22.8 C
Bengaluru
Saturday, January 18, 2020

ಚಿದಂಬರಂಗೆ ಸಿಕ್ಕಿದ್ದು ಜಾಮೀನು, ಕ್ಲೀನ್​ಚಿಟ್ ಅಲ್ಲ!

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಚಿದಂಬರಂ ಮಾಡಿರುವ ಎಲ್ಲ ತಪ್ಪುಗಳನ್ನು ಕೊನೆಗೊಮ್ಮೆ ಕಾನೂನು ಕ್ಷಮಿಸಿಬಿಡಬಹುದೇನೋ. ಈ ದೇಶದ ಹಿಂದೂ-ಮುಸಲ್ಮಾನರು ಕ್ಷಮಿಸಲಾರರು. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಚಿದು ಮತ್ತವರ ಗೆಳೆಯರು ಸೇರಿ ‘ಹಿಂದೂ ಭಯೋತ್ಪಾದನೆ’ ಎಂಬ ಹೊಸಪದವನ್ನೇ ಹುಟ್ಟುಹಾಕಿಬಿಟ್ಟಿದ್ದರು.

ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಾಂಗ್ರೆಸ್ಸಿನ ಪಡಸಾಲೆಗಳಲ್ಲಿ ಸಂಭ್ರಮವೋ ಸಂಭ್ರಮ. ಕಪಿಲ್ ಸಿಬಲ್ ‘ಸತ್ಯಮೇವ ಜಯತೇ’ ಎಂದು ಟ್ವೀಟ್ ಮಾಡಿದ್ದು ಎಂಥವರಲ್ಲೂ ನಗೆಯುಕ್ಕಿಸಲು ಸಾಕಾಗಿತ್ತು. ನ್ಯಾಯಾಲಯ ಚಿದಂಬರಂಗೆ ಕೊಟ್ಟಿರುವುದು ಜಾಮೀನಷ್ಟೇ, ಕ್ಲೀನ್​ಚಿಟ್ ಅಲ್ಲ! ಆದರೆ ಈ ಹಿಂದೆಯೂ ನಂಬಿಸಿಕೊಂಡು ಬಂದಿರುವಂತೆ ಕಾಂಗ್ರೆಸ್ಸು ಇದನ್ನು ಕ್ಲೀನ್​ಚಿಟ್ ಎಂದೇ ಜನರಿಗೆ ಒಪ್ಪಿಸಿಬಿಟ್ಟರೆ ಅಚ್ಚರಿ ಪಡಬೇಡಿ. ಇತ್ತೀಚೆಗೆ ಜನರ ಮಾನಸಿಕತೆಯೂ ವಿಚಿತ್ರವಾಗುತ್ತಿದೆ. ಭ್ರಷ್ಟರನ್ನು ಜೈಲಿಗೆ ತಳ್ಳಬೇಕು ಎಂಬ ಧಾವಂತ ಎಲ್ಲರಿಗೂ ಇದೆ. ಆದರೆ ಅದೇ ಭ್ರಷ್ಟರು ಜೈಲಿನಿಂದ ಹೊರಬಂದಾಗ ಯಾರಿಗೂ ಸಿಗದಷ್ಟು ಅದ್ದೂರಿಯ ಸ್ವಾಗತ ಕೊಡಲಾಗುತ್ತಿದೆ.

ಎ.ರಾಜಾ 2ಜಿ ಹಗರಣದ ಜೈಲುವಾಸದಿಂದ ಹೊರಬಂದಾಗ ಅವರನ್ನು ಗೌರವಿಸಿದ ರೀತಿ ವಿಚಿತ್ರವಾಗಿತ್ತು ಎನ್ನುವುದು ಒಂದಾದರೆ ಅದೇ ರಾಜ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ವಿನೋದ್ ರಾಯ್ ಅವರನ್ನು ಕಾಂಟ್ರಾ್ಯಕ್ಟ್ ಕಿಲ್ಲರ್ ಎಂದು ಜರಿದು ಅವರನ್ನು ಮುಗಿಸಿಬಿಡಬೇಕು ಎಂದೂ ಕೂಗಾಡಿದ್ದರು. ಅದು ಮರೆತೇ ಹೋಗಿದ್ದರೆ ಡಿ.ಕೆ ಶಿವಕುಮಾರ್ ಜಾಮೀನು ಪಡೆದು ಜೈಲಿನಿಂದ ಹೊರಬಂದಾಗಿನ ಘಟನೆಗಳನ್ನು ನೆನಪಿಸಿಕೊಳ್ಳಿ. ವಿಮಾನ ನಿಲ್ದಾಣದಿಂದ ಹಿಡಿದು ಕನಕಪುರದವರೆಗೂ ಜನಸಾಗರವೇ ತುಂಬಿತ್ತಲ್ಲದೇ ಮುಗಿಲೆತ್ತರದ ಸೇಬುಹಾರವನ್ನು ಶಿವಕುಮಾರರ ಕೊರಳಿಗೇರಿಸಿ ಜನ ಕೇಕೆ ಹಾಕಿ ಕುಣಿದಿದ್ದರು. ಇದೇ ಜನ ಜೈಲಿನೊಳಗೆ ಈ ಆರೋಪಿಗಳು ಕಷ್ಟ ಅನುಭವಿಸುತ್ತಿರುವಾಗ ಕುಹಕದ ನಗೆಯನ್ನೂ ನಕ್ಕಿದ್ದರು. ಅದಕ್ಕೆ ಮಾನಸಿಕತೆಯೇ ವಿಚಿತ್ರವಾದ್ದು ಎಂದು ಹೇಳಿದ್ದು.

ತಮ್ಮ ನಾಯಕರು ಜೈಲಿನಲ್ಲಿ ಸಂಕಟ ಅನುಭವಿಸುವುದನ್ನು ಆನಂದಿಸುವ ಜನರೇ ಅವರು ಬಂದಾಗ ಸಂಭ್ರಮಕ್ಕೂ ನಿಲ್ಲುತ್ತಾರೆ. ಚಿದಂಬರಂ ಕೂಡ ಇದಕ್ಕೆ ಹೊರತಲ್ಲ. ದೀಪಾವಳಿಯ ಪಟಾಕಿಗಳನ್ನು ಪರಿಸರದ ಹೆಸರೆತ್ತಿ ವಿರೋಧಿಸಿದವರೆಲ್ಲಾ ಚಿದಂಬರಂರ ಆಗಮನಕ್ಕೆ ಸಂಭ್ರಮಿಸಿ ಅದನ್ನೇ ಸಿಡಿಸಿದ್ದರು. ದುರಂತವೆಂದರೆ ಈ ರೀತಿಯ ಸಂಭ್ರಮಾಚರಣೆ ಕಾಂಗ್ರೆಸ್ಸಿಗೆ ಮಾತ್ರವಲ್ಲದೇ ಎಲ್ಲ ಪಕ್ಷಗಳಲ್ಲೂ ವ್ಯಾಪಿಸಿಕೊಂಡಿದೆ!

ಈಗ ವಿಚಾರಕ್ಕೆ ಬರೋಣ. ಚಿದಂಬರಂ ಜಾಮೀನು ಪಡೆದು ಹೊರಬಂದಿರುವುದು ಐಎನ್​ಎಕ್ಸ್ ಕೇಸಿನಲ್ಲಿ ಮಾತ್ರ. ಇದು ಇಂದ್ರಾಣಿ ಮುಖರ್ಜಿ ಹೊರಹಾಕಿದ ಕಟುಸತ್ಯಗಳ ಕಾರಣಕ್ಕೆ ಅವರ ಮೇಲೆ ಜಡಿಯಲಾದ ಕೇಸು. ಮೊದಲ ಬಾರಿಗೆ ಈ ಕೇಸು ದಾಖಲಾಗಿದ್ದು 2008ರಲ್ಲಿ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಐಎನ್​ಎಕ್ಸ್ ಮೀಡಿಯಾದ 300 ಕೋಟಿ ರೂಪಾಯಿಯ ಅವ್ಯವಹಾರವನ್ನು ಬಯಲಿಗೆಳೆದಿತ್ತು.

ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಮಾರಿಷಸ್​ನಲ್ಲಿ ಈ ಕಂಪನಿಯನ್ನು ತೆರೆದು ಅದರ ಮೂಲಕ ಭಾರತದಲ್ಲಿ ಹಣ ಹೂಡಿ ತೆರಿಗೆ ವಂಚಿಸುವ ಕೆಲಸಕ್ಕೆ ಕೈ ಹಾಕಿದ್ದರು. ತೆರಿಗೆ ಇಲಾಖೆ ಈ ಕೇಸನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹಸ್ತಾಂತರಿಸುತ್ತಿದ್ದಂತೆ ಫಾರಿನ್ ಎಕ್ಸ್​ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್(ಫೇಮಾ)ದ ಅಡಿಯಲ್ಲಿ ಕೇಸು ದಾಖಲಿಸಲಾಯ್ತು. ಆಗೆಲ್ಲಾ ಚಿದಂಬರಂಗೂ ಇದಕ್ಕೂ ಯಾವ ನಂಟೂ ಕಂಡುಬಂದಿರಲಿಲ್ಲ. ಅದಾದ ಕೆಲವು ವರ್ಷಗಳ ನಂತರ ಚಿದಂಬರಂ ಮಗ ಕಾರ್ತಿಯ ಕಂಪನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಅಧಿಕಾರಿಗಳು ಅಧ್ಯಯನ ಮಾಡುತ್ತಿರುವಾಗ ಹಾವಿನ ಬುಟ್ಟಿಯೇ ತೆರೆದಂತಾಗಿತ್ತು.

ಕಾರ್ತಿಯ ಆಡಿಟರ್​ನ ಕಂಪ್ಯೂಟರ್ ದಾಖಲೆಗಳಲ್ಲಿ ಐಎನ್​ಎಕ್ಸ್ ಮಿಡಿಯಾದೊಂದಿಗಿರುವ ಸಂಬಂಧ ನಿಚ್ಚಳವಾಗಿತ್ತು. ಐಎನ್​ಎಕ್ಸ್​ನಿಂದ ಕಾರ್ತಿಯ ಕಂಪನಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗುವುದಕ್ಕೂ ಫಾರಿನ್ ಇನ್ವೆಸ್ಟ್​ಮೆಂಟ್ ಪ್ರಮೋಷನ್ ಬೋರ್ಡಿನ ಲೈಸೆನ್ಸು ಐಎನ್​ಎಕ್ಸ್​ಗೆ ಸಿಗುವುದಕ್ಕೂ ದಿನಾಂಕಗಳು ತಾಳೆ ಹೊಂದುತ್ತಿದ್ದವು. ಈ ಅನುಮಾನ ಬಲವಾಗಲು ಕಾರಣವೇನು ಗೊತ್ತೇ? ಆ ಹೊತ್ತಿನಲ್ಲಿ ದೇಶದ ಹಣಕಾಸು ಸಚಿವರಾಗಿದ್ದುದು ಸ್ವತಃ ಚಿದಂಬರಂ. ಇದರ ಆಧಾರದ ಮೇಲೆಯೇ ಅಪ್ಪ-ಮಕ್ಕಳಿಬ್ಬರ ಮನೆ-ಕಚೇರಿಗಳನ್ನು ಹುಡುಕಾಡಲಾಯ್ತು ಮತ್ತು ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಕೇಸುಗಳನ್ನೂ ಜಡಿಯಲಾಯ್ತು.

2007ರಲ್ಲಿ ಐಎನ್​ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಗೆ ಅನುಮತಿ ಕೇಳಲು ಹೋದಾಗ ಅದಕ್ಕೆ ಅನುಮತಿ ಸಿಕ್ಕಿದ್ದು ನಾಲ್ಕೂವರೆ ಕೋಟಿಗೆ ಮಾತ್ರ. ಆದರೆ ಅದಾಗಲೇ ಈ ಸಂಸ್ಥೆ 305 ಕೋಟಿ ರೂಪಾಯಿಯನ್ನು ಇಲ್ಲಿ ಹೂಡಿಯಾಗಿತ್ತು. 2008ರಲ್ಲಿ ವಿಚಾರಣೆ ಆರಂಭವಾದಾಗ ಸೂಕ್ಷ್ಮ ಅರಿತ ಇಂದ್ರಾಣಿ ಅವರು ಚಿದಂಬರಂ ಸಹಕಾರ ಪಡೆಯಬೇಕೆಂದು ನಿರ್ಧರಿಸಿದರು. ಅದಕ್ಕೆ ಅವರಿಗೆ ರಾಜಮಾರ್ಗವಾಗಿ ಸಿಕ್ಕಿದ್ದು ಕಾರ್ತಿ ಚಿದಂಬರಂ.

ಮುಲಾಜಿಲ್ಲದೇ ಕಾರ್ತಿ 10 ಲಕ್ಷ ಡಾಲರ್​ಗಳನ್ನು ವಿದೇಶೀ ಬ್ಯಾಂಕಿನ ತನ್ನ ಖಾತೆಗೆ ಜಮೆ ಮಾಡುವಂತೆ ಕೇಳಿಕೊಂಡರೆನ್ನಲಾಗಿದೆ. ಇದು ಕಷ್ಟವಾಗಬಹುದು ಎಂದು ಪೀಟರ್ ಹೇಳಿದಾಗ ಕಾರ್ತಿ ತನ್ನದ್ದೇ ಕಂಪನಿಗಳಾಗಿರುವ ಚೆಸ್ ಮ್ಯಾನೇಜ್​ವೆುಂಟ್ ಮತ್ತು ಅಡ್ವಾಂಟೇಜ್ ಸ್ಟ್ರಾಟಜಿಕ್​ಗಳಿಗೆ ಈ ದುಡ್ಡನ್ನು ಕೊಡುವಂತೆ ಕೇಳಿಕೊಂಡ. ಈ ದುಡ್ಡಿನಲ್ಲೇ ಮುಂದೆ ಕಾರ್ತಿ ಸ್ಪೇನ್​ನಲ್ಲಿ ಟೆನಿಸ್ ಕ್ಲಬ್​ಅನ್ನು, ಯುಕೆಯಲ್ಲಿ ಎರಡು ಬಂಗಲೆಗಳನ್ನು ಮತ್ತು ಭಾರತದಲ್ಲೂ ಸಾಕಷ್ಟು ಆಸ್ತಿಯನ್ನು ಕೊಂಡುಕೊಂಡರು ಎಂದು ಆಪಾದಿಸಲಾಗಿದೆ.

2017ರ ಜೂನ್​ನಲ್ಲಿ ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಗೃಹಖಾತೆ ಕಾರ್ತಿಯ ವಿರುದ್ಧ ಲುಕ್​ಔಟ್ ಸರ್ಕ್ಯುಲರ್ ಹೊರಡಿಸಿತು. ತನ್ನ ತಾನು ಉಳಿಸಿಕೊಳ್ಳಲು ಕಾರ್ತಿ ಮದ್ರಾಸ್ ನ್ಯಾಯಾಲಯಕ್ಕೆ ಹೋಗಿ, ಜಾಮೀನು ಪಡೆದರು ಕೂಡ. ಆದರೆ ಸವೋಚ್ಚ ನ್ಯಾಯಾಲಯದಲ್ಲಿ ಮದ್ರಾಸ್ ನ್ಯಾಯಾಲಯದ ತಡೆಯಾಜ್ಞೆಗೇ ತಡೆ ಸಿಕ್ಕಿತು. ಅಲ್ಲದೇ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಗೆ ಆದೇಶಿಸಿತು.

ಒಂದು ದಿನದ ಪೊಲೀಸ್ ಕಸ್ಟಡಿ, ಮೂರು ದಿನದ ಸಿಬಿಐ ಕಸ್ಟಡಿ ಮತ್ತು ಹನ್ನೆರಡು ದಿನದ ನ್ಯಾಯಾಂಗದ ಕಸ್ಟಡಿಯಿಂದ ಕೊನೆಗೂ ಕಾರ್ತಿಗೆ ಜಾಮೀನು ದಕ್ಕಿತು. ಈ ನಡುವೆಯೇ ಅವರಪ್ಪ ಪಿ.ಚಿದಂಬರಂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಕೂತಿದ್ದರು. ಅದು ಐಎನ್​ಎಕ್ಸ್ ಮಿಡಿಯಾದ ಹಣ ದುರುಪಯೋಗದ ಕೇಸು ತನ್ನ ಕೊರಳನ್ನು ಸುತ್ತುವುದು ಖಾತ್ರಿ ಎಂದು ಗೊತ್ತಾದಮೇಲೆ!

ಆ ವೇಳೆಗಾಗಲೇ ಜಾರಿ ನಿರ್ದೇಶನಾಲಯ ಕಾರ್ತಿಗೆ ಸೇರಿದ 54 ಕೋಟಿ ರೂಪಾಯಿಯ ದೇಶ-ವಿದೇಶಗಳಲ್ಲಿನ ಆಸ್ತಿಯನ್ನು ಜಫ್ತು ಮಾಡಿತು. ಇವೆಲ್ಲವನ್ನೂ ದ್ವೇಷದ ರಾಜಕಾರಣ ಎಂದು ಚಿದಂಬರಂ ಹೇಳಿದ್ದಲ್ಲದೇ ಐಎನ್​ಎಕ್ಸ್ ಪ್ರಕರಣದಲ್ಲಿ ತನ್ನ ಪಾತ್ರಕ್ಕೆ ಸಾಕ್ಷಿಗಳೇ ಇಲ್ಲವೆಂದು ಹೇಳುತ್ತಿದ್ದರು. ಇದಾದ ಕೆಲವು ತಿಂಗಳಲ್ಲಿ ಇಂದ್ರಾಣಿ ಮುಖರ್ಜಿ ಸಿಬಿಐಗೆ ಮಾಫಿ ಸಾಕ್ಷಿಯಾಗಿ ಚಿದಂಬರಂ ತನ್ನಿಂದ ಹಣ ಸ್ವೀಕರಿಸಿದ್ದು ನಿಜ ಎಂದು ಒಪ್ಪಿಕೊಂಡುಬಿಟ್ಟಳು.

ಅದರೊಟ್ಟಿಗೆ ಚಿದಂಬರಂ ನಿರೀಕ್ಷಣಾ ಜಾಮೀನು ನಿರಾಕರಿಸಲ್ಪಟ್ಟಿತು. ಜೈಲಿಗೆ ತಳ್ಳಲ್ಪಟ್ಟ ಚಿದಂಬರಂ ನೂರೈದು ದಿನಗಳ ಕಾಲ ಕೋರ್ಟಿನಿಂದ ಕೋರ್ಟಿಗೆ ಅಲೆದಾಡುತ್ತಲೇ ಉಳಿದರು. ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಇರುವ ಸಾಕ್ಷ್ಯವನ್ನೆಲ್ಲಾ ನಾಶಮಾಡಬಹುದೆಂದು ಅಧಿಕಾರಿಗಳು ಹೇಳಿರುವ ಮಾತನ್ನು ಒಪ್ಪಿಕೊಂಡೇ ನಡೆದಿದ್ದ ನ್ಯಾಯಾಲಯ ಕೊನೆಗೂ ಜಾಮೀನು ಕೊಟ್ಟಿತು. ಹಾಗಂತ ಚಿದಂಬರಂ ಮೇಲಿರುವ ಆರೋಪ ಇದೊಂದೇ ಅಲ್ಲ. 2ಜಿ ಹಗರಣದಲ್ಲೂ ಮಗನಿಗೆ ಅನುಕೂಲವಾಗುವ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆಂಬ ಗಂಭೀರ ಆರೋಪದ ವಿಚಾರಣೆಯೂ ನಡೆಯುತ್ತಿದೆ.

