ಕಾಂಗ್ರೆಸ್ ಭರವಸೆಗಳಿಗೆ ಗ್ಯಾರಂಟಿ ಇಲ್ಲ

blank

ಚಿಕ್ಕಬಳ್ಳಾಪುರ: ಮಾಸಿ ಹೋಗುವ ಗ್ಯಾರಂಟಿ ಇಲ್ಲದ ಮೆಹಂದಿ ಭರವಸೆಗಳನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದರು.

blank

ನಗರದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಮತದಾನಕ್ಕೆ ಉಳಿದಿರುವುದು ಎಂಟು ದಿನ ಮಾತ್ರ. ಇಂದಿನಿಂದಲೇ ಪ್ರತಿಯೊಬ್ಬ ಕಾರ್ಯಕರ್ತರು ಮತ್ತಷ್ಟು ಬಿರುಸಿನ ಪ್ರಚಾರ ಕೈಗೊಳ್ಳಬೇಕು ಎಂದರು.

ಕ್ಷೇತ್ರದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕಮ್ಮಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಹಳ್ಳಿಗಳ ಹೆಸರು ಹೇಳಲಿ ಎಂದು ಸವಾಲು ಹಾಕಿದ ಸಚಿವರು, ಡೂಪ್ಲಿಕೇಟ್ ಮೇಸ್ಟ್ರು ಆದ ಕಾರಣ ರಾತ್ರಿಗೆ ಓದಿಕೊಂಡು ನಾಳೆ ಹೇಳುವಂತೆ ಲೇವಡಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗುವ, ಜತೆಗೆ ತಮ್ಮ ಕುಟುಂಬಕ್ಕೆ ಜಿಪಂ ಸದಸ್ಯ ಸ್ಥಾನ ನೀಡುವುದಾಗಿಯೂ ಹೇಳಿದ್ದಾರೆ. ಆದರೆ, ಅವರು ಈಗ ಶಾಸಕನಾಗಿ ಗೆಲ್ಲುವುದಿರಲಿ, ಮುಂದೆ ಗ್ರಾಪಂ, ತಾಪಂ ಸದಸ್ಯನಾಗಲೂ ಅರ್ಹರಲ್ಲ. ಡ್ರಾಮಾ ಮಾಡುವುದಾದರೆ ನಾಟಕದ ಕಂಪನಿ ಸೇರಿದ್ದರೆ ಕಿಮ್ಮತ್ತು ಆದರೂ ಇರುತ್ತಿತ್ತು ಎಂದು ತಿರುಗೇಟು ನೀಡಿದರು.

ಹಲವರ ಸೇರ್ಪಡೆ: ಮಂಚೇನಹಳ್ಳಿಯಲ್ಲಿ ರಾಜ್ಯ ನಾರು ತೆಂಗಿನ ಅಭಿವೃದ್ಧಿ ನಿಗಮದ ನಿರ್ದೇಶಕ ಬಾಲಕೃಷ್ಟ, ಮಂಚೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಮಂಚೇನಹಳ್ಳಿ ತಾಲೂಕು ರಚನೆ, ಈ ಭಾಗದಲ್ಲಿ ತಾಲೂಕು ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆಗಳನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಚಾಲನೆಯ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ, ಬಿಜೆಪಿ ಸೇರ್ಪಡೆಯಾಗಿರುವುದಾಗಿ ಬಾಲಕೃಷ್ಣ ತಿಳಿಸಿದರು.

ನಟರ ಪ್ರಚಾರ: ಚಿಕ್ಕಬಳ್ಳಾಪುರದ ವಿವಿಧೆಡೆ ಸಿನಿಮಾ ನಟರ ಪ್ರಚಾರ ಕಾರ್ಯ ಮುಂದುವರೆದಿದ್ದು ನಟರಾದ ನೆನಪಿರಲಿ ಪ್ರೇಮ್, ದಿಗಂತ್, ಹರ್ಷಿಕಾ ಪೂಣಚ್ಚ, ದಿವ್ಯಾ ಉರುಡಗ ಸೇರಿದಂತೆ ಹಲವರು ಮನೆ ಮನೆಗೆ ಭೇಟಿ, ಸಚಿವ ಸುಧಾಕರ್ ಪರ ಮತ ಯಾಚಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದಾಗ ಜನರಿಗಾಗಿ ಏನೂ ಮಾಡಿಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದರೆ ಜನರೂ ನಂಬಲ್ಲ. 2019ರಲ್ಲಿ ಇಡೀ ದೇಶ ಸುತ್ತಿ 44 ಸ್ಥಾನ ಗೆದ್ದ ಕೀರ್ತಿ ರಾಹುಲ್ ಗಾಂಧಿಗೆ ಸಲ್ಲುತ್ತದೆ. ಅವರಿಗೆ ಸರಿಯಾದ ಸಲಹೆಗಾರರು ಇಲ್ಲ. ತಮ್ಮಂತವರನ್ನು ಸಲಹೆಗಾರರನ್ನಾಗಿಟ್ಟಿಕೊಳ್ಳುವುದು ಒಳ್ಳೆಯದು. | ಡಾ ಕೆ.ಸುಧಾಕರ್, ಆರೋಗ್ಯ ಸಚಿವ

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank