ಚಿಕ್ಕಬಳ್ಳಾಪುರ ನಗರಸಭೆ ಗದ್ದುಗೆ ಏರುವವರಾರು?

ಅಧ್ಯಕ್ಷ ಗಾದಿಗೆ ತೆರೆಮರೆ ಕಸರತ್ತು
ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಕ್ಕಾಗಿ ಹೆಚ್ಚಿದ ಪೈಪೋಟಿ

ಚಿಕ್ಕಬಳ್ಳಾಪುರ: ಪಕ್ಷದ ವರಿಷ್ಠರು ಹಾಗೂ ಸದಸ್ಯರ ಬೆಂಬಲಯಾಚನೆ ಮೂಲಕ ನಗರಸಭಾ ಅಧ್ಯಕ್ಷ ಗಾದಿಗೇರಲು ಪ್ರಬಲ ಆಕಾಂಕ್ಷಿಗಳು ಕಸರತ್ತು ಶುರುವಿಟ್ಟುಕೊಂಡಿದ್ದಾರೆ.
ಹೌದು..! ಇನ್ನೂ ಚುನಾವಣಾ ದಿನ ನಿಗದಿಯಾಗಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ೋಷಿಸಿದೆ. ಈ ನಡುವೆ ಈಗಿನಿಂದಲೇ ಅನುಕೂಲಕರ ವಾತಾವರಣ ನಿರ್ಮಿಸುವ ಚಿಂತನೆಯು ನಾನಾ ಕಸರತ್ತುಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಈ ಬಾರಿ ಸಾಮಾನ್ಯ ವರ್ಗದ ಮೀಸಲು ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿಸಿದೆ.
ಇಲ್ಲಿ ನಗರಸಭೆಯಲ್ಲಿ 31 ಮಂದಿ ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್ 16, ಜೆಡಿಎಸ್ 2, ಬಿಜೆಪಿ 9 ಮತ್ತು 4 ಮಂದಿ ಪಕ್ಷೇತರರರು. ಪ್ರಸ್ತುತ ಕೈ ಪಾಳಯದಿಂದ ನಗರಸಭಾ ಸದಸ್ಯರಾದ ದೀಪಕ್ (14ನೇ ವಾರ್ಡ್), ಅಂಬರೀಶ್ (15ನೇ ವಾರ್ಡ್), ನರಸಿಂಹಮೂರ್ತಿ (20ನೇ ವಾರ್ಡ್), ಮೀನಾಕ್ಷಿ (31ನೇ ವಾರ್ಡ್) ಪ್ರಬಲ ಆಕಾಂಕ್ಷಿಗಳು. ಮತ್ತೊಂದೆಡೆ ಬಿಜೆಪಿ ಪಾಳಯದಿಂದ ಗಜೇಂದ್ರ (ವಾರ್ಡ್ 4), ಮಂಜುನಾಥಾಚಾರಿ (ವಾರ್ಡ್ 18)ಹೆಸರು ಕೇಳಿ ಬರುತ್ತಿದೆ.


ಹಣಬಲ ಇದ್ದರಷ್ಟೇ ಗೆಲುವು!: ನಗರಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಅಭ್ಯರ್ಥಿಗಳ ಗೆಲುವಿನಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ, ಇಲ್ಲಿ ಮೊದಲಿನಿಂದಲೂ ಪಕ್ಷ ನಿಷ್ಠೆ ಎನ್ನುವುದಿಲ್ಲ. ಆಕಾಂಕ್ಷಿಗಳಲ್ಲಿ ಆರ್ಥಿಕ ಬಲ ಮತ್ತು ನಾಯಕರ ಬೆಂಬಲವನ್ನು ಹೊಂದಿರುವ ಪ್ರಬಲರು ಮೇಲುಗೈ ಸಾಧಿಸಿಕೊಂಡು ಬರುತ್ತಿದ್ದಾರೆ. ಅದು ಈ ಬಾರಿಯೂ ಮರುಕಳಿಸುತ್ತದೆ ಎನ್ನುವಷ್ಟರ ಮಟ್ಟಿಗೆ ರಾಜಕೀಯ ನಡೆಯುತ್ತಿದೆ. ಇದಕ್ಕೆ ಆಕಾಂಕ್ಷಿಗಳು ಪಕ್ಷ ಭೇದ ಮರೆತು ಇತರ ಎಲ್ಲ ಸದಸ್ಯರ ಬೆಂಬಲ ಯಾಚಿಸುತ್ತಿರುವುದು ಪುಷ್ಠಿ ನೀಡುತ್ತಿದೆ.


ಶಾಸಕರು, ಸಂಸದರ ನಡೆ ಎತ್ತ?: ಕ್ಷೇತ್ರದ ಹಿಡಿತಕ್ಕಾಗಿ ಜಿಲ್ಲಾ ಕೇಂದ್ರದಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಯ ಚುನಾವಣೆಯನ್ನು ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಡಾ.ಕೆ.ಸುಧಾಕರ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಶತಾಯ ಗತಾಯ ಬೆಂಬಲಿಗರನ್ನು ಗಾದಿಯಲ್ಲಿ ಕೂರಿಸುವ ಮೂಲಕ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಇರಾದೆ ಹೊಂದಿದ್ದಾರೆ. ಚುನಾವಣಾ ದಿನ ೋಷಣೆಯಾಗುತ್ತಿದ್ದಂತೆ ಗೆಲುವಿನ ತಂತ್ರಗಾರಿಕೆ ಹೆಣೆಯಲಿದ್ದು, ಪ್ರಸ್ತುತ ಆಕಾಂಕ್ಷಿಗಳ ನಡುವೆ ಇತರ ಸದಸ್ಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಬಲರ ಕಸರತ್ತಿನ ಮೇಲೆ ನಿಗಾ ಇರಿಸಿದ್ದಾರೆ.