ಏರ್​ಸೆಲ್ ಟೆಲಿವೆಂಚರ್ಸ್​ಗೆ ಲೈಸನ್ಸ್ ಕೊಡಿಸಲು ತನ್ನ ಮಗನ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಕಂಪನಿಗೆ ಶೇಕಡಾ 5ರಷ್ಟು ಪಾಲುದಾರಿಕೆಯನ್ನು ಅವರು ಕೇಳಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತಿವೆ. ಏರ್​ಸೆಲ್ ಮ್ಯಾಕ್ಸಿಸ್ ಅಲ್ಲದೇ ರಾಬರ್ಟ್ ವಾದ್ರಾನೊಂದಿಗೆ ಸೇರಿ ಕಾರ್ತಿ ಉತ್ತರಪ್ರದೇಶದ ರಾಷ್ಟ್ರೀಯ ಗ್ರಾಮೀಣ ಸುರಕ್ಷಾ ಯೋಜನೆಯಲ್ಲೂ ಹಗರಣ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ಚಿದಂಬರಂ ಪತ್ನಿ ನಳಿನಿ ಕೂಡ ಸಾಮಾನ್ಯರೇನಲ್ಲ. 2004ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್​ನ ಪರವಾಗಿ ವಕೀಲರಾಗಿ ವಾದಿಸಲಿಕ್ಕೆ ಬಂದದ್ದು ಆಕೆಯೇ. ಮುಂದೆ ಈ ಕುರಿತ ಹಗರಣ ಬಯಲಾದಾಗ ತೆರಿಗೆ ಇಲಾಖೆ ತನಗೆ ಕೊಟ್ಟಿದ್ದ ಒಂದು ಲಕ್ಷ ರೂಪಾಯಿಯನ್ನು ಮರಳಿಸುತ್ತೇನೆಂದು ಆಕೆ ಎಲ್ಲರ ಮುಂದೆ ಕೇಳಿಕೊಂಡಿದ್ದರು.

ರಾಮ್ ಜೇಠ್ಮಲಾನಿ 2013ರಲ್ಲಿ ಚಿದಂಬರಂ ಮೇಲೆ ಎನ್​ಡಿಟಿವಿಯೊಂದಿಗೆ ಸೇರಿ 5000 ಕೋಟಿ ರೂಪಾಯಿಯನ್ನು ಮಾರಿಷಸ್ ಮಾರ್ಗದ ಮೂಲಕ ಭಾರತಕ್ಕೆ ನ್ಯಾಯವಿರೋಧಿ ಮಾರ್ಗದ ಮೂಲಕ ಒಳತಂದಿದ್ದಾರೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಎನ್​ಡಿಟಿವಿ ಮುಖ್ಯಸ್ಥರಾದ ಪ್ರಣಯ್ರಾಯ್ ಮತ್ತು ರಾಧಿಕಾರಾಯ್ ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. ಇಲ್ಲಿಯೂ ಚಿದಂಬರಂ ಪಾತ್ರ ಇರುವುದು ಗೊತ್ತಾದರೆ ಮರಳಿ ಜೈಲಿಗೆ ಹೋಗಬೇಕಾಗಿ ಬರಬಹುದು.

