Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಬಜೆಟ್ ಮುನ್ನೇರ್ಪಾಡುಗಳ ವಿರುದ್ಧ ಮತ್ತಷ್ಟು ದನಿಗಳು…

Monday, 19.02.2018, 3:03 AM       No Comments

|ಪಿ. ಚಿದಂಬರಂ 

ಕಳೆದ 27 ವರ್ಷಗಳ ಅವಧಿಯಲ್ಲಿ ಅತೀವ ಜಾಗರೂಕತೆಯಿಂದ ಕಟ್ಟಲಾದ ವಿತ್ತೀಯ ಭವ್ಯಸೌಧವನ್ನು ಕೆಡವಲು ಈ ಸರ್ಕಾರ ಮುಂದಾಗಿರುವಂತೆ ತೋರುತ್ತಿದೆ. ಅಷ್ಟೇ ಅಲ್ಲ, ಭಾರತದ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣವಾಗಿದ್ದ ‘ನಿಯಂತ್ರಣ ನೀತಿಯ’ ಆರ್ಥಿಕತೆಯ ಸೌಧವನ್ನು ಮರುನಿರ್ವಿುಸುವ ಹುನ್ನಾರ ಅದಕ್ಕಿರುವಂತೆ ಕಾಣುತ್ತಿದೆ.

2018ರ ಫೆಬ್ರವರಿ ನನಗೆ ಮತ್ತು ನನ್ನಂಥ ಅನೇಕರಿಗೆ ರಾಜಕೀಯ ಪಾಠವೊಂದನ್ನು ಕಲಿಸಿತೆನ್ನಬೇಕು. ಅದೆಂದರೆ, ಗತಕಾಲದ, ಅದರಲ್ಲೂ ವಿಶೇಷವಾಗಿ ಅರ್ಥವ್ಯವಸ್ಥೆಗೆ ಸಂಬಂಧಿಸಿದ ನೆನಪುಗಳನ್ನು ಅಳಿಸಿಹಾಕಲು 25 ವರ್ಷಗಳ ಕಾಲಾವಧಿ ಬೇಕಾದಷ್ಟಾಯಿತು ಎಂಬುದು.

ಇಪ್ಪತ್ತೇಳು ವರ್ಷಗಳ ಹಿಂದೆ ಭಾರತವೊಂದು ಸೀಮಿತ ವ್ಯಾಪ್ತಿಯ ಆರ್ಥಿಕತೆಯಾಗಿತ್ತು. ಅಂದರೆ- ಆಮದುಗಳು ಕಳಪೆ ಮಟ್ಟದಲ್ಲಿದ್ದವು, ಆಮದಿಗೆ ಇದ್ದ ಪರ್ಯಾಯ ಆಯ್ಕೆ ಉತ್ತಮವಾಗಿತ್ತು; ಸುಂಕದ ದರಗಳು ಉತ್ತಮವಾಗಿದ್ದವು, ಉನ್ನತ ಸುಂಕದ ದರಗಳಿಂದಾಗಿ ಆರ್ಥಿಕತೆ ಸುರಕ್ಷಿತವಾಗಿತ್ತು; ವಿದೇಶಿ ವಿನಿಮಯವೆಂಬುದು ಒಂದು ಅಮೂಲ್ಯ ಸರಕಾಗಿತ್ತು, ಹೀಗಾಗಿ ಇದ್ದ ಅಲ್ಪಸ್ವಲ್ಪ ಮೊತ್ತವನ್ನು ಕಾಪಿಟ್ಟುಕೊಳ್ಳಬಹುದಿತ್ತು; ತೆರಿಗೆಗಳು ಅವಶ್ಯವಾಗಿದ್ದವು, ಅಧಿಕ ತೆರಿಗೆಗಳು ಜರೂರಿನ ಅವಶ್ಯಕತೆಗಳಿಗೆ ಒತ್ತುನೀಡಿದ್ದವು; ಅಧಿಕ ಬಡ್ಡಿದರಗಳು ಠೇವಣಿದಾರರಿಗೆ ಮತ್ತು ಬ್ಯಾಂಕರ್​ಗಳಿಗೆ ಪ್ರಯೋಜನಕಾರಿಯಾಗಿದ್ದವು, ಸಾಲಗಾರರು ಮತ್ತು ಹೂಡಿಕೆದಾರರು ಸಂಕಷ್ಟಕ್ಕೆ ಒಳಗಾಗಿದ್ದರು.

ಭಾರತವೊಂದು ಬಡದೇಶವಾಗಿದ್ದುದು ಮತ್ತು ಬಹುತೇಕ ಭಾರತೀಯರು ಬಡವರಾಗಿದ್ದುದು ದೊಡ್ಡ ವಿಷಯವೇನೂ ಅಥವಾ ತಲೆ ಕೆಡಿಸಿಕೊಳ್ಳುವಂಥ ಸಂಗತಿಯೇನೂ ಆಗಿರಲಿಲ್ಲ. ಕಡೇಪಕ್ಷ ಅವರು ಸುರಕ್ಷಿತವಾಗಿಯಾದರೂ ಇದ್ದರು ಎಂಬುದು ನಮ್ಮಂಥವರ ಗ್ರಹಿಕೆ.

ತರುವಾಯ ಸಂಭವಿಸಿದ್ದೇ ಎರಡು ಅಸದೃಶ ಘಟನೆಗಳು. ಇತಿಹಾಸ ಸಾಕ್ಷಿಯಾದ ದುರ್ಘಟನೆಯೊಂದರ ಕಾರಣದಿಂದಾಗಿ ಪಿ.ವಿ. ನರಸಿಂಹರಾವ್ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತಾಯಿತು. ಅಷ್ಟೇ ಅಲ್ಲ, ಡಾ. ಮನಮೋಹನ್ ಸಿಂಗ್​ರಂಥ ವಿನೀತ ವಿದ್ವಾಂಸರೊಬ್ಬರನ್ನು ಅವರು ಹಣಕಾಸು ಮಂತ್ರಿಯಾಗಿ ನಿಯೋಜಿಸಿದರು. ಅಧಿಕಾರಾರೂಢ ವ್ಯವಸ್ಥೆಯಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದವರೂ, ನಿಷ್ಠಾವಂತರೂ ಆಗಿದ್ದ ಈ ಇಬ್ಬರ ಮೇಲೆ, ವ್ಯವಸ್ಥೆಯನ್ನು ಸುರಕ್ಷಿತವಾಗಿ ಕಾಯ್ದುಕೊಂಡು ಸಮರ್ಥಿಸಿಕೊಂಡು ಹೋಗುವಂಥ ಸಾಮರ್ಥ್ಯವಿರುವವರು ಎಂಬ ನಿರೀಕ್ಷೆಯಿದ್ದುದು ಸಹಜವಾಗಿತ್ತು.

ಪರಿಶ್ರಮದ ಕಾರ್ಯಕ್ಕೆ ಒದಗಿದ ಸಂಚಕಾರ: ಅದು 1991ರ ಜುಲೈ 3ರ ಕಾಲಘಟ್ಟ. ಜಡ್ಡುಗಟ್ಟಿದ ಹಳೆಯ ವ್ಯವಸ್ಥೆಯನ್ನು ನೆಲಸಮ ಮಾಡುವ ತಂಡವೊಂದು ನವದೆಹಲಿಯಲ್ಲಿ ಅಧಿಕಾರ ಗದ್ದುಗೆಗೇರಿದೆ ಎಂಬುದು ಭಾರತಕ್ಕೆ ಅರಿವಾಗತೊಡಗಿತು. ಹಳೆಯ ರಚನೆಯ ಒಂದೊಂದೇ ಇಟ್ಟಿಗೆಯನ್ನು ಕಳಚುತ್ತ ಉರುಳಿಸಲಾಯಿತು; ಒಂದೊಂದೇ ಇಟ್ಟಿಗೆ ಪೇರಿಸಿಕೊಂಡು ಹೊಸತೊಂದು ಭವ್ಯಸೌಧವನ್ನು ಕಟ್ಟಲಾಯಿತು. 27 ವರ್ಷಗಳ ನಂತರವೂ ಈ ಕಾರ್ಯವಿನ್ನೂ ಪ್ರಗತಿಯಲ್ಲಿದೆ.

ದುರದೃಷ್ಟಕರ ಸಂಗತಿಯೆಂದರೆ, ಮತ್ತೊಂದು ‘ಧ್ವಂಸತಂಡ’ವು ಒಳಗೊಳಗೇ ಕೊರೆದುಕೊಂಡು ನವದೆಹಲಿಯಲ್ಲಿ ಅಧಿಕಾರ ಗದ್ದುಗೆಗೇರಿದಂತೆ ತೋರುತ್ತಿದೆ. ಕಳೆದ 27 ವರ್ಷಗಳ ಅವಧಿಯಲ್ಲಿ ಅತೀವ ಜಾಗರೂಕತೆಯಿಂದ ಮತ್ತು ಶ್ರಮವಹಿಸಿ ಕಟ್ಟಲಾದ ಭವ್ಯಸೌಧವನ್ನು ಕೆಡವಿ ಬೀಳಿಸುವ ಕಾರ್ಯವನ್ನು ಈ ತಂಡ ಶುರುವಿಟ್ಟುಕೊಂಡಿರುವಂತೆ ತೋರುತ್ತಿದೆ; ಅಷ್ಟೇ ಅಲ್ಲ, ಭಾರತದ ಕುಂಠಿತ ಬೆಳವಣಿಗೆಯ ಸುದೀರ್ಘ ಇತಿಹಾಸಕ್ಕೆ ಕಾರಣವಾಗಿದ್ದ ‘ನಿಯಂತ್ರಣ ನೀತಿಯ’ ಆರ್ಥಿಕತೆಯ ಸೌಧವನ್ನು ಮರುನಿರ್ವಿುಸುವ ಹುನ್ನಾರ ಅದಕ್ಕಿರುವಂತೆ ಕಾಣುತ್ತಿದೆ. ಕೇಂದ್ರ ಆಯವ್ಯಯದ ಭಾಷಣದ ಭಾಗವಾಗಿದ್ದ ಅಂಶಗಳೂ ಸೇರಿದಂತೆ, ಇತ್ತೀಚಿನ ಅದರ ಕೆಲವೊಂದು ತೀರ್ವನಗಳನ್ನು ಹೇಗೆ ತಾನೆ ವಿವರಿಸಲಾದೀತು?

1991ರಿಂದೀಚೆಗೆ ಭಾರತದ ತಯಾರಿಕಾ ವಲಯವು, ಜಿಡಿಪಿ/ಜಿವಿಎ ರೀತಿಯಲ್ಲಿಯೇ ಸರಾಸರಿ ಪ್ರಮಾಣದಲ್ಲಿ ಬೆಳೆದಿರುವುದು ಬಹುತೇಕವಾಗಿ ಕಾಣಬರುವ ಚಿತ್ರಣ. ಆದಾಗ್ಯೂ, ರಫ್ತುಗಳಲ್ಲಿ ಹೆಚ್ಚಳವಾಗಿದೆ. 1990-91ರ ವರ್ಷದಲ್ಲಿ ರಫ್ತು ಪ್ರಮಾಣವು ಜಿಡಿಪಿಯ ಶೇ. 6.93ರಷ್ಟಿತ್ತು. 2016-17ರ ವೇಳೆಗೆ ಈ ಪ್ರಮಾಣ ಶೇ. 19.31ಕ್ಕೆ ಏರಿದೆ. ಆರ್ಥಿಕ ರಕ್ಷಣಾ ನೀತಿವಾದದ (ಅಂದರೆ, ಸ್ವದೇಶಿ ಕೈಗಾರಿಕೆಗಳನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸಲು, ವಿದೇಶಿ ಸರಕುಗಳ ಮೇಲೆ ಭಾರಿ ಆಮದು ತೆರಿಗೆ ವಿಧಿಸಬೇಕೆಂಬ ನೀತಿಯನ್ನು ಎತ್ತಿಹಿಡಿಯುವಿಕೆ) ಬೆಂಬಲದಿಂದ ಮಾತ್ರವೇ ತಯಾರಿಕಾ ವಲಯ ಬೆಳೆಯುತ್ತದೆ ಅಥವಾ ರಫ್ತು ಚಟುವಟಿಕೆಗಳು ವರ್ಧಿಸುತ್ತವೆ ಎಂದು ಪರಿಭಾವಿಸುವುದು ತಪ್ಪಾಗುತ್ತದೆ. ಬದಲಾಗಿ, ಇಂಥ ನೀತಿವಾದದಿಂದಾಗಿ ದೇಶಕ್ಕೆ ಬಂಡವಾಳ ಹಾಗೂ ತಂತ್ರಜ್ಞಾನದ ಕೊರತೆ ಎದುರಾಗಿ, ತಯಾರಿಕಾ ವಲಯದ ರಫ್ತುಚಟುವಟಿಕೆಗಳು ಸ್ಪರ್ಧಾತ್ಮಕತೆಯ ವ್ಯಾಪ್ತಿಯಿಂದ ದೂರಸರಿಯುವಂತಾಗುತ್ತದೆ.

ನ್ಯಾಯಸಮ್ಮತವಲ್ಲದ ವ್ಯಾಪಾರ-ವ್ಯವಹಾರ ಪರಿಪಾಠಗಳಿಂದ ರಕ್ಷಿಸಿಕೊಳ್ಳಲು ಸಾಕಷ್ಟು ರಕ್ಷಣೋಪಾಯಗಳಿವೆ. ಪರಮಾವಧಿ ಮಟ್ಟಗಳಿಗೆ ಒಳಪಟ್ಟಿರುವ ರೀತಿಯಲ್ಲಿ ಸುಂಕದ ದರಗಳನ್ನು ವಿಧಿಸಲು, ವಿಶ್ವ ವಾಣಿಜ್ಯ ಸಂಘಟನೆಯ ಒಡಂಬಡಿಕೆಗಳು ದೇಶವೊಂದಕ್ಕೆ ಅವಕಾಶ ಕಲ್ಪಿಸುತ್ತವೆ. ತಾತ್ಕಾಲಿಕ ಅವಧಿಯವರೆಗೆ ಸಂರಕ್ಷಣಾ ಸುಂಕ ಅಥವಾ ಕಾಪು ಸುಂಕಗಳನ್ನು (ಖಚ್ಛಛಿಜಚ್ಠ್ಟ ಛ್ಠಠಿಜಿಛಿಠ) ವಿಧಿಸುವ ಮೂಲಕ, ಆಮದು ಚಟುವಟಿಕೆಗಳಲ್ಲಿ ಕಾಣಬರುವ ‘ಹಠಾತ್ ಏರಿಕೆ’ಯ ಪ್ರವೃತ್ತಿಯನ್ನು ಎದುರಿಸಲು ಸಾಧ್ಯವಿದೆ. ಕಡಿಮೆ ಬೆಲೆಯ ವಿದೇಶಿ ಸರಕುಗಳು ದೇಶೀಯ ಮಾರುಕಟ್ಟೆಯಲ್ಲಿ ‘ಸುರಿಯಲ್ಪಡುವ’ ಚಟುವಟಿಕೆಯನ್ನು, ‘ಸುರಿಕೆ ನಿರೋಧಕ’ ಸುಂಕಗಳನ್ನು ಅಂದರೆ ಅಗ್ಗದ ಸರಕು ನಿಯಂತ್ರಣ ತೆರಿಗೆಗಳನ್ನು ವಿಧಿಸುವ ಮೂಲಕ ದಂಡಾರ್ಹವನ್ನಾಗಿಸಲು ಸಾಧ್ಯವಿದೆ. ಇಷ್ಟೇ ಅಲ್ಲ, ಭಾರತೀಯ ಮಾರುಕಟ್ಟೆಯನ್ನು ಅತಿಕ್ರಮಿಸುತ್ತಿರುವ ಅಗ್ಗದ, ಕಳಪೆಯಾಗಿರುವ ಸರಕುಗಳನ್ನು ತಡೆಗಟ್ಟಲು ಅನುಜ್ಞಾರ್ಹ ತೆರಿಗೆಯೇತರ ಉಪಕ್ರಮಗಳೂ ಲಭ್ಯವಿವೆ. ತಯಾರಿಕೆ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ದೇಶಗಳು, ಒಂದು ಮುಕ್ತ, ಸ್ಪರ್ಧಾತ್ಮಕ ಹಾಗೂ ನಿಯಮಾಧಾರಿತ ವಿಶ್ವ ವ್ಯಾಪಾರ ವ್ಯವಸ್ಥೆಯಡಿಯಲ್ಲಿ ಏಳಿಗೆ ಸಾಧಿಸಿವೆ ಎಂಬುದನ್ನು ನಾವು ಮರೆಯುವಂತಿಲ್ಲ. ಭಾರತಕ್ಕೂ ಇಂಥ ಪ್ರಯೋಜನ ದಕ್ಕಿದೆ.

ಸಾಗುವ ದಿಕ್ಕನ್ನು ಬದಲಿಸಬೇಕಿದೆ: ತಥಾಕಥಿತ ‘ಸ್ವದೇಶಿ’ ಲಾಬಿಗಳಿಂದ ಬಂದ ಒತ್ತಡದ ಫಲವಾಗಿ ಮರುಚಿಂತನೆ ಏನಾದರೂ ನಡೆದಿದೆಯೇ ಎಂಬುದಿಲ್ಲಿ ಹುಟ್ಟುವ ಪ್ರಶ್ನೆ. ಕೇಂದ್ರ ಬಜೆಟ್​ಗೂ ಮುನ್ನ ಮತ್ತು ಬಜೆಟ್​ನಲ್ಲಿ, ಸರ್ಕಾರವು ಹತ್ತು ಹಲವು ಉಪಕ್ರಮಗಳನ್ನು ಘೋಷಿಸಿರುವುದು ನೋಡಿದರೆ, ಆರ್ಥಿಕ ರಕ್ಷಣಾ ನೀತಿವಾದದ (ಮತ್ತು ತೆರಿಗೆ ವಿಧಿಸುವಿಕೆಯ) ಲಾಬಿಗಳ ಬಲವರ್ಧನೆಯಾಗಿರುವುದು ಅರಿವಾಗುತ್ತದೆ. ಈ ಗ್ರಹಿಕೆಗೆ ಪುಷ್ಟಿ ನೀಡುವ ಕೆಲವು ಅಂಶಗಳು ಹೀಗಿವೆ:

1. ಮೊಬೈಲ್ ಫೋನ್, ಮೈಕ್ರೋವೇವ್ ಓವನ್, ಕಂಪ್ಯೂಟರ್ ಮಾನಿಟರ್​ಗಳಂಥ ಹಲವು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೇಲಿನ ಆಮದು ಸುಂಕಗಳನ್ನು 2017ರ ಡಿಸೆಂಬರ್​ನಲ್ಲಿ ಗಣನೀಯವಾಗಿ (ಶೇ. 0-15ರವರೆಗೆ) ಏರಿಸಲಾಯಿತು; ಇದೊಂದು ಅಲ್ಪಾವಧಿಯ ಕ್ರಮವೇನಲ್ಲ ಎಂಬುದು ಸುಸ್ಪಷ್ಟ.

2. ಹಣ್ಣಿನ ರಸ, ಸುಗಂಧ ದ್ರವ್ಯ ಮತ್ತು ಪ್ರಸಾಧನ ಸಾಮಗ್ರಿ, ವಾಹನದ ಬಿಡಿಭಾಗ, ಪಾದರಕ್ಷೆ, ನಕಲು ಆಭರಣ, ಮೊಬೈಲ್ ಫೋನ್, ಸ್ಮಾರ್ಟ್​ವಾಚ್, ಆಟಿಕೆ ಮತ್ತು ಆಟದ ಸಾಧನಗಳು, ರೇಷ್ಮೆವಸ್ತ್ರಗಳು, ವನಸ್ಪತಿ ಎಣ್ಣೆ, ಗಾಳಿಪಟ, ಮೇಣದ ಬತ್ತಿ, ತಂಪು ಕನ್ನಡಕ ಇತ್ಯಾದಿಗಳು ಸೇರಿದಂತೆ ಹಲವಾರು ಸರಕುಗಳ ಮೇಲೆ ತೆರಿಗೆಯಲ್ಲಿ ಅಗಾಧ ಹೆಚ್ಚಳವನ್ನು ಆಯವ್ಯಯದಲ್ಲಿ ಘೋಷಿಸಲಾಯಿತು.

