ತಿ.ನರಸೀಪುರ: ತಾಲೂಕಿನ ಚಿಕ್ಕಬೂವಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬ ನಾಪತ್ತೆಯಾಗಿದ್ದಾನೆ. ಬೆನಕನಹಳ್ಳಿ ಶ್ರೀ ಗುರುಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಜೀವನ್(14 ವರ್ಷ) ಕಳೆದ ಫೆ.13ರಂದು ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವನು ಇಲ್ಲಿಯವರೆಗೂ ವಾಪಸ್ ಬಂದಿಲ್ಲ.
ಈ ಸಂಬಂಧ ಬಾಲಕನ ತಾಯಿ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈತನ ಸುಳಿವು ಸಿಕ್ಕಲ್ಲಿ ಠಾಣೆಯ ದೂ.08227-261227ಗೆ ಕರೆ ಮಾಡಿ ಸಂಪರ್ಕಿಸಲು ಪೊಲೀಸರು ಪ್ರಕಟಣೆಯಲ್ಲಿ ಕೋರಲಾಗಿದೆ.