖರ್, ಬಾಸನಖಾನು ಬಿ.ಸಿ.ಲೋಕಪ್ಪ ಗೌಡ, ಮೂಗ್ತೀಹಳ್ಳಿಯ ಎಂ.ಎಸ್.ವಿಕ್ರಾಂತ್, ದಾನಿಗಳ ವರ್ಗ 2 ರಿಂದ ಉಳುವಾಗಿಲುವಿನ ಯು.ಎಸ್.ಆದರ್ಶ್, ಇಂದಾವರದ ಐ.ಎಸ್.ಉಮೇಶ್​ಚಂದ್ರ, ಮಲ್ಲೇಹಳ್ಳಿಯ ಎಂ.ಕೆ.ದಿನೇಶ್, ಮಾಡ್ಲ ಎಂ.ಸಿ.ಪ್ರಕಾಶ್, ದಾನಿಗಳ ವರ್ಗ 3ರಿಂದ ಉಳುವಾಗಿಲುವಿನ ಗಂಧದ ಎಂ.ಡಿ.ಕೃಷ್ಣೇಗೌಡ, ಬೆಟ್ಟದಮರಡಿಯ ಡಿ.ಎಲ್.ರಾಜಶ್ರೀ, ಕಟ್ರುಮನೆ ಕೆ.ಎ.ರಾಜೇಗೌಡ, ಬಿಳಗಲಿ ಬಿ.ಎಲ್.ಸಂದೀಪ್ ಇವರ ಆಯ್ಕೆ ಅವಿರೋಧವಾಗಿ ನಡೆಸಲಾಗಿತ್ತು.