2004ರಲ್ಲಿ ಚಿದು ಹಣಕಾಸು ಸಚಿವರಾಗುವುದಕ್ಕೂ ಮುನ್ನ ವೇದಾಂತ ಕಂಪನಿಯ ವಕೀಲರ ತಂಡದಲ್ಲಿದ್ದರು. ಈ ಕಂಪನಿ ವಿದೇಶೀ ಹಣವನ್ನು ಭಾರತಕ್ಕೆ ಮೋಸದ ಮಾರ್ಗದಿಂದ ತಂದ ಆರೋಪವನ್ನು ಎದುರಿಸುತ್ತಿತ್ತು. ಅದರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ನಿಂತಿದ್ದು ಚಿದಂಬರಂ ಎಂಬ ಜಾಮೀನಿನ ಮೇಲೆ ಈಗ ಹೊರಗಿರುವ ಇದೇ ಕಾಂಗ್ರೆಸ್ಸಿಗನೇ. ಒಟ್ಟಾರೆ ರಾಷ್ಟ್ರದ ವಿಚಾರದಲ್ಲಷ್ಟೇ ಅಲ್ಲ, ತನ್ನ ಕ್ಷೇತ್ರದಲ್ಲೂ ಚಿದು ಖಳನಾಯಕನೇ. 2009ರಲ್ಲಿ ಶಿವಗಂಗಾದಲ್ಲಿ ಚುನಾವಣೆ ನಡೆದಾಗ ತನ್ನ ಪ್ರತಿಸ್ಪರ್ಧಿ ಅಣ್ಣಾಡಿಎಂಕೆಯ ರಾಜಾಕಣ್ಣಪ್ಪನನ್ನು ಸೋಲಿಸಬೇಕೆಂದು ತಿಪ್ಪರಲಾಗ ಹೊಡೆದಿದ್ದರು. ಕೊನೆಗೂ ಚಿದು ಸೋತು ಕಣ್ಣಪ್ಪನ್ ಗೆದ್ದರು.

ಹಾಗೆ ಅಧಿಕೃತ ಪ್ರಕಟಣೆಯೂ ಹೊರಬಿತ್ತು, ಟಿವಿ ರೇಡಿಯೋಗಳಲ್ಲಿ ಸುದ್ದಿಯೂ ಆಯ್ತು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಚಿದಂಬರಂ ಗೆದ್ದರೆಂದು ಅಧಿಕೃತ ಹೇಳಿಕೆಯನ್ನು ಮತ್ತೊಮ್ಮೆ ಹೊರಡಿಸಲಾಯ್ತು. ಚಿದು ಸ್ಪಷ್ಟವಾಗಿ ಅನೈತಿಕ ಮಾರ್ಗದ ಮೂಲಕ ಗೆಲುವು ತಮ್ಮದಾಗಿಸಿಕೊಂಡಿದ್ದರು. ಇಂದು ತಮ್ಮ ಸೋಲನ್ನು ಇವಿಎಂಗಳ ಮೇಲೆ ಹೊರಿಸುವ ಕಾಂಗ್ರೆಸ್ಸಿಗರು ಅಂದು ಈ ಅನೈತಿಕ ಗೆಲುವನ್ನೂ ಸಂಭ್ರಮಿಸಿಬಿಟ್ಟಿದ್ದರು. ಸಂಭ್ರಮಿಸಲು ಕಾಂಗ್ರೆಸ್ಸಿಗೆ ಕಾರಣವೇನು ಬೇಕಿಲ್ಲ ಬಿಡಿ!

