ಸ್ವಲ್ಪನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ, ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರ್ ಯಾರ್ರಿ?

ಉಡುಪಿ: ಇಷ್ಟುದಿನ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದು, ಉಡುಪಿಯ ಸಾಯಿರಾಧಾ ರೆಸಾರ್ಟ್‌ಗೆ ಆಗಮಿಸಿದ್ದಾರೆ.

ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಕಿಡಿಕಾರಿದ್ದು, ಯಾರ್ರೀ ಇವರನ್ನು ಒಳಗೆ ಬಿಟ್ಟವರು. ಸ್ವಲ್ಪಾನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ. ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರ್ ಯಾರ್ರಿ? ಖಾಸಗಿ ಕಾರ್ಯಕ್ರಮ ಎಂದು ಗೊತ್ತಿಲ್ವಾ ನಿಮಗೆ? ಕಾಮನ್ ಸೆನ್ಸ್ ಇಲ್ವಾ ನಿಮಗೆ ಎಂದು ಸಿಎಂ ರೆಸಾರ್ಟ್ ಪ್ರವೇಶ ಶೂಟಿಂಗ್ ಮಾಡಿದ್ದಕ್ಕೆ ಸಿಎಂ ಗರಂ ಆಗಿದ್ದಾರೆ.

ಹೆಲ್ತ್‌ ರೆಸಾರ್ಟ್‌ಗೆ ಆಗಮನ

ಕಾಪು ಮೂಳೂರಲ್ಲಿರುವ ಸಾಯಿರಾಧಾ ಹೆರಿಟೇಜ್ ಹೆಲ್ತ್ ರೆಸಾರ್ಟ್‌ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದು, ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂಗೆ ಯೋಗ, ಆಯಿಲ್ ಥೆರಪಿ ವ್ಯವಸ್ಥೆ ಮಾಡಲಾಗಿದೆ. ಎಡೆಬಿಡದ ಪ್ರಚಾರದಿಂದ ಸುಸ್ತಾಗಿರುವ ಸಿಎಂ ಎರಡು ದಿನ ಫುಲ್ ರಿಲ್ಯಾಕ್ಸ್ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *