ಕೆಲಸಕ್ಕೆ ಹೋಗೆಂದು ಬುದ್ಧಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಲೆಗೈದ ಮಗ

ಚಿಕ್ಕಮಗಳೂರು: ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ದಾರುಣ ಘಟನೆ ಶೃಂಗೇರಿ ತಾಲೂಕಿನ ಹೊಕಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಸಾಕಮ್ಮ (55) ಮೃತೆ. ಮಗನಾದ ನಂದೀಶ್​ ಯಾವುದೇ ಕೆಲಸಕ್ಕೆ ಹೋಗದೇ ಸುಮ್ಮನೇ ಮನೆಯಲ್ಲೇ ಉಳಿದಿದ್ದ. ದುಡಿಯುವ ಮಗ ಮನೆಯಲ್ಲಿ ಉಳಿದರೆ ಹೇಗೆ? ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ದೊಣ್ಣೆಯಿಂದ ಹೊಡೆದು ತಾಯಿಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿ ನಂದೀಶ್​ನನ್ನು ಶಂಗೇರಿ ಪೊಲೀಸರ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *