More

    ಹೊಳೆಗೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು, ದುರ್ವಾಸನೆಯಿಂದ ಪಾರಂಪಳ್ಳಿ ಜನತೆಗೆ ಸಮಸ್ಯೆ

    ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ ಉಪ್ಪು ನೀರಿನ ಹೊಳೆಗೆ ಭಾನುವಾರ ಕಿಡಿಗೇಡಿಗಳು ಸುಮಾರು ಹತ್ತು ಹದಿನೈದು ಸತ್ತ ಕೋಳಿ ಹಾಗೂ ಅದರ ತ್ಯಾಜ್ಯವನ್ನು ಎಸೆದು ಮಲಿನಗೊಳಿದ್ದಾರೆ. ಹೊಳೆಯ ನೀರು ದುರ್ವಾಸನೆಗೀಡಾಗಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
    ಪ್ರತಿ ದಿನ ಹೊಳೆಯಲ್ಲಿ ಕೋಳಿ ತ್ಯಾಜ್ಯ ಹಾಗೂ ಕಸ ತಂದು ಎಸೆಯುವವರ ವಿರುದ್ಧ ಸ್ಥಳೀಯಾಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಆಶಾ ಕಾರ್ಯಕರ್ತೆ ನೇತೃತ್ವ
    ಆಶಾ ಕಾರ್ಯಕರ್ತೆ ಶ್ಯಾಮಲಾ ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ತ್ಯಾಜ್ಯ ತೆರೆವುಗೊಳಿಸಲು ಕ್ರಮ ಕೈಗೊಂಡು ಸ್ಥಳೀಯರಿಗೆ ದುರ್ವಾಸೆಯಿಂದ ಮುಕ್ತಿಗೊಳಿಸಿದ್ದಾರೆ. ಶ್ಯಾಮಲಾ ಅವರು ನೀಡಿದ ಮಾಹಿತಿಯಂತೆ ಸ್ಥಳೀಯಾಡಳಿತ ಜನಪ್ರತಿನಿಧಿ ಅನುಸೂಯ ಆನಂದರಾಮ ಹೇರ್ಳೆ ಸ್ಥಳಕ್ಕೆ ಆಗಮಿಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದರು. ಬಳಿಕ ಪೌರಕಾರ್ಮಿಕರು ಹೊಳೆಯಲ್ಲಿದ್ದ ತ್ಯಾಜ್ಯವನ್ನು ದೋಣಿಗಳ ಮೂಲಕ ತೆರವುಗೊಳಿಸಿದ್ದಾರೆ. ಪಪಂ ಸದಸ್ಯೆ ರೇಖಾ ಕೇಶವ ಕರ್ಕೇರ ಸಾಥ್ ನೀಡಿದರು. ಆಶಾ ಕಾರ್ಯಕರ್ತೆ, ಪ.ಪಂ. ಆಡಳಿತ, ಜನಪ್ರತಿನಿಧಿಗಳ ಸ್ಪಂದನೆಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಅಗತ್ಯ ಅರಿಯಬೇಕಾದ ವ್ಯಾಪಾರಿಗಳು ತ್ಯಾಜ್ಯಗಳನ್ನು ನೀರಿನ ಮೂಲಗಳಿಗೆ ಎಸೆಯುತ್ತಿರುವುದು ಬೇಸರದ ಸಂಗತಿ. ಪಪಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೋಳಿ ತ್ಯಾಜ್ಯ ಅಥವಾ ಇನ್ನಾವುದೇ ತ್ಯಾಜ್ಯಗಳನ್ನು ಈ ಭಾಗದಲ್ಲಿ ಎಸೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
    ಶ್ಯಾಮಲಾ ಆರ್., ಆಶಾ ಕಾರ್ಯಕರ್ತೆ ಸಾಲಿಗ್ರಾಮ

    ಕೋಳಿ ತ್ಯಾಜ್ಯವನ್ನು ಹೊಳೆಗೆ ಎಸೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಈ ಬಗ್ಗೆ ಬ್ಯಾನರ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
    ಅರುಣ್ ಬಿ., ಮುಖ್ಯಾಧಿಕಾರಿ ಸಾಲಿಗ್ರಾಮ ಪಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts