ಚುನಾವಣೆ ಹೊತ್ತಿನಲ್ಲಿ ಸಿಎಂ, ಡಿಕೆಶಿಗೆ ಕುತ್ತು?

<<ಅಘೋಷಿತ ಆಸ್ತಿ ಬಗ್ಗೆ ಐಟಿಯಿಂದ ಅಂತಿಮ ವರದಿ ರೆಡಿ | ಭೂ ಅವ್ಯವಹಾರ ಸುಳಿಯಲ್ಲಿ ಸಿದ್ದರಾಮಯ್ಯ>>

|ಅವಿನಾಶ ಮೂಡಂಬಿಕಾನ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಭರಾಟೆ ಜೋರಾಗಿರುವ ಬೆನ್ನಲ್ಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಐಟಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಐಟಿ ದಾಳಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಅಧಿಕಾರಿಗಳು, ಅಂತಿಮ ವರದಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ದೆಹಲಿಯಲ್ಲಿರುವ ಐಟಿ ಮುಖ್ಯಸ್ಥರಿಗೆ ಸಲ್ಲಿಸಲಿದ್ದಾರೆ.

ಹಂತ-ಹಂತವಾಗಿ ನಡೆಸಿದ ವಿಚಾರಣೆಯ ಸಂಪೂರ್ಣ ಮಾಹಿತಿ ಈ ವರದಿಯಲ್ಲಿ ಉಲ್ಲೇಖಿಸಲಿದ್ದು, ಸಚಿವರು ಐಟಿ ಕಾಯ್ದೆ ಉಲ್ಲಂಘಿಸಿದ್ದು ಕಂಡು ಬಂದರೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ದ್ದಾರೆ. ಅದರ ವಿಚಾರಣೆ ಶುರುವಾದರೆ ಚುನಾವಣಾ ವೇಳೆ ಶಿವಕುಮಾರ್​ಗೆ ಫಜೀತಿ ಖಚಿತ.

2017ರ ಆ. 2ರಂದು ಸಚಿವರ ಸದಾಶಿವನಗರದಲ್ಲಿರುವ ನಿವಾಸ ಸೇರಿ ಅವರ ಒಡೆತನದ ಅನೇಕ ಸಂಸ್ಥೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಪತ್ರ, ದಾಖಲೆ ವಶಪಡಿಸಿಕೊಂಡಿದ್ದರು.

ಬೇನಾಮಿ ಆಸ್ತಿ!: ಶಿವಕುಮಾರ್ ಕೋಟ್ಯಂತರ ರೂ. ಅಘೋಷಿತ ಆಸ್ತಿ ಹಾಗೂ ಬೇನಾಮಿ ಆಸ್ತಿ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಡಿಕೆಶಿ ವಿರುದ್ಧ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಅಕ್ರಮ ಆಸ್ತಿ ಖರೀದಿಗೆ ಹಣಕಾಸು ಲೇವಾದೇವಿ ಕಾಯ್ದೆ ಉಲ್ಲಂಘಿಸಿದ್ದು ದೃಢಪಟ್ಟರೆ ಪ್ರಕರಣ ಜಾರಿ ನಿರ್ದೇಶನಾಲಯ ಅಂಗಳಕ್ಕೆ ಹೋಗಲಿದೆ.

ವಿಚಾರಣೆ ವೇಳೆ ಶಿವಕುಮಾರ್ ಉತ್ತರ

ನೀವು ಯಾವ ರೀತಿ ವ್ಯವಹಾರ ಮಾಡುತ್ತಿದ್ದೀರ, ಆದಾಯದ ಮೂಲ ಏನು?

-ನಾನು ರೈತ, ಬೆಂಗಳೂರಿನಲ್ಲಿ ಕೆಲವು ಆಸ್ತಿಗಳಿವೆ, ರಿಯಲ್ ಎಸ್ಟೇಟ್ ವ್ಯವಹಾರ, ಗ್ರಾನೈಟ್ ಕ್ವಾರಿಗಳಿವೆ. ಅವುಗಳಿಂದ ಹೆಚ್ಚಿನ ಆದಾಯ ಪಡೆಯುತ್ತಿದ್ದೇನೆ. ಕೆಲ ಜಂಟಿ ಪಾಲುದಾರಿಕೆ ಹೊಂದಿದ್ದೇನೆ. ಅದರ ಆದಾಯ ಬರಬೇಕಿದೆ. ನಾನು 2 ಸಂಸ್ಥೆಗಳಲ್ಲಿ ಚೇರ್​ವೆುನ್. ನನ್ನ ಹೆಸರಿನಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಇದೆ. ಎನ್​ಇಎಫ್ ಟ್ರಸ್ಟ್​ನಲ್ಲಿ ಇಂಜಿನಿಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜು, ಎಂಬಿಎ ಕಾಲೇಜುಗಳಿವೆ. ಅಪೋಲೋ ಎಜುಕೇಷನ್ ಟ್ರಸ್ಟ್​ನಲ್ಲಿ ಐಸಿಎಸ್​ಸಿ ಶಾಲೆಯಿದೆ. ಬಿಟಿಎಲ್ ಎಜುಕೇಷನ್ ಟ್ರಸ್ಟ್ ನಲ್ಲಿ ಕಾರ್ಯಾಧ್ಯಕ್ಷನಾಗಿದ್ದೇನೆ.

ಮನೆ ಮೇಲೆ ದಾಳಿ ನಡೆಸಿದಾಗ ಹಣ, ಚಿನ್ನ ಮತ್ತು ವಜ್ರದ ಆಭರಣಗಳು ದೊರೆತಿವೆ. ಅದನ್ನು ನಿಮ್ಮ ಪತ್ನಿ ಉಷಾ ಉಪಸ್ಥಿತಿಯಲ್ಲಿ ಜಪ್ತಿ ಮಾಡಿದ್ದೇವೆ ಎಂಬುದನ್ನು ದೃಢೀಕರಿಸಿ.

-ನನಗೆ ಮಾಹಿತಿ ಇದೆ, ಅದನ್ನು ನೀವು ವಾಪಸ್ ನೀಡಿದ್ದೀರಿ.

ಈಗಲ್​ಟನ್ ರೆಸಾರ್ಟ್​ಗೆ ದಾಳಿ ನಡೆಸಿದಾಗ ನೀವಿದ್ದ ಕೊಠಡಿಯಲ್ಲಿ ದೊರೆತ ಪತ್ರದಲ್ಲೇನಿತ್ತು?

-ಅದು ಪಾರ್ಟಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಪಟ್ಟದ್ದು. ಮನೆಯಲ್ಲಿ ವಶಪಡಿಸಿಕೊಂಡ ಸಾಕಷ್ಟು ಪತ್ರಗಳು ಶೋಭಾ ಡೆವಲಪರ್ಸ್ ಸಹಭಾಗಿತ್ವದ ಮತ್ತು ನನ್ನ ಮಗಳಿಗೆ ಫ್ಲ್ಯಾಟ್ ಖರೀದಿಸಲು ಇಟ್ಟುಕೊಂಡಿದ್ದ ಪತ್ರಗಳಾಗಿವೆ.

ನೀವು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚೆನ್ನರಾಜ ನಡುವೆ ಹೊಂದಿದ್ದ ವ್ಯಾವಹಾರಿಕ ಸಂಬಂಧದ ಬಗ್ಗೆ ಕಳೆದ 10 ವರ್ಷಗಳ ಮಾಹಿತಿ ನೀಡಿ.

-ಹೆಬ್ಬಾಳ್ಕರ್ ನನ್ನ ಪಕ್ಷದ ಒಬ್ಬ ರಾಜಕಾರಣಿ. ಚೆನ್ನರಾಜ, ಅವರ ಸಹೋದರ. ಇಬ್ಬರ ಮಧ್ಯೆ ಯಾವುದೇ ವ್ಯಾವಹಾರಿಕ ಸಂಬಂಧಗಳಿಲ್ಲ.

ನವದೆಹಲಿ ನಿವಾಸಗಳಲ್ಲಿ ನಮಗೆ 8.83 ಲಕ್ಷ ರೂ. ನಗದು ದೊರೆ ತಿದ್ದು, ಈ ಬಗ್ಗೆ ಮಾಹಿತಿ ನೀಡಿ.

-ನನ್ನ ಕುಟುಂಬಸ್ಥರಿಗೆ 100 ಎಕರೆ ಕೃಷಿ ಭೂಮಿಯಿದೆ. ಅದರ ಆದಾಯದ ಹಣವೇ ದೆಹಲಿಯಲ್ಲಿ ನಿಮಗೆ ಸಿಕ್ಕಿದ್ದು. ನನಗೆ ಮತ್ತು ನನ್ನ ಪತ್ನಿಗೆ ಕೆಲವೊಂದು ರಿಯಲ್ ಎಸ್ಟೇಟ್ ಕಂಪನಿಗಳ ಒಪ್ಪಂದದಲ್ಲಿ 102.46 ಕೋಟಿ ರೂ. ಆದಾಯ ಬಂದಿದ್ದು, ಇದರ ತೆರಿಗೆ ಪಾವತಿಸಬೇಕಾಗಿದೆ. ನನ್ನ ಮನೆಯಲ್ಲಿ ವಶಪಡಿಸಿಕೊಂಡ 88 ಕೋಟಿ ರೂ.ಗೆ ತೆರಿಗೆ ಕಟ್ಟಲು ಬಾಕಿ ಇದೆ.


ಸಿಎಂಗೆ ಅರ್ಕಾವತಿ ಕಂಟಕ!

|ವಿಜಯ್ ಜೊನ್ನಹಳ್ಳಿ

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಅರ್ಕಾವತಿ ಬಡಾವಣೆ ಭೂಕಂಟಕ ಸುತ್ತಿಕೊಂಡಿದೆ. ಬಡಾವಣೆಯ ನಿವೇಶನ ಅಭಿವೃದ್ಧಿಯಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲ ವಿ.ಆರ್.ವಾಲಾಗೆ ದೂರು ನೀಡಲಾಗಿದೆ.

ಜನಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ.ಅಯ್ಯಪ್ಪದೊರೆ ಎಂಬುವರು ರಾಜ್ಯಪಾಲರಿಗೆ ಮಾ.26ರಂದು ದೂರು ನೀಡಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿದ್ದಾರೆ. ದೂರಿನಲ್ಲಿ ಇಡೀ ಬಡಾವಣೆಯೇ ಬೋಗಸ್ ಎಂದಿರುವ ಅವರು ಅದಕ್ಕೆ ಪೂರಕವಾದ ದಾಖಲೆ ಸಲ್ಲಿಸಿದ್ದಾರೆ.