3. ಒಂದಕ್ಕಿಂತ ಹೆಚ್ಚು ಮಾರ್ಗದಲ್ಲಿ ಬಂಡವಾಳದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇತ್ತೀಚಿನ ದೀರ್ಘಾವಧಿ ಬಂಡವಾಳ ಲಾಭಗಳ ಮೇಲಿನ ತೆರಿಗೆ (ಔಟ್ಞಜ ಖಛ್ಟಿಞ ಇಚಟಜಿಠಿಚ್ಝ ಎಚಜ್ಞಿಠ ಖಚ್ಡ) ಸೇರಿದಂತೆ, ಬಂಡವಾಳದ ಮೇಲೆ ವಿಧಿಸಲಾಗುವ ಐದು ಬಗೆಯ ತೆರಿಗೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕು (ಆರ್​ಬಿಐ) ಗುರುತಿಸಿದ್ದು, ಅವು ಹೂಡಿಕೆಗಳಿಗೆ ತಡೆಯೊಡ್ಡುವಂಥವಾಗಿವೆ.

4. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರಗಳು, ನೇರ ದತ್ತಾಂಶವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಿಂಗಾಪುರ ಷೇರು ವಿನಿಮಯ ಕೇಂದ್ರದೊಂದಿಗೆ ಮಾಡಿಕೊಂಡಿದ್ದ ಪರವಾನಗಿ ಒಪ್ಪಂದಗಳನ್ನು ಅಂತ್ಯಗೊಳಿಸಿವೆ; ಕಡಿಮೆ ತೆರಿಗೆಗಳು ಹಾಗೂ ನವಿರಾದ ಕಟ್ಟುಪಾಡುಗಳ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆಂದು ಇಂಡೆಕ್ಸ್ ಫ್ಯೂಚರ್ಸ್ ಮಾರುಕಟ್ಟೆಯು ಸಿಂಗಾಪುರಕ್ಕೆ ವರ್ಗಾವಣೆಯಾಗುವುದನ್ನು ತಡೆಯುವ ಉದ್ದೇಶ ಇದರ ಹಿಂದಿರುವುದು ಸುಸ್ಪಷ್ಟ.

5. ಹಣದುಬ್ಬರದ ಮೇಲೆ ಆಗಬಹುದಾದ ಪರಿಣಾಮವನ್ನು ಲೆಕ್ಕಿಸದೆ, ವಿತ್ತೀಯ ಕೊರತೆಯು ಈ ಹಿಂದೆ ಘೋಷಿಸಲಾಗಿರುವ ಗುರಿಗಳಿಗಿಂತ ಮೇಲೆ ಏರುವುದಕ್ಕೆ ಪ್ರಸಕ್ತ ವರ್ಷ ಹಾಗೂ ಮುಂದಿನ ವರ್ಷ ಅನುವುಮಾಡಿಕೊಡಲಾಗುವುದು; ಆರ್​ಬಿಐ ಅನುಸಾರ, ಹಣದುಬ್ಬರವು 2018ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 5.6ರ ಮಟ್ಟಕ್ಕೆ ಏರಬಹುದು.

6. ಕಚ್ಚಾತೈಲದ ಬೆಲೆಗಳಲ್ಲಿ ಪ್ರತಿಬಾರಿ ಏರಿಕೆಯಾದಾಗಲೂ, ಪೆಟ್ರೋಲ್-ಡೀಸಲ್-ಎಲ್​ಪಿಜಿ ಇಂಧನಗಳ ಚಿಲ್ಲರೆ ಮಾರಾಟದ ಬೆಲೆಗಳಲ್ಲಿ ಅದು ಪ್ರತಿಬಿಂಬಿತವಾಗುವುದು ಗೊತ್ತಿರುವ ಸಂಗತಿಯೇ; ಈ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಗಳನ್ನು ತಗ್ಗಿಸುವಂಥ ಇಲ್ಲವೇ ಅವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಯಡಿ ತರುವಂಥ ಪರ್ಯಾಯಮಾರ್ಗದ ಕುರಿತಾದ ಚಿಂತನೆ ನಡೆಯದಿರುವುದರ ಫಲಶ್ರುತಿಯಿದು.

