ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪುತ್ರಿ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ. ಆ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಅರಮನೆ ಮೈದಾನ ಅಥವಾ ಇನ್ನಿತರ ಐಷಾರಾಮಿ ಸ್ಥಳದಲ್ಲಿ ಮದುವೆ ಮಾಡುವ ಬದಲಿಗೆ ವೈಯಾಲಿಕಾವಲ್​ನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಉದ್ಯಮಿ ಗೌತಮ್ುಮಾರ್ ರಾಜಾ ಜತೆಗೆ ವಿಜಯಭಾಸ್ಕರ್ ಪುತ್ರಿ ವಿಶೃತಿ ವಿವಾಹವಾಗುತ್ತಿದೆ.

ಶುಕ್ರವಾರ ಮಾತ್ರ ವಿಜಯಭಾಸ್ಕರ್ ರಜೆ ತೆಗೆದುಕೊಂಡಿದ್ದು, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಭಾಸ್ಕರ್, ನಮ್ಮ ಕುಟುಂಬದಂತೆಯೇ ಭಾವಿ ಅಳಿಯನ ಕುಟುಂಬದವರೂ ಸರಳವಾಗಿದ್ದಾರೆ. ನಾನು ಕಚೇರಿಯಲ್ಲಿ ಕಾರ್ಯನಿರತವಾಗಿರುವ ಸಮಯದಲ್ಲಿ ಮದುವೆಯ ಪೂರ್ವಭಾವಿ ಕಾರ್ಯವನ್ನು ಪತ್ನಿ ರುಕ್ಮಿಣಿ ನಡೆಸಿದರು ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *