ಉತ್ತಮ ಮಳೆಯಾಗಲು ದೈವೀಶಕ್ತಿಯೇ ಕಾರಣ: ಮುಖ್ಯಮಂತ್ರಿ ಕುಮಾರಸ್ವಾಮಿ

<< ಆದಿಚುಂಚನಗಿರಿಯಲ್ಲಿ ಕಾಲಭೈರವನಿಗೆ ಅಮಾವಾಸ್ಯೆ ಪೂಜೆ >>

ಮಂಡ್ಯ: ಜಯನಗರದಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ ಎಂದು ಮೊದಲೇ ತಿಳಿದಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಆದಿಚುಂಚನಗಿರಿ ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದಕ್ಕೆ ದೈವೀಶಕ್ತಿಯೇ ಕಾರಣ. ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸಲು ಪ್ರಕೃತಿಯ ಸಹಕಾರವೂ ಇರಬೇಕು. ಪ್ರಮಾಣ ವಚನ ಸ್ವೀಕರಿಸುವಾಗಲೇ ಮಳೆ ಬಂದಿದೆ. ರಾಜ್ಯದ ಎಲ್ಲ ಜಲಾಶಯಗಳೂ ಭರ್ತಿಯಾಗುವ ನಿರೀಕ್ಷೆ ಇದೆ. ಮಂಡ್ಯದಲ್ಲಿ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ನಾನು ಪಾಲ್ಗೊಳ್ಳುವೆ ಎಂದು ಹೇಳಿದರು.

ಅಧಿಕಾರ ಉಳಿಸಿಕೊಳ್ಳಲು ದೇವರ ಬಳಿ ಬಂದಿಲ್ಲ. ಜನತೆಯ ಒಳಿತಿಗೋಸ್ಕರ ಬಂದಿದ್ದೇನೆ ಎಂದ ಅವರು, ಫಿಟ್​ನೆಸ್ ವಿಚಾರದಲ್ಲಿ ಮೋದಿಯವರಿಂದ ಸಲಹೆ ಪಡೆಯಬೇಕಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಮೋದಿಯವರಿಗಿಂತ ಮುಂದಿದ್ದೇನೆ ಎಂದು ತಿಳಿಸಿದರು.

ಕಾಲಭೈರನಿಗೆ ಅಮವಾಸ್ಯೆ ಪೂಜೆಮುಖ್ಯಮಂತ್ರಿ ಕುಮಾರಸ್ವಾಮಿ ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಸುರೇಶ್ ಗೌಡ, ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸಿದ್ದರು.

ನೆಲಕ್ಕುರುಳಿತು ಪ್ರವೇಶ ದ್ವಾರ
ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆ ನಿಮಿತ್ತ ತಯಾರಿಸಿದ್ದ ಪ್ರವೇಶ ದ್ವಾರ ಗಾಳಿಯ ರಭಸಕ್ಕೆ ನೆಲಕ್ಕುರುಳಿದ ಘಟನೆ ನಡೆಯಿತು. ಸಿಎಂ ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಬಣ್ಣಬಣ್ಣದ ಛತ್ರಿಗಳಿಂದ ತಯಾರಿಸಿದ್ದ ಪ್ರವೇಶ ದ್ವಾರ ಗಾಳಿಯ ರಭಸಕ್ಕೆ ಕೆಳಗೆ ಬಿತ್ತು.

Leave a Reply

Your email address will not be published. Required fields are marked *