ಸಿಎಂಗೆ ಡೆತ್​ನೋಟ್​ ಬರೆದಿಟ್ಟು ರೈತ ಆತ್ಮಹತ್ಯೆ

ಮಂಡ್ಯ: ಮುಖ್ಯಮಂತ್ರಿಗಳ ಹೆಸರನ್ನು ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಸಾಲಬಾಧೆ ಮತ್ತು ಅನಾರೋಗ್ಯ ಹಿನ್ನೆಲೆಯಲ್ಲಿ ಜಮೀನಿನ ಬಳಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದ ಜೈಕುಮಾರ್(43) ಮೃತ ರೈತ.

ಮದುವೆಯಾಗಿ ಸುಮಾರು 15 ವರ್ಷ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ರಕ್ಷಿತಾ(13), ರಾಜೇಶ್(10) ಚಿಕ್ಕಮಕ್ಕಳಿದ್ದಾರೆ. 35 ಗುಂಟೆ ಜಮೀನು ಹೊಂದಿದ್ದು, ಕಬ್ಬು, ತರಕಾರಿ ಬೆಳೆಯುತ್ತಿದ್ದೆ. ಎರಡು ಲಕ್ಷ ಸಾಲ ಮಾಡಿದ್ದೇನೆ. 80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ ಅದೂ ಕೂಡ ಕೈ ಹಿಡಿಯಲಿಲ್ಲ. ಗಂಟಲು ಕ್ಯಾನ್ಸರ್ ಇದ್ದು ವೈದ್ಯರು ಮೂರು ಲಕ್ಷ ಹಣ ಬೇಕು ಎಂದಿದ್ದರು ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ನಾಲ್ಕು ವರ್ಷದಿಂದ ಬರಗಾಲ ಬಂದು ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಕುಟುಂಬಕ್ಕೆ ಸಹಾಯ ಮಾಡಿ ಮುಖ್ಯಮಂತ್ರಿಗಳನ್ನು ಕೇಳಿಕೊಂಡು ಜಮೀನಿನ ಬಳಿ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)