ಬಲಿಜ ಸಮುದಾಯಕ್ಕೆ ಅದೃಷ್ಟ!: ಅಧ್ಯಕ್ಷಗಾದಿ ಮೇಲೆ ಬಲಿಜ ಸಮುದಾಯದವರನ್ನು ಕೂರಿಸುವ ಉದ್ದೇಶದೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರಿ, ಸಾಮಾನ್ಯ ಮೀಸಲಾತಿ ನಿಗದಿಪಡಿಸಿಕೊಂಡು ಬರಲಾಗಿದೆ ಎನ್ನುವುದು ರಾಜಕೀಯ ವಲಯದ ಮಾತು. ಇದಕ್ಕೆ ಲೋಕಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಎಸ್.ರಕ್ಷಾ ರಾಮಯ್ಯ ಮತ್ತು ಶಾಸಕ ಪ್ರದೀಪ್ ಈಶ್ವರ್, ನಗರಸಭೆಯಲ್ಲಿ ಆಕಾಂಕ್ಷಿ ದೀಪಕ್‌ರನ್ನು (ಬಲಿಜಿಗ) ಬೆಂಬಲಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ಇದೇ ಸಮುದಾಯದ ಉಳಿದ ಆಕಾಂಕ್ಷಿಗಳಾದ ಅಂಬರೀಶ್, ನರಸಿಂಹಮೂರ್ತಿ ಅಧಿಕಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನು ಬಹುಮತ ಇಲ್ಲದ ಬಿಜೆಪಿಯು ಸಹ ಬಿಬಿಎಂಪಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ತಾಯಿ, ನಗರಸಭಾ ಸದಸ್ಯೆ ನಿರ್ಮಲಪ್ರಭು ಅವರನ್ನು (ಬಲಿಜಿಗ) ಕಣಕ್ಕಿಳಿಸುವ ಮೂಲಕ ಹಿರಿಯ ನಾಯಕತ್ವ ಮತ್ತು ರಾಜಕೀಯ ದೊಡ್ಡ ಕುಟುಂಬದ ಹಿನ್ನೆಲೆಯ ಒಲವಿನಲ್ಲಿ ಕಾಂಗ್ರೆಸ್‌ನ ಕೆಲ ಸದಸ್ಯರು, ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಗೆಲುವು ಕಾಣುವ ತಂತ್ರಗಾರಿಕೆ ಹೆಣೆಯಲು ಚಿಂತಿಸಿದೆ.


ಅಸಮಾಧಾನಿತರ ಪೈಪೋಟಿ: ಕಾಂಗ್ರೆಸ್ ಸದಸ್ಯರಾದ ಮೀನಾಕ್ಷಿ ಅಧ್ಯಕ್ಷಗಾದಿಗೆ ಸ್ವಸಮುದಾಯದ ಎಸ್ಸಿ ಮೀಸಲಾತಿ ನಿಗದಿ ಬಯಸಿದ್ದರು. ಆದರೆ, ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿರುವುದರಿಂದ ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿದ್ದು, ಆದರೂ ಈಗಲೂ ತೆರೆಮರೆ ಕಸರತ್ತು ಮಾತ್ರ ನಿಲ್ಲಿಸಿಲ್ಲ. ತೀವ್ರ ಪೈಪೋಟಿಯಿಂದ ಕೊನೇ ಕ್ಷಣದಲ್ಲಿ ಅಧ್ಯಕ್ಷ ಸ್ಥಾನ ಕೈ ತಪ್ಪಿದರೂ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಒತ್ತಡವನ್ನು ಹೇರಲು ಕೆಲವರು ಮುಂದಾಗಿದ್ದಾರೆ.

 


ಅಲ್ಪಾವಧಿಗೆ ಬಜೆಟ್ ಸಮಸ್ಯೆ: ಮೀಸಲಾತಿ ನಿಗದಿಯ ವಿಳಂಬದಿಂದ ಹಲವು ತಿಂಗಳ ಕಾಲ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಇನ್ನು ಉಳಿದಿರುವುದು 14 ತಿಂಗಳು ಮಾತ್ರ. ಈ ಅಲ್ಪಾವಧಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಅಧಿಕಾರ ಚುಕ್ಕಾಣಿ ಹಿಡಿಯಲು ಹಿಂದೇಟು ಹಾಕುತ್ತಿದ್ದು, ಪಕ್ಷ ಮತ್ತು ಹಿರಿಯ ನಾಯಕರ ತೀರ್ಮಾನದಂತೆ ಚುನಾವಣೆಯಲ್ಲಿ ಬೆಂಬಲ ಸಿಗಲಿ ಎಂಬ ಮಾತನ್ನು ಒತ್ತಿ ಹೇಳುತ್ತಿದ್ದಾರೆ.

TAGGED:
Share This Article

ತೂಕ ಇಳಿಕೆಗೆ ನಂಬರ್​ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು

ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ…

ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…