ಚಿದಂಬರಂ ಮಾಡಿರುವ ಎಲ್ಲ ತಪ್ಪುಗಳನ್ನು ಕೊನೆಗೊಮ್ಮೆ ಕಾನೂನು ಕ್ಷಮಿಸಿಬಿಡಬಹುದೇನೋ. ಈ ದೇಶದ ಹಿಂದೂ-ಮುಸಲ್ಮಾನರು ಕ್ಷಮಿಸಲಾರರು. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಚಿದು ಮತ್ತವರ ಗೆಳೆಯರು ಸೇರಿ ‘ಹಿಂದೂ ಭಯೋತ್ಪಾದನೆ’ ಎಂಬ ಹೊಸಪದವನ್ನೇ ಹುಟ್ಟುಹಾಕಿಬಿಟ್ಟಿದ್ದರು. ಭಯೋತ್ಪಾದನೆ ನಡೆಸುವವರನ್ನು ತಡೆಗಟ್ಟಿ ಅವರನ್ನು ಸರಿದಾರಿಗೆ ತರಲು ಯತ್ನಿಸಬೇಕಿದ್ದ ಅಧಿಕಾರದಲ್ಲಿದ್ದ ಇವರೆಲ್ಲಾ ಹಿಂದೂಗಳೂ ಭಯೋತ್ಪಾದಕರಾಗಬಲ್ಲರು ಎಂದು ತೋರಿಸುವ ಧಾವಂತದಲ್ಲಿ ಮುಸಲ್ಮಾನರಲ್ಲಿ ಬರಬಹುದಾಗಿದ್ದ ಬದಲಾವಣೆಯನ್ನು ತಡೆದುಬಿಟ್ಟರು.

ಹಿಂದೂ ಭಯೋತ್ಪಾದನೆಯನ್ನು ಸಾಬೀತುಪಡಿಸುವ ಭರದಲ್ಲಿ ಸಂಝೆೊತಾ ಎಕ್ಸ್​ಪ್ರೆಸ್​ಗೆ ಕಾರಣನಾದ ಆರೀಫ್ ಕಸ್ಮಾನಿ ಮತ್ತು ಮೆಕ್ಕಾ-ಮಸ್ಜಿದ್ ಬಾಂಬ್ ಸ್ಪೋಟಕ್ಕೆ ಕಾರಣನಾದ ಬಿಲಾಲ್ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಅದರ ಪರಿಣಾಮವೇ ಮುಂಬೈ ದಾಳಿಯಾಗಿ ಅನೇಕ ಸಾವು-ನೋವುಗಳಾದವು. ಆಗೆಲ್ಲಾ ಚಿದಂಬರಂ ಕೆಟ್ಟದ್ದಾಗಿ ಪ್ರತಿಕ್ರಿಯಿಸುತ್ತಿದ್ದುದಲ್ಲದೇ ಭಾರತೀಯರನ್ನು ತುಚ್ಛವಾಗಿ ಕಂಡಿದ್ದರು ಕೂಡ.

ಕೋರ್ಟು ಜಾಮೀನು ಕೊಟ್ಟರೂ ಭಾರತೀಯ ಹೃದಯಗಳೆಂದೂ ಅವರನ್ನು ಕ್ಷಮಿಸಲಾರವು. ಅತ್ಯಂತ ಶ್ರೇಷ್ಠ ಮನೆತನಕ್ಕೆ ಸೇರಿದ ಚಿದಂಬರಂ ಹಣಕ್ಕೋಸ್ಕರ ಈ ಮಟ್ಟಿಗಿಳಿಯಬಾರದಿತ್ತು. ಅವರ ತಾತ ಅಣ್ಣಾಮಲೈ ಚೆಟ್ಯಾರ್ ಅಣ್ಣಾಮಲೈ ವಿಶ್ವವಿದ್ಯಾಲಯದ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯ ಸ್ಥಾಪಕರೂ ಹೌದು. ಬ್ರಿಟೀಷರಿಂದ ‘ರಾಜಾ’ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದವರು ಅವರು. ಅಂಥ ಪರಿವಾರದಿಂದ ಬಂದ ಚಿದಂಬರಂ ಈ ಮಟ್ಟಕ್ಕೆ ಇಳಿಯುವುದು ಖಂಡಿತ ಒಳಿತಲ್ಲ!

ಏನೇ ಆಗಲಿ, ಭಾರತದಲ್ಲಿ ದೇಶಕ್ಕೆ ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗುತ್ತದೆಂಬ ಭಯ ಹುಟ್ಟುವ ದಿನಗಳು ಆರಂಭವಾಗಿರುವುದು ಸಂತಸದ ಸಂಗತಿ!

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...