ವೈಫಲ್ಯವನ್ನು ಒಪ್ಪಿಕೊಳ್ಳುವಿಕೆ: ಆರ್ಥಿಕ ರಕ್ಷಣಾ ನೀತಿವಾದಕ್ಕೆ ಅನುಸಾರವಾಗಿರುವ ಕ್ರಮಗಳನ್ನು ಕೈಗೊಳ್ಳುವುದೆಂದರೆ, ‘ಮೇಕ್ ಇನ್ ಇಂಡಿಯಾ’ದಂಥ ಆಂದೋಲನ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತೆಯೇ ಸರಿ. ಅಷ್ಟೇ ಅಲ್ಲ, ಅನುಕೂಲಕರ ವಾಣಿಜ್ಯ ನೀತಿ (ಉಚಠಛಿ ಟ್ಛ ಈಟಜ್ಞಿಜ ಆಠಜ್ಞಿಛಿಠಠ)ಯ ಸೂಚ್ಯಂಕದಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ತುತ್ತೂರಿ ಊದಿದ್ದು ಕೂಡ ಭ್ರಮೆಹುಟ್ಟಿಸುವ ಒಂದು ಕಸರತ್ತಾಗಿದೆ ಮತ್ತು ಸುಧಾರಿತ ಮೂಲಸೌಕರ್ಯದ ಸಮರ್ಥನೆಯೂ ಒಂದು ಟೊಳ್ಳು ಬಡಾಯಿಯಾಗಿದೆ ಎಂಬುದಕ್ಕೆ ಇದು ಪುಷ್ಟಿ ನೀಡಿದೆ. ಈ ಎಲ್ಲದರ ಪರಿಣಾಮವಾಗಿ ವ್ಯವಸ್ಥೆಯೊಳಗಿಂದಲೇ ಭಿನ್ನಾಭಿಪ್ರಾಯದ ದನಿಗಳು ಹೊಮ್ಮುತ್ತಿವೆ. ಅಬಕಾರಿ ಸುಂಕಗಳಲ್ಲಿ ಹೆಚ್ಚಳವಾಗಿರುವುದರ ಕುರಿತು ನೀತಿ ಆಯೋಗದ ಹಿಂದಿನ ವೈಸ್-ಚೇರ್ಮನ್ ಡಾ. ಅರವಿಂದ ಪನಗರಿಯಾರಿಂದ ಟೀಕೆಗಳು ಹೊಮ್ಮುತ್ತಿವೆ. ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (ಕMಉಅಇ) ಸದಸ್ಯ ಡಾ. ರತಿನ್ ರಾಯ್, ವಿತ್ತೀಯ ಕೊರತೆಯ ಗುರಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಟುವಾಗಿ ಟೀಕಿಸಿದ್ದಾರೆ. ಈ ಮಂಡಳಿಯ ಮತ್ತೋರ್ವ ಸದಸ್ಯ ಡಾ. ಸುರ್ಜೀತ್ ಭಲ್ಲಾ, ದೀರ್ಘಾವಧಿ ಬಂಡವಾಳಗಳ ಮೇಲಿನ ತೆರಿಗೆಯ ಹೇರಿಕೆಯನ್ನು ಖಂಡಿಸಿದ್ದಾರೆ.

ಹಣದುಬ್ಬರಕ್ಕೆ ಕಾರಣವಾಗಬಹುದಾದ ಆರು ಅನಿಶ್ಚಿತತೆಗಳನ್ನು ಆರ್​ಬಿಐನ ಹಣಕಾಸು ನೀತಿ ಸಮಿತಿ ಪಟ್ಟಿಮಾಡಿದ್ದು, ಆ ಪೈಕಿಯ ಮೂರು ಅನಿಶ್ಚಿತತೆಗಳು ಬಜೆಟ್ ಘೋಷಣೆಳೊಂದಿಗೆ ನೇರಸಂಬಂಧ ಹೊಂದಿವೆ ಎನ್ನಲಡ್ಡಿಯಿಲ್ಲ.

ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ‘ಹಳೆಯದನ್ನು ನೆನಪಿಸಿಕೊಳ್ಳದಿದ್ದವರು, ಅದನ್ನೇ ಪುನರಾವರ್ತಿಸುವಂಥ ತಪು್ಪಹೆಜ್ಜೆಯನ್ನು ಇಡುತ್ತಾರೆ’ ಎಂಬ ಜಾಣನುಡಿ ನೆನಪಾಗುತ್ತದೆ.

Leave a Reply

Your email address will not be published. Required fields are marked *

Back To Top