ಅವರು ಸಾಯಲ್ಲ‌ ನಮಗೆ ನೀರು‌ ಬರಲ್ಲ, ಮಂಗಳೂರಿಗೆ ಕಳುಹಿಸಿ ನನ್ನನ್ನು ಗೆಲ್ಲಿಸಿ: ಬಚ್ಚೇಗೌಡ ವಾಗ್ದಾಳಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಚುನಾವಣಾ ಅಖಾಡಕ್ಕೆ ಇಳಿದಿರುವ ಹಾಲಿ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎನ್​.ಬಚ್ಚೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀರು ಕೊಟ್ಟೇ ನಾನು ಪ್ರಾಣ ಬಿಡುತ್ತೇನೆ ಎಂಬ ಮೊಯ್ಲಿ ಹೇಳಿಕೆಗೆ ಅವರು ಸಾಯಲ್ಲ‌ ನಮಗೆ ನೀರು‌ ಬರಲ್ಲ ಎಂದು ತಿರುಗೇಟು ನೀಡಿದರು.

ನೀರು ಬರಬೇಕಾದರೆ ಮೊಯ್ಲಿ ವಿರುದ್ಧ ಬಚ್ಚೇಗೌಡ ಗೆದ್ದು ಬರಬೇಕು. 10 ವರ್ಷಗಳಲ್ಲಿ ವೀರಪ್ಪ ಮೊಯ್ಲಿ ಯಾವುದೇ ನೀರಾವರಿ ಯೋಜನೆ ಮಾಡಲಿಲ್ಲ. ಎತ್ತಿನಹೊಳೆ ಯೋಜನೆ ಜಾರಿ ಮಾಡಿದ್ದೇ ಅಂದಿನ ಬಿಜೆಪಿ ಸರ್ಕಾರ. ನಂತರ ಬಂದ ಸರ್ಕಾರ ಕಮಿಷನ್‌ ಪಡೆಯೋಕೆ ಎತ್ತಿನಹೊಳೆ ಯೋಜನೆ‌ಗೆ ಪೈಪ್​ಗಳನ್ನು ತಂದು ಹಾಕಿ‌ತು. ಚುನಾವಣೆ ಬಂದಾಗ ಮಾತ್ರ ಮೊಯ್ಲಿಗೆ ಎತ್ತಿನಹೊಳೆ‌ ನೆನಪಾಗುತ್ತದೆ. ಎರಡು ವರ್ಷ ಮೊಯ್ಲಿ ಎಂಪಿಯಾಗಿದ್ದು ಸಾಕು ಅವರನ್ನು ಮಂಗಳೂರಿಗೆ ಕಳಿಸೋಣ ಎಂದು ಹೇಳಿದರು.

ಈ‌ ಬಾರಿ ನನ್ನನ್ನು ಗೆಲ್ಲಿಸಿ, ಯಾವುದೇ ಮೂಲದಿಂದಾದರೂ ನೀರು ತಂದುಕೊಡುತ್ತೇನೆ. ಮೊಯ್ಲಿಗೆ 14 ವರ್ಷದ ಹೆಣ್ಣು‌ ಮಗಳು 70 ವರ್ಷದ ತರ ಕಾಣಬಿಟ್ಟಳಂತೆ. ಅವರ ಕಣ್ಣಲ್ಲಿ‌ ನೀರು ಬಂದುಬಿಡ್ತಂತೆ. ಅವರು ಎತ್ತಿನಹೊಳೆ ಹೆಸರೇಳಿ 10 ವರ್ಷ ಆಗೋಯ್ತು ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)