ಬಡಾವಣೆ ಬೋಗಸ್ ಎಂಬುದು ಕಳೆದ ಡಿಸೆಂಬರ್​ನಲ್ಲಿ ನಡೆದ ಬಿಡಿಎ ಸಭೆಯಲ್ಲೂ ಪ್ರತಿಧ್ವನಿಸಿದೆ. 2014ರಲ್ಲಿ ಬಡಾವಣೆಗೆ ತಯಾರಿಸಿರುವ ರ್ವಂಗ್ ಪ್ಲಾ್ಯನ್ ನಿಯಮ ಮೀರಿದೆ. ಬಡಾವಣೆ ನಿರ್ವಣದ ವೇಳೆ ಉದ್ಯಾನವನ, ಮಕ್ಕಳಿಗೆ ಆಟದ ಜಾಗ ಹಾಗೂ ಸಿಎ ನಿವೇಶನಗಳನ್ನು ಕಾಯ್ದಿರಿಸಿ ನಂತರ ಬಡಾವಣೆ ನಿರ್ಮಾಣ ಮಾಡಬೇಕು ಎಂಬುದು ನಿಯಮ. ಆದರೆ, ಇವುಗಳನ್ನು ಉಲ್ಲಂಘಿಸಲಾಗಿದೆ. ಅಲ್ಲದೆ ಭೂಸ್ವಾಧೀನವಾಗದೆ ಇರುವ 11 ಗುಂಟೆ ಜಾಗವನ್ನು ಸಿಎ ನಿವೇಶನ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂಬ ಚರ್ಚೆ ನಡೆಯಿತು. ಉದ್ಯಾನ, ಆಟದ ಜಾಗ ಹಾಗೂ ಸಿಎ ನಿವೇಶನ ಕಾಯ್ದಿರಿಸದ್ದರಿಂದ ಸದ್ಯ ತಯಾರಿಸಿರುವ ರ್ವಂಗ್ ಪ್ಲಾ್ಯನ್ ರದ್ದುಪಡಿಸಿ ಮತ್ತೆ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡಾವಣೆಯ ರ್ವಂಗ್ ಪ್ಲಾ್ಯನ್ ಸಿದ್ಧಪಡಿಸಿದ್ದರೂ ಸಿಎಂ ಇದನ್ನು ಗಮನಿಸದೆ, ಕಾನೂನು ಪಂಡಿತರ ಸಲಹೆ ಪಡೆಯದೆ ಒಪ್ಪಿಗೆ ನೀಡಿದ್ದಾರೆ. ಇದರ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡ ಇದೆ. ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಮಾಡಿಕೊಡಲು ಸಿಎಂ ಮುಂದಾಗಿದ್ದಾರೆ. ಬಡಾವಣೆಗೆ ಅನುಮೋದನೆ ನೀಡಿರುವುದರಿಂದ 2 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ ಎಂದು ದೂರಲಾಗಿದೆ.

ದೂರಿನ ಮೇರೆಗೆ ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ. ಚುನಾವಣೆ ಕಾರಣ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದರೆ ಸಿಎಂಗೆ ಹಿನ್ನಡೆಯಾಗುತ್ತದೆ.

ದೂರಿನಲ್ಲಿ ಏನಿದೆ?

ಬಡಾವಣೆ ನಿರ್ವಣದ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇಲ್ಲಿವರೆಗೂ ಬಡಾವಣೆಯ ಲೇಔಟ್ ಪ್ಲಾ್ಯನ್ ಸಿದ್ಧವಾಗಿಲ್ಲ. ತಯಾರಾಗಿರುವ ಬಡಾವಣೆಯ ರ್ವಂಗ್ ಪ್ಲಾ್ಯನ್ ಬೋಗಸ್ ಆಗಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಅವರು 2014ರ ಜೂನ್​ನಲ್ಲಿ ಬಡಾವಣೆಗೆ ಅನುಮೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಅಮಿತ್ ಷಾ ವಿರುದ್ಧ ಕಾಂಗ್ರೆಸ್ ಮೊರೆ

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಮೈಸೂರಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ನೀಡಿದ್ದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರಿತ್ತಿದೆ. ಅಮಿತ್ ಷಾ ಈ ಮುನ್ನ ಅನೇಕ ಬಾರಿ ಮೈಸೂರಿಗೆ ಬಂದಿದ್ದರೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿರಲಿಲ್ಲ. ಈ ಬಾರಿ ಚುನಾವಣೆ ಉದ್ದೇಶದಿಂದಲೇ ಭೇಟಿಕೊಟ್ಟಿದ್ದಲ್ಲದೇ ಹಣವನ್ನೂ ನೀಡಿದ್ದಾರೆ. ಹೀಗಾಗಿ ನ್ಯಾಯಯುತ ಚುನಾವಣೆ ನಡೆಸುವ ಉದ್ದೇಶದಿಂದ ಅಮಿತ್ ಷಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ತಟ್ಟೆಗೆ ದುಡ್ಡಿನ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದ ವೇಳೆ ಆರತಿ ಎತ್ತಿದವರ ತಟ್ಟೆಗೆ ಹಣ ಹಾಕಿದ್ದು, ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಶುಕ್ರವಾರ ಆಯೋಗದ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಿದ್ದರಾಮಯ್ಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಯೋಗಕ್ಕೆ ದೂರಿದ್ದಾರೆ.

 

Leave a Reply

Your email address will not be published. Required fields are marked *